ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲಕರ ಘಟ್ಟಕ್ಕೆ ಸರಿಗಮಪ ಲಿಟ್ಲ್ ಚಾಂಪ್ಸ್

By Staff
|
Google Oneindia Kannada News

ಕುತೂಹಲಕರ ಘಟ್ಟಕ್ಕೆ ಸರಿಗಮಪ ಲಿಟ್ಲ್ ಚಾಂಪ್ಸ್ಬೆಂಗಳೂರು, ಫೆ. 7 :ವಾರದಿಂದ ವಾರಕ್ಕೆ ಸಂಗೀತ ಕುತೂಹಲಿಗಳ ಆಸಕ್ತಿ ಕೆರಳಿಸುತ್ತಿರುವ ಜೀ ಕನ್ನಡ ವಾಹಿನಿಯ "ಸರಿಗಮಪ ಲಿಟ್ಲ್ ಚಾಂಪ್ಸ್ ಸ್ಪರ್ಧೆಯ ಫೆಬ್ರುವರಿ 9 ಮತ್ತು 10ರ ಸಂಚಿಕೆಯಲ್ಲಿ ಟಾಪ್ 8ಕ್ಕೆ ಆಯ್ಕೆಯಾಗುವ ಚಿಗುರು ಪ್ರತಿಭೆಗಳು ಯಾರು?

ಸರಿಗಮಪ ಲಿಟ್ಲ್ ಚಾಂಪ್ಸ್ ಸ್ಪರ್ಧೆಗೆ ಕರ್ನಾಟಕದಾದ್ಯಂತ ಆಯ್ಕೆಯಾದ 18 ಪುಟಾಣಿಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಸ್ಪರ್ಧೆ ಈಗ ಟಾಪ್ 8ರ ಹಂತಕ್ಕೆ ಬಂದು ತಲುಪಿದೆ. ಟಾಪ್ 8 ರಲ್ಲಿ ಸಹನಾ ಹೆಗ್ಡೆ, ಓಹಿಲೇಶ್ವರಿ, ಅಜಯ್ ಭಾರದ್ವಾಜ್, ಆದರ್ಶ, ಹಿರಣ್ಮಯಿ, ಸಿದ್ದಾರ್ಥ, ಹಂಸಿನಿ, ಅನಿರುದ್ಧ ಇದ್ದಾರೆ. ಟಾಪ್ 8ರಲ್ಲಿ ಟಾಪ್ 6ಕ್ಕೆ ಆಯ್ಕೆಯಾಗುವವರು ಯಾರು ಎಂಬುದು ಎಲ್ಲರ ಕುತೂಹಲವಾಗಿದೆ.

ಟಾಪ್ 8ರ ಆಯ್ಕೆಯ ಶನಿವಾರದ ಸಂಚಿಕೆಗೆ ಖ್ಯಾತ ನಟಿ ಅಭಿನಯ ಶಾರದೆ ಜಯಂತಿ ಹಾಗೂ ಭಾನುವಾರದ ಸಂಚಿಕೆಗೆ ನಟ ಆದಿ ಲೋಕೇಶ್ ವಿಶೇಷ ತೀರ್ಪುಗಾರರಾಗಿದ್ದಾರೆ.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X