ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಬಾಬ್ಬರಿ ಹುಡುಗಿಗೆ ಶನಿವಾರ ದಿ. ಜಿ.ವಿ. ಅತ್ರಿ ಪ್ರಶಸ್ತಿ ಪ್ರದಾನ

By Staff
|
Google Oneindia Kannada News

ಬೆಂಗಳೂರು : ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದ ಯುವ ಗಾಯಕರಿಗೆ ಉಪಾಸನಾ ಸಂಸ್ಥೆ ಕೊಡಮಾಡುವ ದಿ. ಜಿ.ವಿ. ಅತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್‌ 9ರ ಶನಿವಾರ ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ರಿkುೕ ಟಿ.ವಿ.ಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಸಾರೆಗಾಮದಲ್ಲಿ ಕನ್ನಡ ಗೀತೆಯನ್ನು ಹಾಡಿ, ಪ್ರಥಮ ಬಹುಮಾನ ಪಡೆದಿದ್ದ ಹಾಗೂ ಕಾವೇರಿ ಟೀವಿ ಚಾನೆಲ್‌ನಲ್ಲಿ ರಿಬಾಬ್ಬರಿ ಕಾರ್ಯಕ್ರಮದ ನಿರೂಪಕಿಯಾಗಿ ಖ್ಯಾತರಾಗಿರುವ ಅರ್ಚನಾ ಉಡುಪ ಈ ಬಾರಿಯ ಅತ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಉಪಾಸನಾ ಸಂಸ್ಥೆ ತನ್ನ 2ನೇ ಹುಟ್ಟು ಹಬ್ಬದ ಆಚರಣೆಯ ಸಂದರ್ಭದಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಸೀಮೆಯಾಚೆ ಕನ್ನಡದ ಪರಿಮಳವನ್ನು ಹಂಚುವ ಕಾಯಕದಲ್ಲಿ ತೊಡಗಿರುವ ವಾಷಿಂಗ್ಟನ್‌ ನಿವಾಸಿ ಹಾಗೂ ಲೇಖಕಿ ವಿಮಲಾ ಚನ್ನಬಸಪ್ಪ ಹಾಗೂ ಸತ್ಯಂ ಗ್ರೂಪ್‌ ಆಫ್‌ ಕಂಪನಿಗಳ ಅಧ್ಯಕ್ಷ ಕೆ.ಎಸ್‌. ನಾಗರಾಜ ಶೆಟ್ಟಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವೂ ಇದೆ.

ಕಾರ್ಯಕ್ರಮದ ನಿಮಿತ್ತ ಲಯತರಂಗ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ಜರುಗಲಿದೆ. ಖ್ಯಾತ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲ, ಬೆಡಗಿನ ಕವಿ ಬಿ.ಆರ್‌. ಲಕ್ಷ್ಮಣರಾವ್‌, ಖ್ಯಾತ ಹಿನ್ನೆಲೆ ಗಾಯಕ ಶಿವಮೊಗ್ಗ ಸುಬ್ಬಣ್ಣ, ಬಿ.ವಿ.ಶ್ರೀನಿವಾಸ್‌, ಇಂದು ವಿಶ್ವನಾಥ್‌ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಉಪಾಸನದ ಸ್ಮರಣ ಸಂಚಿಕೆ ಹಾಗೂ ಜೆ. ಮೋಹನ್‌ ಸಂಗೀತ ನೀಡಿರುವ ಭಾವಗೀತೆಗಳ ಕ್ಯಾಸೆಟ್‌ ಬಿಡುಗಡೆ ಸಮಾರಂಭವೂ ನಡೆಯಲಿದೆ. ಉಪಾಸನಾ ವಿದ್ಯಾರ್ಥಿಗಳಿಂದ ಲಘು ಸಂಗೀತ ಕಾರ್ಯಕ್ರಮವೂ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜೆ. ಮೋಹನ್‌ ತಿಳಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X