ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ಮೊದಲುಗಳ‘ದಿ ಮ್ಯೂಸಿಕ್‌ ಮಿಂಟ್‌’

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

Shubha Mudgalಹಲವು ಮೊದಲುಗಳನ್ನು ಒಳಗೊಂಡಿರುವ, ಹಾಕಿದ ಮಟ್ಟುಗಳನ್ನು ಸುರುಳಿಗೆ ಅಚ್ಚುಕಟ್ಟಾಗಿ ತುಂಬಿಕೊಳ್ಳಬಲ್ಲ ಸಕಲ ಸವಲತ್ತುಗಳಿರುವ ಧ್ವನಿಗ್ರಾಹಕ ಸ್ಟುಡಿಯೋ ಮ್ಯೂಸಿಕ್‌ ಮಿಂಟ್‌. ಬೆಂಗಳೂರಿನಲ್ಲಿ ಇದು ತಣ್ಣಗೆ ಕೆಲಸ ಶುರುವಿಟ್ಟುಕೊಂಡು ಒಂದೂವರೆ ವರ್ಷ ಕಳೆದಿದೆ. ಜನವರಿ 17ನೇ ತಾರೀಕು ಸಂಜೆ 5 ಗಂಟೆಗೆ ಹೆಸರಾಂತ ಗಾಯಕಿ ಶುಭ ಮುದಗಲ್‌ ಈ ಸ್ಟುಡಿಯೋವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಲಹರಿ ರೆಕಾರ್ಡಿಂಗ್‌ ಕಂಪನಿಯ ವೇಲು ಕಾರ್ಯಕ್ರಮದ ವಿಶೇಷ ಅತಿಥಿ.

ಶುಭ ಮುದಗಲ್‌- ಒಂದು ಟಿಪ್ಪಣಿ
ಖಯಾಲ್‌ ಮತ್ತು ಠುಮ್ರಿ ಹಾಡುಗಾರ್ತಿಯಾಗಿ ಮನೆಮಾತಾಗಿರುವ ಶುಭ ಮುದಗಲ್‌ ಇಂಡಿಪಾಪ್‌ ಗಾಯನದಲ್ಲಿ ಮೈಲುಗಲ್ಲು ನೆಟ್ಟವರು. ಶಾಸ್ತ್ರೀಯ ಮತ್ತು ಜನಪ್ರಿಯ ಸಂಗೀತ- ಎರಡರಲ್ಲೂ ತಮ್ಮ ಛಾಪು ಒತ್ತಿರುವ ಈಕೆ ಅಪರೂಪದ ಸಂಗೀತಗಾರ್ತಿಯೂ ಹೌದು. ಆಧ್ಯಾತ್ಮಿಕ ಕಾವ್ಯ, ಅದರಲ್ಲೂ ವಿಶೇಷವಾಗಿ ಮೀರಾ ಅಂದರೆ ಈಕೆಗೆ ತುಂಬಾ ಇಷ್ಟ. ಸಂಗೀತದ ಬಗ್ಗೆ ಬರೆಯುವುದು ತುಡಿತ. ‘ವರ್ಸಟೈಲ್‌ ಶುಭ ಮುದಗಲ್‌’, ‘ಅಬ್‌ ಕೆ ಸಾವನ್‌’ ಹಾಗೂ ‘ಮನ್‌ ಕೆ ಮಂಜೀರೆ’- ಶುಭ ಅವರಿಗೆ ಹೆಸರು ತಂದುಕೊಟ್ಟಿರುವ ಗಾನ ಸಂಗ್ರಹಗಳು. ಸಿನಿಮಾಗಳಿಗೂ ಮುದಗಲ್‌ ಹಾಡಿದ್ದಾರೆ. ಅಮಿತಾಬ್‌ ಬಚ್ಚನ್‌ ಅಭಿನಯಿಸಿದ್ದ ‘ಅಕ್ಸ್‌’ ಚಿತ್ರದ ಹಾಡು ಇದಕ್ಕೊಂದು ಉದಾಹರಣೆ.

‘ಲಹರಿ’ಯ ವೇಲು
ಕೇವಲ 500 ರುಪಾಯಿ ಬಂಡವಾಳ ಹಾಕಿ 1980ರಲ್ಲಿ ಸೋದರ ಶುರು ಮಾಡಿದ ಕೆಸೆಟ್‌ ಕಂಪನಿ ಲಹರಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವ ವೇಲು ಇತರೆ ಕೆಸೆಟ್‌ ಉದ್ಯಮಿಗಳಿಗಿಂತ ಭಿನ್ನ ಅಭಿರುಚಿ ಉಳ್ಳವರು. ಈವರೆಗೆ ಕಂಪನಿ 10 ಸಾವಿರ ಕೆಸೆಟ್‌/ಸಿ.ಡಿ.ಗಳನ್ನು ಹೊರತಂದಿದೆ. ಸಿನಿಮಾ ಹಾಡು, ಭಕ್ತಿ ಗೀತೆ, ಶಾಸ್ತ್ರೀಯ ಸಂಗೀತ, ಭಾವ ಗೀತೆ ಮೊದಲಾದ ಪ್ರಕಾರಗಳ ಬಹು ಭಾಷಾ ಸಂಗೀತವನ್ನು ಜನರಿಗೆ ಮುಟ್ಟಿಸಿರುವ ಕಂಪನಿ ಲಹರಿ. ಹೊಸಬರಿಗೆ ಸದಾ ಬೆನ್ನು ತಟ್ಟುವ ಜಾಯಮಾನದವರು ವೇಲು. ಮರೆಗೆ ಸರಿದಿದ್ದ ಹಳೆಯ ಭಾವಗೀತೆಗಳನ್ನು ‘ಎಂಎಸ್‌ಐಎಲ್‌ ಗೀತೆಗಳ’ ರೂಪದಲ್ಲಿ ಹೊರತಂದ ವಿಕ್ರಮವೇ ವೇಲು ಸಾಧನೆಗೆ ಹಿಡಿದ ಕನ್ನಡಿ.

ಮಟ್ಟು ಹಾಕಿ, ಹಾಡು ಮುದ್ರಿಸಿಕೊಳ್ಳಬೇಕೆ; ಮ್ಯೂಸಿಕ್‌ ಮಿಂಟ್‌ಗೆ ಬನ್ನಿ
ಹಾಲಿವುಡ್‌ನ ಎಂಜಿಎಂ ಸ್ಟುಡಿಯೋಸ್‌ನ ಮಾಜಿ ಮುಖ್ಯ ಎಂಜಿನಿಯರ್‌ ಲಾಸನ್‌ ಧ್ವನಿ ತಂತ್ರದ ವಿನ್ಯಾಸದಲ್ಲಿ ರೂಪಿತವಾಗಿರುವ ಬೆಂಗಳೂರಿನ ಏಕೈಕ ಧ್ವನಿ ಗ್ರಾಹಕ ಸ್ಟುಡಿಯೋ ಮ್ಯೂಸಿಕ್‌ ಮಿಂಟ್‌. ಭಾರತದ ಹೆಸರಾಂತ ಧ್ವನಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕಲಿತು ಬಂದಿರುವ ಕಸುಬುದಾರ ಧ್ವನಿ ಎಂಜಿನಿಯರ್‌ ಇಲ್ಲಿ ಸದಾ ಲಭ್ಯ. ಕರೆಂಟು ಕೈಕೊಟ್ಟರೂ ಕೆಲಸ ಮೊಟಕಾಗದು; ಯಾಕೆಂದರೆ ಇಲ್ಲಿ ಯುಪಿಎಸ್‌ ಉಂಟು. ಸಂಪೂರ್ಣ ಹವಾ ನಿಯಂತ್ರಿತ ಸ್ಟುಡಿಯೋದಲ್ಲಿ ತಣ್ಣನೆಯ ಸಂಗೀತದ ಸಂಗಾತ. ನೀವು ಬಯಸಿದರೆ ಕಲಾವಿದರ ಫೋಟೋ ತೆಗೆಯಲು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಚಿತ್ರಗಾರರೂ ಲಭ್ಯ.

ಮ್ಯೂಸಿಕ್‌ ಮಿಂಟ್‌ನ ಧ್ವನಿ ತಂತ್ರಜ್ಞಾನ ಹೇಗೆ ಸುಸಜ್ಜಿತ ಅನ್ನುವುದಕ್ಕೆ ಈ ಸೌಕರ್ಯಗಳೇ ಸಾಕ್ಷಿ-Pro Tools hard disk recording, powered by an Apple G4 computer. Premium range of mics: Neumann, Electro Voice, Sennheiser, AKG and Shure. Highend monitoring speakers and a host of other industrystandard gear.

ಖಾಸಗಿ ಆಲ್ಬಂ, ಟೀವಿ ಧಾರಾವಾಹಿಗಳು, ಸಾಕ್ಷ್ಯಚಿತ್ರ, ಕಿರು ಚಿತ್ರ, ಸಿನಿಮಾ- ಈ ಎಲ್ಲವುಗಳಿಗೆ ಸಂಗೀತ ಹಾಗೂ ಹಿನ್ನೆಲೆ ಸಂಗೀತವನ್ನು ಸ್ಟುಡಿಯೋದಲ್ಲಿ ಮುದ್ರಿಸಿಕೊಳ್ಳಬಹುದು. ಧ್ವನಿ ಡಬ್ಬಿಂಗ್‌ ಕೆಲಸವನ್ನೂ ಮಾಡಿಕೊಳ್ಳಬಹುದು.

Cassette, CD, Hi8, DAT, ADATಯಾವುದೇ ಮಾಧ್ಯಗಳಿಗೆ ಔಟ್‌ಪುಟ್‌ ಕೊಡಲಾಗುತ್ತದೆ. ಮೂಲ ಪ್ರತಿಯಲ್ಲಿ ಅಡಕವಾಗಿರುವ ಸಂಗೀತವನ್ನು ಸಿ.ಡಿ.ಗೆ ವರ್ಗಾಯಿಸುವುದು ಹಾಗೂ ಧ್ವನಿ ತಗ್ಗಿಸುವಿಕೆ ಸೇವೆಯೂ ಲಭ್ಯ.

ಮ್ಯೂಸಿಕ್‌ಮಿಂಟ್‌ ಬಳಗ
2001ನೇ ಇಸವಿಯ ನಡುಘಟ್ಟದಲ್ಲಿ ಕೆಲಸ ಶುರುವಿಟ್ಟ ಮ್ಯೂಸಿಕ್‌ ಮಿಂಟ್‌, ಸರ್‌ಗಮ್‌ ಪಬ್ಲಿಷರ್ಸ್‌ ಅಂಡ್‌ ಮೀಡಿಯಾ ಸರ್ವಿಸಸ್‌ ಲಿಮಿಟೆಡ್‌ನ ಸಬ್ಸಿಡರಿ ಕಂಪನಿ. ಇದರ ಬಳಗದಲ್ಲಿರುವವರೆಲ್ಲಾ ಸಂಗೀತ ಪ್ರೇಮಿಗಳು.

ಬಳಗದ ಸಂಕ್ಷಿಪ್ತ ಪರಿಚಯ ಹೀಗಿದೆ-
ಇನ್ನೂ ತೆರೆ ಕಾಣಬೇಕಿರುವ ‘ಜಯ’ ಕನ್ನಡ ಚಿತ್ರಕ್ಕೆ ಮಟ್ಟು ಹಾಕಿರುವ ಎಸ್‌.ಸುಚಿತ್ರ ಲತಾ ಹಾಗೂ ಎಸ್‌.ಆರ್‌.ರಾಮಕೃಷ್ಣ http://www.themusicmagazine.com ಎಂಬ ಸಂಗೀತಕ್ಕೇ ಮೀಸಲಾದ ವೆಬ್‌ಸೈಟ್‌ ನಡೆಸುತ್ತಿದ್ದಾರೆ. ಸಂಗೀತ ಪ್ರೇಮಿ ಅಶೋಕ್‌ ಧಾರೇಶ್ವರ್‌, ಸಿತಾರ್‌ ಮತ್ತು ಛಾಯಾಗ್ರಹಣದ ಗೀಳು ಹತ್ತಿಸಿಕೊಂಡಿರುವ ಸುಮನ, ಮಲ್ಲಿಕಾರ್ಜುನ ಮನ್ಸೂರರ ಕಟ್ಟಾ ಆರಾಧಕಿ ಸುಗಂಧಿ ರವೀಂದ್ರನಾಥನ್‌, ಗೀತಾ ದತ್‌ ಹಾಡುಗಳ ಅಭಿಮಾನಿ ಹಾಗೂ ಪತ್ರಕರ್ತೆ ಶ್ಯಾಮಲ ರಾವ್‌ (ಅಮೆರಿಕ ನಿವಾಸಿ), ಮಲ್ಯ ಆಸ್ಪತ್ರೆಯ ಮುಖ್ಯ ರೇಡಿಯಾಗ್ರಫರ್‌ ವಿಕ್ಟರ್‌ ರೊಸಾರಿಯಾ ಸೆರವೊ- ಮ್ಯೂಸಿಕ್‌ ಮಿಂಟ್‌ ಕುಟುಂಬದ ಇತರ ಸದಸ್ಯರು. ಚೆನ್ನೈನ ಸ್ಕೂಲ್‌ ಆಫ್‌ ಆಡಿಯೋ ಎಂಜಿನಿಯರಿಂಗ್‌ನಲ್ಲಿ ತರಪೇತಿ ಪಡೆದಿರುವ ಗೋಕುಲ್‌ ಅಭಿಷೇಕ್‌ ಧ್ವನಿ ತಂತ್ರಜ್ಞ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ದಿ ಮ್ಯೂಸಿಕ್‌ ಮಿಂಟ್‌
3, ಅಪರ್ಣಾಲಯ, 36ನೇ ಅಡ್ಡರಸ್ತೆ
26ನೇ ಮೇನ್‌, 9ನೇ ಬ್ಲಾಕ್‌
ಜಯನಗರ, ಬೆಂಗಳೂರು- 560 069
ದೂರವಾಣಿ ಸಂಖ್ಯೆ : 663 8845, 98450 29492
ಇ- ಮೇಲ್‌ :[email protected]

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X