ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯೋತ್ಸವ ಕವಿ ನಿಸಾರರ ಹಾಡುಗಳಿಗೆ ಬಹಿಷ್ಕಾರ

By Staff
|
Google Oneindia Kannada News

Padmashree NisarAhmed under rough weatherಬೆಂಗಳೂರು, ಮಾ3: ಕನ್ನಡದ ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹಮದ್ ಅವರಗೀತೆಗಳ ಹಾಡುಗಾರಿಕೆಗೆ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಬಹಿಷ್ಕಾರ ಹಾಕಿದೆ.ಶನಿವಾರ ನಡೆದ ಒಕ್ಕೂಟದ ಪ್ರಥಮ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಒಕ್ಕೂಟಕ್ಕೆ ಸೇರಿದ 22 ಸಂಘಗಳು ನಿಸಾರ್ ಅವರ ಹಾಡುಗಳನ್ನು ಹಾಡಬಾರದು ಎಂದು ಒಕ್ಕೂಟದ ಅಧ್ಯಕ್ಷ ಎಚ್ .ಫಲ್ಗುಣ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಮೊದಲನೇ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕವಿ ನಿಸಾರ್ ಅಹಮದ್ ಮತ್ತು ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರಿಗೆ ಅಭಿನಂದನೆ ಹಾಗೂ ಗೀತಗಾಯನ ಅಂದಿನ ಕಾರ್ಯಕ್ರಮದ ವಿಶೇಷವಾಗಿತ್ತು. ಆದರೆ ಕಾರ್ಯಕ್ರಮಕ್ಕೆ ನಿಸಾರ್ ಅಹಮದ್ ಅವರು ಹಾಜರಾಗದೆ , ಕರೆಯಲು ಹೋದ ಕಲಾವಿದರನ್ನು ಅಪಮಾನಮಾಡಿದ್ದಾರೆ. ಒಕ್ಕೂಟವನ್ನು ಭೇಷರತ್ ಕ್ಷಮೆ ಕೇಳುವ ತನಕ ಅವರ ಹಾಡುಗಳನ್ನು ಒಕ್ಕೂಟದ ಸದಸ್ಯರು ಹಾಗೂ ಸಂಗೀತ ಶಾಲೆಗಳಲ್ಲಿ ಹಾಡುವುದನ್ನು ಬಹಿಷ್ಕರಿಸಲಾಗಿದೆ ಎಂದು ಎಚ್ ಫಲ್ಗುಣ ತಿಳಿಸಿದರು.

ಘಟನೆ ಹಿನ್ನೆಲೆ:
ಫೆ.24 ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಾ.1 ಕ್ಕೆ ಮುಂದೂಡಿದ ನಂತರ, ನಿಸಾರ್ ಅವರಿಗೆ ಒಕ್ಕೂಟದಿಂದ ಕರೆ ಮಾಡಿದಾಗ, 'ಯಾರಿಗೆ ಸನ್ಮಾನ ಮಾಡುತ್ತೀರಿ, ಇದು ಯಾವ ದರಿದ್ರ, ನಾನ್ ಸೆನ್ಸ್ ಒನ್ ಟು ಒನ್ ಸನ್ಮಾನ ರೀ? ' ಎಂದು ನಿಸಾರ್ ಉತ್ತರಿಸಿದರು. ನಂತರ ಅವರ ಮನೆಗೆ ತೆರಳಿ ಈ ಬಗ್ಗೆ ಕೇಳಿದಾಗ 'ನಿಮ್ಮ ಕಾರ್ಯಕ್ರಮಕ್ಕೆ ನಾನು ಬರಲ್ಲ; ಎದ್ದೇಳಿ; ಹೋಗ್ರಿ ಆಚೆಗೆ' ಎಂದು ಹೀಯಾಳಿಸಿ ಕಳಿಸಿದರು ಎಂದು ಫಲ್ಗುಣ ಆರೋಪಿಸಿದ್ದಾರೆ.ಅನಾರೋಗ್ಯದ ನೆಪವೊಡ್ಡಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ನಿಸಾರ್ ಅವರು ಆರೋಗ್ಯವಾಗೇ ಇದ್ದಾರೆ ಎಂದು ಫಲ್ಗುಣ ಅವರು ಶನಿವಾರ ನಡೆದ ಸಮಾರಂಭದಲ್ಲಿ ಭಾಷಣ ಮಾಡುತ್ತಾ ಹೇಳಿದರು.

ಇದಕ್ಕೆ ಪ್ರತಿಯಾಗಿ ಪ್ರೇಕ್ಷಕರಲ್ಲಿ ಕೂತಿದ್ದ ಮಹಿಳೆಯೊಬ್ಬರು ನಿಸಾರ್ ಅವರನ್ನು ಅವಹೇಳನ ಮಾಡದಂತೆ ಕೇಳಿಕೊಂಡು ಕಣ್ಣೀರಿಡುತ್ತಾ, ಸಮಾರಂಭದಿಂದ ಹೊರಗೆ ನಡೆದ ಘಟನೆ ನಡೆದಿದೆ. ನಿಸಾರ್ ಅವರು ಶನಿವಾರ ರವಿ ಬೆಳಗೆರೆ ಅವರ ಭಾವನ ಪ್ರಕಾಶನ ಹೊರತಂದಿರುವ ಖಾಸ್ ಬಾತ್ 2002 ಹಾಗೂ ಚಲಂ ಕೃತಿಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ದಿನಪತ್ರಿಕೆಯೊಂದು ವರದಿ ಮಾಡಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X