ಆಗಸ್ಟ್ 27ರಂದು ಎಸ್ಪಿಬಿಗೆ ಸಂಗೀತ ಗಂಗಾ ಪ್ರಶಸ್ತಿ ಪ್ರದಾನ
ಬೆಂಗಳೂರು : ದಿವಂಗತ ಜಿ.ವಿ.ಅತ್ರಿ ಕಟ್ಟಿದ ‘ಸಂಗೀತಗಂಗಾ’ ಸಂಸ್ಥೆ ಆಗಸ್ಟ್ 27ರಂದು 9ನೇ ವರ್ಷಕ್ಕೆ ಕಾಲಿಡಲಿದ್ದು, ಈ ಸಂದರ್ಭದಲ್ಲಿ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ‘ಸಂಗೀತಗಂಗಾ ವಾರ್ಷಿಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಆಗಸ್ಟ್ 27ರ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಎಚ್.ಆರ್.ಲೀಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಎಸ್ಪಿ ಹಾಡಿರುವ ಗೀತೆಗಳ ಪೋಣಿಸಿ, ಗೀತರೂಪಕವನ್ನು ಪ್ರದರ್ಶಿಸಲಾಗುವುದು. ‘ವಿಶ್ವಮಾತೆ’ ಎಂಬ ಧ್ವನಿಸುರುಳಿಯನ್ನು ಶಾಸಕ ಪಿಜಿಆರ್ ಸಿಂಧ್ಯಾ ಬಿಡುಗಡೆ ಮಾಡುವರು ಎಂದು ಸಂಗೀತಗಂಗಾ ಅಧ್ಯಕ್ಷೆ ಹೇಮಾ ಪ್ರಸಾದ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್ಪಿಬಿ ಅವರಿಗೆ ನೀಡಲಾಗುವ ಗೌರವಕ್ಕೆ ಈ ಹಿಂದೆ ಡಾ.ಪುತಿನ, ಕೆಎಸ್ನ, ಆರ್.ಕೆ.ಶ್ರೀಕಂಠನ್, ಪಿ.ಬಿ.ಶ್ರೀನಿವಾಸ್ ಮೊದಲಾದವರು ಭಾಜನರಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು