• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಲ್ಲಿ ಹಾಡುವ ಆಸೆ ಈಗಲೂ ಇದೆ- ಪಂಕಜ್‌ ಉದಾಸ್‌

By Staff
|

*ಸಿ.ಎಸ್‌.ಚರಣ್‌

I am happy to sing Kannada Songs : Pankaj Udas‘ಚಿಟ್ಟಿ ಆಯೀ ಹೈ..ವತನ್‌ ಸೆ ಚಿಟ್ಟಿ ಆಯೀ ಹೈ’ ಗೀತೆಯ ಗುನುಗು ಸದಾ ಹಸುರು. ಮನಸನಾಳುವ ಮಾಧುರ್ಯ, ಕಾಲಾತೀತ ಅರ್ಥ- ಇವೆಲ್ಲಾ ಹಾಡಿನ ತಿರುಳಾದರೂ, ಇದು ಹರಳುಗಟ್ಟಲು ಕಾರಣ ಹಿಂದೂಸ್ತಾನಿ ರಾಗಗಳಲ್ಲಿ ಪಳಗಿದ ಒಂದು ಕಂಠ. ಅದು ಪಂಕಜ್‌ ಉದಾಸ್‌ ಅವರದ್ದು.

ಗಝಲ್‌ ಪ್ರೇಮಿಗಳ ಬೇಡಿಕೆಗೆ ಬಹು ವರ್ಷಗಳಿಂದ ಸ್ಪಂದಿಸುತ್ತಿರುವ ಉದಾಸ್‌, ಸ್ಪರ್ಶ ಚಿತ್ರದಲ್ಲಿ ‘ಚೆಂದಕಿಂತ ಚೆಂದ ನೀನೆ ಸುಂದರ’ ಹಾಡಿದಾಗಲೂ ಮನಸಿಗೆ ಹೊಕ್ಕಿತು. ‘ಬರೆಯದ ಮೌನದ ಕವಿತೆ ಹಾಡಾಯಿತು...’ ಕೊಂಚ ಹಿಂದಿ ಆ್ಯಕ್ಸೆಂಟಿನಂತೆ ಕೇಳಿದರೂ ಕನ್ನಡದ ಸಹೃದಯ ಅದನ್ನು ಮೆಚ್ಚಿಕೊಂಡ. ‘ನಾಮ್‌’ ಚಿತ್ರದಿಂದ ಹಿಡಿದು ಇತ್ತೀಚಿನ ಸಿನಿಮಾಗಳಿಗೂ ಹಾಡಿರುವ ಪಂಕಜ್‌ ಉದಾಸ್‌ ತಮ್ಮದೇ ಆದ ಅಭಿಮಾನಿ ಬಳಗ ಕಂಡುಕೊಂಡಿರುವ ಗಾಯಕ.

ಫುಲ್‌ಟೈಂ ಹಿನ್ನೆಲೆ ಗಾಯಕನಾಗದೆ, ಗಝಲ್‌ಗೆ ಮೊರೆಹೋದ ಕೆಲವೇ ಕೆಲವರಲ್ಲಿ ಪಂಕಜ್‌ ಕೂಡ ಒಬ್ಬರು. ಲಮ್ಹಾ, ನಶಾ, ಘೂಂಗಟ್‌, ನಶೀಲಾ, ಜಾನೆಮನ್‌, ಈಚೆಗೆ ಬಿಡುಗಡೆಯಾದ ಲೈಫ್‌ಸ್ಟೋರಿ- ಈ ಎಲ್ಲಾ ಕೆಸೆಟ್ಟುಗಳಲ್ಲಿ ಪಂಕಜ್‌ ಉದಾಸ್‌ರ ಹಿಂದೂಸ್ತಾನಿ ಮಾಧುರ್ಯ ಹಾಸುಹೊಕ್ಕು. ದೇಶ ವಿದೇಶಗಳ ಅಭಿಮಾನಿಗಳಿಗೆ ಸಂಗೀತದೂಟ ಬಡಿಸಿದ ಅನುಭವವಿರುವ ಉದಾಸ್‌ ಮೊನ್ನೆ ಬೆಂಗಳೂರಿಗೆ ಬಂದಿದ್ದರು.

ಅದು ಮಾರ್ಚ್‌ 30. ನೆನಪಿಸಿಕೊಳ್ಳಲೊಂದು ರಾತ್ರಿ ಎಂಬ ಹೆಸರಿನ ಸಂಗೀತ ಕಛೇರಿ ನಡೆಸಿಕೊಡಲು ಬಂದಿದ್ದ ಉದಾಸ್‌ ನಮ್ಮೊಡನೆ ಕೆಲ ಕ್ಷಣ ಕಳೆದರು. ಅವರೊಡನೆ ನಡೆಸಿದ ಮಾತುಕತೆ ಇದೋ ನಿಮ್ಮ ಪಾಲಿಗೆ....

ಅಂದಿನಿಂದ ಇಂದಿನವರೆಗೆ ಗಝಲ್‌ ಜೊತೆಜೊತೆಗೇ ನೀವು ಬೆಳೆದಿದ್ದೀರಿ. ಇತರೆ ಸಂಗೀತ ಪ್ರಕಾರಗಳಿಗೆ ಹೋಲಿಸಿದರೆ, ಗಝಲ್‌ ಯಾವ ಸ್ಥಾನದಲ್ಲಿ ನಿಲ್ಲುತ್ತದೆ?
ಗಝಲ್‌ ಇವತ್ತೂ ಬಹಳ ಒಳ್ಳೆಯ ಸ್ಥಾನದಲ್ಲಿದೆ. ಗಝಲ್‌ ಅಂದರೆ- ಇಂಪಾದ ಸಂಗೀತದಿಂದ ಕೂಡಿರುವ ಕವಿತೆ. ಇಲ್ಲಿ ಶೇರ್‌- ಶಾಯರಿಗೇ ಪ್ರಥಮ ಸ್ಥಾನ. ನಂತರದ್ದು ಅದಕ್ಕೆ ಪೂರಕವಾದ ಸಂಗೀತಕ್ಕೆ. ಎರಡಕ್ಕೂ ಯಾವತ್ತೂ ಬೇಡಿಕೆಯಿರುತ್ತದೆ. ಈಗ್ಗೆ ಎರಡು ವರ್ಷಗಳ ಕೆಳಗೆ ಗಝಲ್‌ ಸಂಗೀತದಲ್ಲೂ ಫ್ಯೂಷನ್‌ ಕಂಡುಬಂತು. ಅದೂ ಕೂಡ ಒಳ್ಳೆಯ ರೀತಿಯಲ್ಲಿ ಬಳಕೆಯಾಯಿತು. ಗಝಲ್‌ ಪ್ರೇಮಿಗಳೂ ಅದನ್ನು ಚೆನ್ನಾಗಿಯೇ ಸ್ವೀಕರಿಸಿದರು. ಇಂತಹ ಹೊಸ ಪ್ರಯೋಗಗಳಲ್ಲಿ ಸಂಗೀತಾಸಕ್ತರು ಸಹಕರಿಸುತ್ತಾರೆ. ಅಭಿಮಾನದಿಂದ ಕೈಹಿಡಿದು ನಡೆಸುತ್ತಾರೆ. ಈ ದೃಷ್ಟಿಯಲ್ಲಿ ಗಝಲ್‌ಗೆ ಯಾವಾಗಲೂ ಒಳ್ಳೆಯ ಸ್ಥಾನ ಇದ್ದೇ ಇರುತ್ತದೆ.

ಯಾವ ದೇಶದಲ್ಲಿ ಗಝಲ್‌ ಬಗ್ಗೆ ಅತೀವ ಆಸಕ್ತಿ ಇದೆ?
ಎಲ್ಲಾ ದೇಶದವರೂ ಗಝಲ್‌ ಸಂಗೀತವನ್ನು ಪ್ರೀತಿಯಿಂದ ಕಾಣುತ್ತಾರಾದರೂ ಮಧ್ಯ ಪ್ರಾಚ್ಯ, ಜಪಾನ್‌ ಹಾಗೂ ಕೀನ್ಯಾದವರು ವಿಶೇಷ ಆಸ್ಥೆ ತೋರುತ್ತಾರೆ.

ಚಿತ್ರಗೀತೆ ಹಾಗೂ ಗಝಲ್‌ ಎರಡನ್ನೂ ನೀವು ಹಾಡಿದ್ದೀರಿ. ಈ ಪೈಕಿ ಯಾವುದು ನಿಮಗೆ ಹಿತ?
ಎರಡೂ ಹಿತ. ಜನರು ನನ್ನನ್ನು ಎರಡೂ ಕ್ಷೇತ್ರಗಳಲ್ಲಿ ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಅವರ ಅಭಿಮಾನಕ್ಕೆ ಋಣಿಯಾಗಿ ಎರಡರಲ್ಲೂ ನನ್ನನ್ನು ತೊಡಗಿಸಿಕೊಳ್ಳುತ್ತೇನೆ.

ಈಗಿನ ಯುವಜನತೆ ಸಿನಿಮಾ ಸಂಗೀತಕ್ಕೇ ಹೆಚ್ಚು ಒತ್ತು ನೀಡುತ್ತಾರಲ್ಲ?
ಹೌದು. ಇವರ ಜೊತೆಗೆ ಯುವಜನತೆಯ ಇನ್ನೊಂದು ಗುಂಪೂ ಇದೆ. ಗಝಲ್‌ಗಳ ಬಗ್ಗೆ ಈ ಗುಂಪಿಗೆ ಅತೀವ ಉತ್ಸಾಹ. ಅದನ್ನು ಕಲಿಯುವ ಛಲ, ಪೂರಕ ಪ್ರತಿಭೆ ಎಲ್ಲವೂ ಇದೆ. ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದರೆ ಅದನ್ನು ಖಂಡಿತವಾಗಿ ಸಾಧಿಸುತ್ತಾರೆ. ನಾನು ನೋಡಿದಂತೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಬಂಗಾಳದ ಗಝಲ್‌ ಅಭಿಮಾನಿಗಳಲ್ಲಿ ಯುವಕ- ಯುವತಿಯರೇ ಹೆಚ್ಚು !

ಸ್ವತಃ ಸ್ವರ ಸಂಯೋಜಕರಾಗಿರುವ ನಿಮಗೆ ಬೇರೆಯವರ ಸಂಗೀತ ನಿರ್ದೇಶನದಲ್ಲಿ ಹಾಡುವುದು ಹೇಗನಿಸುತ್ತದೆ?
ಬೇರೆ ಸಂಗೀತ ನಿರ್ದೇಶಕರ ನಿರೀಕ್ಷೆಯಂತೆ, ಅವರು ರಚಿಸಿದ ‘ಮೂಡ್‌’ಗೆ ಹೊಂದುವಂತೆ ಹಾಡುವುದು ಚಾಲೆಂಜ್‌. ನಮ್ಮ ಸಂಯೋಜನೆಯಲ್ಲಿ ನಾವೇ ಹಾಡುವುದು ಸುಲಭ.

ಸ್ಪರ್ಶ ಚಿತ್ರದಲ್ಲಿ ಹಾಡಿದ ಅನುಭವ ಹೇಗಿತ್ತು?
wonderful. ನಾನು ಹಾಡುಗಳನ್ನು ಸರಾಗವಾಗಿ ಹಾಡಲು ಚಿತ್ರ ನಿರ್ದೇಶಕ ಸುನಿಲ್‌ಕುಮಾರ್‌ ದೇಸಾಯಿ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ತುಂಬಾ ಚೆನ್ನಾಗಿ ಸಹಕರಿಸಿದರು. ಅವರ ಜೊತೆ ಕೆಲಸ ಮಾಡುವುದೇ ಖುಷಿ.

ಹಾಗಾದರೆ ತಮ್ಮಿಂದ ಶೀಘ್ರದಲ್ಲೇ ಮತ್ತೆ ಕನ್ನಡ ಹಾಡನ್ನು ನಿರೀಕ್ಷಿಸಬಹುದೆ?
ಹಾಡಲು ಆಸೆಯೇನೋ ಇದೆ. ಆದರೆ ನಾನು ಸದ್ಯಕ್ಕೆ ಹೊಸ ಗಝಲ್‌ ಆಲ್ಬಂನಲ್ಲಿ ತೊಡಗಿದ್ದೇನೆ. ಬರುವ ಮೇ ತಿಂಗಳಲ್ಲಿ ಅದು ಬಿಡುಗಡೆಯಾಗುತ್ತದೆ. ನಂತರ ಅನುಕೂಲವಾದರೆ ಖಂಡಿತವಾಗಿಯೂ ಕನ್ನಡದಲ್ಲಿ ಹಾಡುತ್ತೇನೆ.

ಭಾರತದ ಯಾವ ನಗರದಲ್ಲಿ ಹಾಡುವುದು ನಿಮಗಿಷ್ಟ ?
ಎಲ್ಲಾ ನಗರದಲ್ಲೂ ಅಸಂಖ್ಯ ಗಝಲ್‌ ಪ್ರೇಮಿಗಳಿದ್ದಾರೆ. ಎಲ್ಲಾ ನಗರಗಳಲ್ಲಿ ಹಾಡುವುದೂ ನನಗೆ ಇಷ್ಟ.

ಗಝಲ್‌ ಲೋಕದಿಂದ ಪಂಕಜ್‌ ಹಳೆಯ ನೆನಪುಗಳ ಮೆಲುಕುಹಾಕತೊಡಗಿದರು. ಬೆಂಗಳೂರಿನೊಡನೆ ತಮ್ಮ 20 ವರ್ಷ ಹಳೆಯ ನಂಟು- 1981- 82. ಹಾಡಲು ಬಂದಾಗಲೆಲ್ಲಾ ಇಲ್ಲಿನ ರಸ್ತೆಗಳಲ್ಲಿ ಓಡಾಡಿದ್ದು, ಹೊಟೇಲುಗಳಲ್ಲಿ ಕಳೆದ ಮಧುರ ಕ್ಷಣಗಳು.... ಪಂಕಜ್‌ ನೆನಪಿನ ಬುತ್ತಿ ಬಿಚ್ಚುತ್ತಾ ಹೋದರು. ಸಾಜನ್‌ ಚಿತ್ರದ ‘ಜಿಯೋ ತೋ ಜಿಯೇ ಕೈಸೆ.. ಬಿನ್‌ ಆಪ್‌ ಕೆ’ ಹಾಡು ನೆನಪಾಯಿತು!

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more