ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದೆ ತುಂಬಿ ಹಾಡುವೆ-ಅಭಿಮಾನಿಗಳಿಗೆ ಬಾಲಮುರಳೀಕೃಷ್ಣ ಸಾಂತ್ವನ

By Staff
|
Google Oneindia Kannada News

ಹಾಡುವುದನ್ನು ಕಡಿಮೆ ಮಾಡಿದ ನಂತರ ಪ್ರಶಸ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿವೆ!

ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್‌ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಎಸ್‌.ವಿ.ನಾರಾಯಣಸ್ವಾಮಿ ರಾವ್‌ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಸಿದ್ಧ ಕರ್ಣಾಟಕ ಸಂಗೀತಗಾರ ಡಾ. ಎಂ.ಬಾಲಮುರಳೀಕೃಷ್ಣ ಸಿಡಿಸಿದ ಜೋಕಿದು.

ಬಾಲಮುರಳೀಕೃಷ್ಣ ಹಾಡುವುದನ್ನು ಕಡಿಮೆ ಮಾಡಿದ್ದಾರೆ ಎನ್ನುವ ಅಭಿಮಾನಿಗಳ ಪ್ರೀತಿಯ ಆಕ್ಷೇಪವನ್ನು ಪ್ರಸ್ತಾಪಿಸಿದ ಅವರು, ಮುಂದಿನ ವರ್ಷ ರಾಮಸೇವಾ ಮಂಡಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ತಾವು 90 ನಿಮಿಷದ ಸಂಗೀತ ಕಚೇರಿ ನಡೆಸಿಕೊಡುವುದಾಗಿ ಆಶ್ವಾಸನೆ ನೀಡಿದರು. ಅನಾರೋಗ್ಯದ ಕಾರಣದಿಂದಾಗಿ ಕಚೇರಿಗಳನ್ನು ಕಡಿಮೆ ಮಾಡಿರುವುದಾಗಿ ಅವರು ಹೇಳಿದರು.

ಕರ್ಣಾಟಕ ಸಂಗೀತ ಜಗತ್ತಿನ ಉಳಿದೆಲ್ಲ ಸಂಗೀತಗಳಿಗೆ ಶಿಖರಪ್ರಾಯವಾದದ್ದು . ಗಾನ ಸರಸ್ವತಿ ಅನುಗ್ರಹಕ್ಕೆ ಪಾತ್ರರಾದವರಲ್ಲಿ ಉತ್ತರ ಭಾರತದವರಿಗಿಂತ ದಕ್ಷಿಣ ಭಾರತದವರೇ ಹೆಚ್ಚು . ಆದರೆ, ಸಂಗೀತಗಾರರಲ್ಲಿ ತಮಿಳಿಗ, ತೆಲುಗ, ಮಲಯಾಳಿ, ಕನ್ನಡಿಗ ಎನ್ನುವ ಭೇದವಿಲ್ಲ . ಎಲ್ಲರೂ ಸಂಗೀತಗಾರರೇ ಎಂದು ಬಾಲಮುರಳೀ ತಮ್ಮ ಸಜ್ಜನಿಕೆಯನ್ನು ಮೆರೆದರು.

ಘಟಾನುಘಟಿ ಸಂಗೀತಗಾರರಿಂದ ಬಹಳಷ್ಟು ಕಲಿತಿರುವುದಾಗಿ ಹೇಳಿಕೊಂಡ ಅವರು, ಅವರ ಸಮಕಾಲೀನರಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ತಮ್ಮ ಇವತ್ತಿನ ಉನ್ನತಿಗೆ ಅನೇಕರು ಕಾರಣರಾಗಿದ್ದು , ಅವರೆಲ್ಲರಿಗೂ ಕೃತಜ್ಞತೆಗಳು ಎಂದು ಭಾವುಕರಾದ ಬಾಲಮುರಳೀ- ಪಿಬರೇ ರಾಮರಸಂ.. ಹಾಡನ್ನು ಸಹೃದಯರ ಒತ್ತಾಯದ ಮೇರೆಗೆ ಹಾಡಿದರು.

ಪ್ರಸಾರ ಭಾರತಿ ಅಧ್ಯಕ್ಷ ಪ್ರೊ.ಯು.ಆರ್‌.ರಾವ್‌ ಅವರು ಬಾಲಮುರಳೀ ಕೃಷ್ಣ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಸಿ.ಎಸ್‌.ಕೇದಾರ್‌ ತ್ರಿವೇಣಿ ಸಂಗಮ ಧ್ವನಿ ಸುರುಳಿ ಬಿಡುಗಡೆ ಮಾಡಿದರು.
(ಇನ್ಫೋ ವಾರ್ತೆ)

Post Your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X