• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ಣದನಿ ಯುವ ಸಂಗೀತಪ್ರೇಮಿಗಳ ಭಾವಲಹರಿ

By Staff
|

Poorna dani audio launchಬೆಂಗಳೂರು, ಮಾ 16 : ನಗರದ ಮಲ್ಲೇಶ್ವರದಲ್ಲಿ ಮಾರ್ಚ್ 16 ರಂದು ಲಹರಿ ಸಂಸ್ಥೆ ವತಿಯಿಂದ 'ಪೂರ್ಣದನಿ' ಎಂಬ ಹೊಚ್ಚ ಹೊಸ ಭಾವ ಗೀತೆಗಳಅಡಿಯೋ ಕ್ಯಾಸೆಟ್ ಬಿಡುಗಡೆಗೊಳ್ಳಲಿದೆ.

ಸಂಪೂರ್ಣ ಆರ್ಟ್ ಫ್ಯಾಕ್ಟರಿ ಎಂಬ ಉತ್ಸಾಹಿ ತರುಣರ ತಂಡ ಹೊರತರುತ್ತಿರುವ ಈ ಧ್ವನಿ ಸುರಳಿಯಲ್ಲಿ 7 ಹಾಡುಗಳಿದ್ದು, ಇದಕ್ಕೆ ತಂಡದ ಸದಸ್ಯರೇ ಸಾಹಿತ್ಯ , ಸಂಗೀತವನು ಒದಗಿಸಿ ಹಾಡಿರುವುದು ವಿಶೇಷ. ಕನ್ನಡದಲ್ಲಿ ರಾಕ್, ಪಾಪ್ ,ಜಾಜ್ ಸಂಗೀತದ ಹಾಡುಗಳನ್ನು ಹಾಡುವ ತಂಡಗಳು ಇತ್ತೀಚೆಗೆ ಹುಟ್ಟುಕೊಳ್ಳುತ್ತಿರುವ ಬೆನ್ನಲ್ಲೇ ಸಂಪೂರ್ಣ ಆರ್ಟ್ ಫ್ಯಾಕ್ಟರಿಯಿಂದ 'ಪೂರ್ಣ ದನಿ' ಎಂಬ ಸರಳ ಹಾಡುಗಳ ಸುಗುಮ ಸಂಗೀತ ಹೊರಹೊಮ್ಮುತ್ತಿರುವುದು ಉತ್ತಮ ಬೆಳವಣಿಗೆ.

ಸಂಪೂರ್ಣ ಆರ್ಟ್ ಫ್ಯಾಕ್ಟರಿಯ ಸದಸ್ಯರಲ್ಲಿ ಎಲ್ಲಾ ಬಗೆಯ ಕ್ಷೇತ್ರದ ಯುವಕರನ್ನು ಕಾಣಬಹುದಾಗಿದೆ. ನಮ್ಮಲ್ಲಿ ಇಂಜಿನಿಯರ್ ಗಳು, ವೈದ್ಯರು, ಎಂಬಿಎ ಮಾಡಿದವರು ಹೀಗೆ ನಾನಾ ಕ್ಷೇತ್ರದವೃತ್ತಿಪರರು ಇದ್ದಾರೆ. ಆದರೆ ನಾವೆಲ್ಲ ಇಲ್ಲಿ ಒಟ್ಟಾಗಲು ಕಾರಣ ಸಂಗೀತ ಕ್ಷೇತ್ರ. ನಮ್ಮಲ್ಲಿರುವ ಕಲೆಯನ್ನು ಹೊರಹೊಮ್ಮಿಸಲು ಸೂಕ್ತವಾದ ವೇದಿಕೆ ನಿರ್ಮಾಣ ಮಾಡಿಕೊಂಡು ಈ ಕ್ಯಾಸೆಟ್ ಹೊರತರುತ್ತಿದ್ದೇವೆ ಎನ್ನುತ್ತಾರೆ ಸಾಹಿತಿ ಶ್ರೀವತ್ಸ ಪ್ರಹ್ಲಾದ.

ಜಿತೇಂದ್ರ ಎಂ.ಎಸ್ ಅವರು ಸಂಯೋಜಿಸಿರುವ ಭಾವಗೀತೆಗಳಿಗೆ ರವಿ.ಕೆ.ಬಾಲಾಜಿ ಟಿ.ಎಸ್. ಶ್ರೀಕಾಂತ ಅವರುಗಳು ವಾದ್ಯ ಸಹಕಾರ ನೀಡಿದ್ದಾರೆ.ಸಂಜೆ 6 ಕ್ಕೆ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿನ ಟೆಂಪ್ಟೇಷನ್ ಮಳಿಗೆ ಬಳಿ ಬಂದರೆ 'ಪೂರ್ಣದನಿ' ಧ್ವನಿಸುರಳಿ ಅನಾವರಣ ಸಮಾರಂಭ ನೋಡಬಹುದು. ಹೊಸ ಪೀಳಿಗೆಯ ಭಾವಗೀತೆಗಳ ಸಿಡಿ ಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ : ಸಂಪೂರ್ಣ ಆರ್ಟ್ ಫ್ಯಾಕ್ಟರಿ ಗೆ

(ದಟ್ಸ್ ಕನ್ನಡಸಿನಿವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more