ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ. 26ಕ್ಕೆ ಬೆಂಗಳೂರಲ್ಲಿ ಸೊಪೋರಿ ಸಂತೂರ್‌ ವಾದನ

By Staff
|
Google Oneindia Kannada News

Bhajan Saporiಬೆಂಗಳೂರು : ಈ ಬಾರಿ ಗಣ ರಾಜ್ಯೋತ್ಸವದ ದಿನದ ಮುಂಜಾನೆಗೆ ನಗರದಲ್ಲಿ ಸಂಗೀತದ ಬಣ್ಣ. ಜನವರಿ 26ರಂದು ಬೆಳಗ್ಗೆ 6.45 ಗಂಟೆಗೆ ಸರಿಯಾಗಿ ಚಿತ್ರಕಲಾ ಪರಿಷತ್‌ಗೆ ಬನ್ನಿ. ಸುಪ್ರಸಿದ್ಧ ಸಂತೂರ್‌ ವಾದಕ ಪಂಡಿತ್‌ ಭಜನ್‌ ಸೊಪೋರಿ ಉದಯ ರಾಗ ಹೊಮ್ಮಿಸುವರು.

ಯಾರೀ ಭಜನ್‌ ಸೊಪೋರಿ?
ಮೂಲತಃ ಕಾಶ್ಮೀರದವರಾದ ಭಜನ್‌ ಸೊಪೋರಿ ಸಂತೂರ್‌ ವಾದ್ಯದ ಮೂಲಕ ಸಂಗೀತ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಉರ್ದು, ಹಿಂದಿ, ಕಾಶ್ಮೀರಿ, ಗುಜರಾತಿ, ಭೋಜ್‌ಪುರಿ, ಹಿಮಾಚಲ, ರಾಜಾಸ್ತಾನಿ, ಪಂಜಾಬಿ ಹಾಗೂ ತೆಲುಗು ಭಾಷೆಗಳ ಸುಮಾರು 4 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸೊಪೋರಿ ಮಟ್ಟುಗಳನ್ನು ಹಾಕಿದ್ದಾರೆ. ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನೂ ಅಧ್ಯಯನ ಮಾಡಿರುವ ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದೆಹಲಿ ತೆಲುಗು ಅಕಾಡೆಮಿ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, ದೆಹಲಿ ರತ್ನ ಪ್ರಶಸ್ತಿ- ಇವು ಸಂದಿರುವ ಪ್ರಶಸ್ತಿಗಳಲ್ಲಿ ಮುಖ್ಯವಾದವು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X