• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರಿನಲ್ಲಿ ಕೋಗಿಲೆ ಹಾಡಿದೆ ಕೇಳಿದೆಯಾ?

By Staff
|

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕೋಗಿಲೆಗಳ ಕಲರವ. ರಾಜ್ಯಮಟ್ಟದ ಸುಗಮ ಸಂಗೀತ ಸ್ಪರ್ಧೆಯಲ್ಲಿ ಪಾಲ್ಗೊಂಡ ಕೋಗಿಲೆಗಳ ಉತ್ಸಾಹ, ಪ್ರತಿಭೆ, ಸಾಧನೆ ನಿಜಕ್ಕೂ ಸರ್ವಮಾನ್ಯ.

  • ಮುಳಿಯ ರಾಘವಯ್ಯ, ಮೈಸೂರು

ಮೈಸೂರಿನ ಸುಪ್ರಸಿದ್ಧ ಸುಗಮ ಸಂಗೀತ ಅಕಾಡೆಮಿ, ರಾಜ್ಯಮಟ್ಟದ ಹದಿಮೂರನೆಯ ಸಂಗೀತಸ್ಪರ್ಧೆಯನ್ನು ಮೈಸೂರಿನ ರೋಟರಿ ಪಶ್ಚಿಮ ಸಂಘದ ಸಹಯೋಗದೊಂದಿಗೆ ಸೆಪ್ಟೆಂಬರ್ 30ರಂದು ಯಶಸ್ವಿಯಾಗಿ ನಡೆಸಿತು. ಕರ್ನಾಟಕದ ಮೂಲೆಮೂಲೆಗಳ ಉತ್ಸಾಹೀ ಉದಯೋನ್ಮುಖ ಸುಗಮಸಂಗೀತ ಗಾಯಕರು ಭಾಗವಹಿಸಿದ್ದ ಈ ಸ್ಪರ್ಧೆಯ ಫಲಿತಾಂಶ, ಈಗ ಲಭ್ಯ. ಬಹುಮಾನ ವಿತರಣೆ ಸಮಾರಂಭ ಮೈಸೂರಿನ ನಾದಬ್ರಹ್ಮಸಭಾದ ಮೈಸೂರು ವಾಸುದೇವಾಚಾರ್ಯ ಭವನದಲ್ಲಿ ಇದೇ ಅಕ್ಟೋಬರ್ 6ರ ಶನಿವಾರ ಸಂಜೆ ನಡೆಯಿತು.

ಪ್ರಶಸ್ತಿ ವಿಜೇತರ ವಿವರ :

(ಕ) ವಯೋವಿಭಾಗ 8ರಿಂದ 12

ಮೊದಲನೆಯ ಬಹುಮಾನ: ಕೆ.ಶ್ರೇಯಾ, ಮೈಸೂರು

ಎರಡನೆಯ ಬಹುಮಾನ: ವೈಷ್ಣವಿ ದತ್ತ, ಮೈಸೂರು

ಮೂರನೆಯ ಬಹುಮಾನ: ಹಂಸಿನಿ ಎಸ್. ಕುಮಾರ್, ಮೈಸೂರು

ನಾಲ್ಕನೆಯ ಬಹುಮಾನ: ಅಶ್ವಿನ್ ಶರ್ಮ, ಬೆಂಗಳೂರು

ಐದನೆಯ ಬಹುಮಾನ: ನವನೀತ ಕೃಷ್ಣ, ಮೈಸೂರು

(ಖ) ವಯೋವಿಭಾಗ 13ರಿ೦ದ 18

ಮೊದಲನೆಯ ಬಹುಮಾನ: ಅಂಜಲಿ ವಿ, ಭಟ್, ಮೈಸೂರು

ಎರಡನೆಯ ಬಹುಮಾನ: ಟಿ. ಎನ್. ಅಶ್ವಿನಿ, ಮೈಸೂರು

ಮೂರನೆಯ ಬಹುಮಾನ: ಎಚ್. ಪಿ. ವಿಜಯೇಂದ್ರರಾವ್. ಮೈಸೂರು

ನಾಲ್ಕನೆಯ ಬಹುಮಾನ: ಎ. ಜೆ. ದಿವ್ಯಾ, ಹೆಗ್ಗಡದೇವನ ಕೋಟೆ

(ಗ)ವಯೋವಿಭಾಗ 19ರಿಂದ 29

ಮೊದಲನೆಯ ಬಹುಮಾನ: ಶಾಲೋಂ ಸನ್ನುತ, ಮೈಸೂರು

ಎರಡನೆಯ ಬಹುಮಾನ: ಶಿಲ್ಪಶ್ರೀ, ಮೈಸೂರು

ಮೂರನೆಯ ಬಹುಮಾನ: ಎ. ಎಸ್. ನಾಗರತ್ನ, ಕೊಪ್ಪ, ಶೃಂಗೇರಿ

ವಿಶೇಷ ಬಹುಮಾನ: ಚ೦ದ್ರಮೌಳಿ, ಮೈಸೂರು

(ಘ)ವಯೋವಿಭಾಗ 30ರಿಂದ 39

ಮೊದಲನೆಯ ಬಹುಮಾನ: ಮಮತಾ ರವೀಂದ್ರ, ಮೈಸೂರು

ಎರಡನೆಯ ಬಹುಮಾನ: ಕಾತ್ಯಾಯಿನಿ ಪ್ರಮೋದ್, ಸಂತೇಮಾರನಹಳ್ಳಿ, ಚಾಮರಾಜನಗರ

ಮೂರನೆಯ ಬಹುಮಾನ: ಮಾಲತಿ ದೀಪಕ್, ಮೈಸೂರು

(ಙ) ವಯೋವಿಭಾಗ 40ಕ್ಕೆ ಮೇಲ್ಪಟ್ಟು

ಮೊದಲನೆಯ ಬಹುಮಾನ: ಜೆ. ಮಣಿಕರ್ಣಿಕಾ, ಮೈಸೂರು

ಎರಡನೆಯ ಬಹುಮಾನ: ಉಮಾ ವಿಶ್ವನಾಥ್, ಬೆಂಗಳೂರು

ಮೂರನೆಯ ಬಹುಮಾನ: ಮೀರಾ ಶ್ರೀಕಾಂತ್, ಮೈಸೂರು

ಮೂರನೆಯ ಬಹುಮಾನ: ಸರಸ್ವತಿ ಮೋಹನ್, ಮೈಸೂರು

ಮೈಸೂರಿನಲ್ಲಿ ಕೋಗಿಲೆ ಹಾಡಿದೆ ಕೇಳಿದೆಯಾ?ಸಮಾರಂಭದ ಪೂರ್ವಾರ್ಧದಲ್ಲಿ ಬೆಂಗಳೂರಿನಿಂದ ಆಗಮಿಸಿದ ಪಿ ಎ ಮಂಗಳಾ ಮತ್ತು ರವಿ ಕೃಷ್ಣಮೂರ್ತಿ ಅವರಿಂದ ಸುಗಮ ಸಂಗೀತ ಗಾಯನ ಕಛೇರಿ ಏರ್ಪಡಿಸಲಾಗಿತ್ತು. ಇದಕ್ಕೆ ಮೊದಲು ಮೈಸೂರು ನಗರಪಾಲಿಕೆಯ ಮಾಜಿ ಮಹಾಪೌರರಾದ ಮೋದಾಮಣಿ ಅವರು ಸುಗಮ ಸಂಗೀತ ಗಾಯಕರ ಪರಿಚಯ ಮಾಡಿಕೊಟ್ಟರು. ಮಂಗಳಾ ಅವರ ಜೊತೆಯಲ್ಲಿ ಹಾಡಿದ ಅವರ ಪತಿ ರವಿ ಕೃಷ್ಣಮೂರ್ತಿಯವರು ವಿಪ್ರೋ ಕಂಪ್ಯೂಟರ್ ಕಂಪನಿಯಲ್ಲಿ ಇಂಜನಿಯರ್ ಆಗಿದ್ದಾರೆ. ಇವರು ರಾಜು ಅನಂತ ಸ್ವಾಮಿಯವರ ಶಿಷ್ಯರು. ಈ ದಂಪತಿಗಳ ಸುಮಧುರ ಗಾಯನಕ್ಕೆ ಪಕ್ಕವಾದ್ಯಗಳೊಂದಿಗೆ ಸಹಕರಿಸಿದವರು- ಕೀ ಬೋರ್ಡ್ ನಲ್ಲಿ ಉದಯಕಿರಣ, ತಬಲಾದ ಮೇಲೆ ಇಂದುಶೇಖರ್ ಮತ್ತು ಮಂಡೋಲಿನ್‌ನಲ್ಲಿ ವಿಶ್ವನಾಥ್.

ಪ್ರಾಸ್ತಾವಿಕ ಭಾಷಣ ಮಾಡುತ್ತ, ಅಕಾಡೆಮಿಯ ಉಪಾಧ್ಯಕ್ಷರಾದ ಎಚ್. ಆರ್. ಲೀಲಾವತಿ ಅವರು ಅಕಾಡಮಿಯ ಧ್ಯೇಯೋದ್ದೇಶಗಳನ್ನು ಸಭೆಗೆ ವಿವರಿಸಿದರು. ಸುಗಮ ಸಂಗೀತದ ಕ್ಷೇತ್ರದಲ್ಲಿನ ಹತ್ತಾರು ಯೋಜನೆಗಳನ್ನು, 1985ರಲ್ಲಿ ದಿವಂಗತ ರಘುರಾಂ ಅವರ ಆಶೋತ್ತರಗಳ ಪ್ರತಿಬಿಂಬವಾಗಿ ಸ್ಥಾಪನೆಗೊಂಡ ಈ ಸುಗಮಸಂಗೀತ ಪ್ರತಿಷ್ಠಾನವು ಒಂದೊಂದಾಗಿ ಕಾರ್ಯರೂಪಕ್ಕೆ ತರುತ್ತಿರುವುದನ್ನು ವಿವರಿಸಿದರು.

ಮುಖ್ಯ ಅತಿಥಿಗಳಾದ ರೊಟೇರಿಯನ್ ಅಲೆಕ್ಸಾಂಡರ್ ವಿನ್‌ಸೆಂಟ್ ಅವರ ಪರಿಚಯವನ್ನು ಪ್ರತಿಷ್ಠಾನದ ಸಕ್ರಿಯ ಧರ್ಮದರ್ಶಿಗಳೂ ಆದ ಮುಳಿಯ ರಾಘವಯ್ಯ ಅವರು ಮಾಡಿಕೊಟ್ಟರು. ಉದಾರದಾನಿಗಳಾದ ರೊಟೇರಿಯನ್ ಅಲೆಕ್ಸಾಂಡರ್ ವಿನ್‌ಸೆಂಟ್ ಅವರು ತಮ್ಮ ಭಾಷಣದಲ್ಲಿ, ಸುಗಮ ಸಂಗೀತ ಅಕಾಡೆಮಿಯ ಚಟುವಟಿಕೆಗಳನ್ನು ಮನಸಾರೆ ಮೆಚ್ಚಿ ಮಾತನಾಡಿದರು. ಅದಕ್ಕೆ ವೈಯಕ್ತಿಕವಾಗಿಯೂ, ರೋಟರಿ ಸಂಸ್ಥೆಯ ವತಿಯಿಂದಲೂ ಸಹಾಯ ಹಸ್ತವನ್ನು ನಿರಂತರ ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷರಾದ ರೊಟೇರಿಯನ್ ಕೆ. ವಿ. ಮೂರ್ತಿಯವರು ವಹಿಸಿಕೊಂಡಿದ್ದರು. ಅವರನ್ನು ಅಕಾಡೆಮಿಯ ಖಜಾಂಚಿಗಳಾದ ಡಾ. ಆರ್. ವಾಸುದೇವ್ ಅವರು ಸಭೆಗೆ ಪರಿಚಯಿಸಿದರು. ರೊಟೇರಿಯನ್ ಕೆ. ವಿ. ಮೂರ್ತಿಯವರು ಮಾತನಾಡುತ್ತಾ, ಸುಗಮಸಂಗೀತ ಅಕಾಡೆಮಿಗೆ ಎಲ್ಲರ ಸಹಕಾರವನ್ನು ಕೋರಿದರು. ಅಕಾಡೆಮಿಯು ಸಧ್ಯದಲ್ಲೇ ರಜತ ಮಹೋತ್ಸವವನ್ನು ಆಚರಿಸಲಿದೆ. ಆ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಯೋಜಿಸುತ್ತಲಿದೆ. ಅವಕ್ಕೆ ಪೂರ್ಣ ಬೆಂಬಲವನ್ನು ರಸಿಕರೂ ಅಭಿಮಾನಿಗಳೂ ಇತ್ತು ಕೈಗೂಡಿಸಬೇಕೆಂದು ಅವರು ಮನವಿ ಮಾಡಿದರು.

ಶ್ರೀದೇವಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದ ಮೊದಲಲ್ಲಿ ಅಕಾಡೆಮಿಯ ಗೌ. ಕಾರ್ಯದರ್ಶಿಗಳಾದ ಶಿಕಾರಿಪುರ ಹರಿಹರೇಶ್ವರ ಅವರು ಸಭಿಕರನ್ನೂ, ಅತಿಥಿಗಳನ್ನೂ ಸ್ವಾಗತಿಸಿ, ಸ್ಪರ್ಧೆಯ ವಿವರಗಳನ್ನು ಸ೦ಕ್ಷಿಪ್ತವಾಗಿ ನಿವೇದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ರೇಖಾ ವೆಂಕಟೇಶ್ ಅವರು ಸಮರ್ಥವಾಗಿ ನಿರ್ವಹಿಸಿದರು. ಸುಗಮ ಸಂಗೀತ ಅಕಾಡೆಮಿ ಪ್ರತಿಷ್ಠಾನದ ಧರ್ಮದರ್ಶಿಗಳೂ, ಹೆಸರಾಂತ ರಂಗಕರ್ಮಿಗಳೂ ಆದ ಡಾ.ಎಚ್. ಕೆ. ರಾಮನಾಥ್ ಅವರು ವಂದಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X