• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಗೀತ ಕೇಳಲಿಕ್ಕೆ ಕೆಲವರಿಗೆ ತ್ರಾಸು ಆಗ್ತದ- ಗಂಗೂಬಾಯಿ ಹಾನಗಲ್‌

By Staff
|

*ಇನ್ಫೋ ಇನ್‌ಸೈಟ್‌

Listening the music is tough for many : Gangubai Hanagalಬೆಂಗಳೂರು : ಸಂಗೀತ ಕೇಳುವುದರಲ್ಲಿ ನಿರುತ್ಸಾಹ ಪ್ರವೃತ್ತಿ ಹೆಚ್ಚುತ್ತಿರುವ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ನಾಡಿನ ಹಿರಿಯ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್‌, ಏನೇ ಆದರೂ ಸಂಗೀತ ಉಳಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ರೆನೆಸಾ ಕಲಾವಿದರ ಮತ್ತು ಬರಹಗಾರರ ಬಳಗ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಆತ್ಮೀಯ ಸನ್ಮಾನ ಸ್ವೀಕರಿಸಿ ಪ್ರತಿಕ್ರಿಯಿಸಿದ ಗಂಗೂಬಾಯಿ- ಸಂಗೀತ ಕೇಳಲಿಕ್ಕೆ ಕೆಲವರಿಗೆ ತ್ರಾಸು ಆಗ್ತದ. ಕೆಲವರಿಗೆ ಸಂಗೀತ ಕೇಳಲು ಟೈಂ ಇಲ್ಲ . ಈ ನಡುವೆಯೂ ಸಂಗೀತ ಉಳಿಯಬೇಕಾಗಿದೆ ಎಂದರು.

ದೊಡ್ಡವರು ಹೇಗೆ ಹಾಡಿದರೂ ಜನ ಸಂಗೀತ ಕೇಳುತ್ತಾರೆ. ಹೊಸಬರು ಚೆನ್ನಾಗಿ ಹಾಡಿದರೂ ಜನ ಕೇಳುವುದಿಲ್ಲ ಎಂದು ಅಭಿಪ್ರಾಯಪಟ್ಟ ಗಂಗೂಬಾಯಿ, ಹೊಸ ಸಂಗೀತಗಾರರನ್ನು ಪ್ರೋತ್ಸಾಹಿಸುವಂತೆ ಸಹೃದಯರಿಗೆ ಕರೆ ನೀಡಿದರು.

ಭಯೋತ್ಪಾದಕತೆಯ ಕರಾಳ ಹಸ್ತಗಳ ಕಪಿ ಮುಷ್ಠಿಯಲ್ಲಿ ಸಿಲುಕಿ ಇಡೀ ವಿಶ್ವವೇ ತಲ್ಲಣಿಸುತ್ತಿರುವ ಸಂದರ್ಭದಲ್ಲಿ ಸಾಹಿತ್ಯ ಸಂಗೀತದ ಮೂಲಕ ಮನುಷ್ಯ ಹೊಸಹುಟ್ಟು ಪಡೆಯಬೇಕಾಗಿದೆ. 19 ನೇ ಶತಮಾನದಲ್ಲಿ ಪಶ್ಚಿಮದ ಸಂಘರ್ಷದ ಮೂಲಕ ಪುನರುಜ್ಜೀವನ ಹೊಂದಿದ್ದ ದೇಶ, ಈಗ ಎರಡನೇ ಪುನರುಜ್ಜೀವನ ಹೊಂದಬೇಕಿದೆ. ಮಾನವತಾ ನಿರ್ಮಾಣದ ಉದ್ದೇಶ ಹೊಂದಿರುವ ಸಾಹಿತ್ಯ ಕಲೆಗಳಿಂದ ಆನಂದದ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕವಿ ಜಿ.ಎಸ್‌.ಶಿವರುದ್ರಪ್ಪ ಹೇಳಿದರು.

ಹಿರಿಯ ಚಿತ್ರ ನಿರ್ದೇಶಕ ಜಿ.ವಿ.ಅಯ್ಯರ್‌ ಅವರು ಗಂಗೂಬಾಯಿ ಹಾನಗಲ್‌ ಅವರನ್ನು ಸನ್ಮಾನಿಸಿದರು.
(ಇನ್ಫೋ ವಾರ್ತೆ)

ವಾರ್ತಾ ಸಂಚಯ

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more