• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಯಂಗಳದಲ್ಲಿ ಮಾತುಕತೆ : ತಿಂಗಳಅತಿಥಿ ಪುಟ್ಟರಾಜ ಗವಾಯಿ

By Staff
|

ಬೆಂಗಳೂರು : ಮದುವೆಯಾದವರು ಹೆಚ್ಚೆಂದರೆ ನಾಲ್ಕೈದು ಮಕ್ಕಳು ಮೊಮ್ಮಕ್ಕಳನ್ನು ಕಾಣಬಹುದು. ನನಗೊ ಸಾವಿರಾರು ಮಕ್ಕಳು, ಮೊಮ್ಮಕ್ಕಳು - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಮಧ್ಯಾಹ್ನ ಕನ್ನಡಭವನದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿದ್ದ ಉತ್ತರಾದಿ ಹಾಗೂ ದಕ್ಷಿಣಾದಿ ಸಂಗೀತ ಕ್ಷೇತ್ರಗಳ ದೊಡ್ಡಣ್ಣ ಪುಟ್ಟರಾಜ ಗವಾಯಿಗಳು ಭಾವುಕರಾಗಿ ಹೇಳಿದ ಮಾತಿದು.

ಸಂಗೀತ, ಅಧ್ಯಾತ್ಮ , ಮದುವೆ, ಅಧ್ಯಾತ್ಮ ಸೇರಿದಂತೆ ಹತ್ತಾರು ವಿಷಯಗಳು ಅವರ ಮಾತಿನಲ್ಲಿ ಹಾದುಹೋದವು. ಹಿಮಾಲಯ ಸದೃಶ ಸಾಧಕ ನೆನಪುಗಳನ್ನು ಬಿಚ್ಚಿಕೊಳ್ಳತೊಡಗಿದಂತೆ, ನೆರೆದಿದ್ದ ಪ್ರೇಕ್ಷಕರು ಧನ್ಯತೆಯ ಪುಳಕ ಅನುಭವಿಸಿದರು. ಪ್ರಶ್ನೆಗಳನ್ನೆಸೆದು ಉತ್ತರ ಪಡೆದರು. ಗವಾಯಿಗಳ ಮಾತಿನ ಸೆಳುಕುಗಳು ಇಲ್ಲಿವೆ -

  • ಯೌವ್ವನದಲ್ಲಿ ಮದುವೆ ಆಸೆ ಬಂದಿತ್ತು . ಆದರೀಗ ವಯಸ್ಸು ಕಳೆದುಹೋಗಿದೆ.
  • ಹುಟ್ಟಿದ ಆರು ತಿಂಗಳಲ್ಲಿ ಕಣ್ಣು ಕಳಕೊಂಡೆ. ಈಗಿರುವಂಥ ಕಣ್ಣು ಸರಿ ಮಾಡುವ ಆಸ್ಪತ್ರೆಗಳು ಅವಾಗಿರಲಿಲ್ಲ . ಎಲ್ಲಾಕ್ಕೂ ಗುರುಕೃಪೆ ಬೇಕು.
  • ಸಂಗೀತ ದೇವರ ದೇಣಿಗೆ. ಆನಂದಕ್ಕೆ ಸಂಗೀತ ಬೇಕೇ ಬೇಕು. ಮಕ್ಕಳಿಗೆ ದಯವಿಟ್ಟು ಸಂಗೀತ ಕಲಿಸಿ.
  • ಸಿನಿಮಾ ಸಂಗೀತ, ರಂಗ ಸಂಗೀತ, ಸುಗಮ ಸಂಗೀತಕ್ಕೆ ಸಿಕ್ಕ ಜನಪ್ರಿಯತೆ ಶಾಸ್ತ್ರೀಯ ಸಂಗೀತಕ್ಕೆ ಸಿಕ್ಕಿಲ್ಲ . ಅದು ಜನಸಾಮಾನ್ಯರಿಗೆ ತಿಳಿಯಾಲ್ಲ , ಅದಕ್ಕಾ ಜನಪ್ರಿಯತೆ ಪಡೆದಿಲ್ಲ .
  • ಹಾಡಲಿಕ್ಕೆ ದೇವರು ಕೊಟ್ಟ ಕಂಠ ಬೇಕು. ಹಾಡಲು ಬರದಿದ್ರೆ ವಾದ್ಯಾನಾದ್ರೂ ಇರಲಿ ಎಂದು ವಾದ್ಯಗಳ ಪರಿಚಯವಾಯ್ತು.
  • ಸಂಗೀತದಿಂದ ಸಮಾಜೋದ್ಧಾರ ಸಾಧ್ಯ. ಅದನ್ನು ಪುರಂದರರು ಸಾಧಿಸಿ ತೋರಿದ್ದಾರೆ. ಸಂಗೀತದಿಂದ ಆತ್ಮ ಸಾಕ್ಷಾತ್ಕಾರವೂ ಸಾಧ್ಯ (ಗವಾಯಿಗಳು ಸೂರದಾಸ- ಭಗವಾನ್‌ ವಿಷ್ಣುವಿನ ಕಥೆ ಹೇಳಿದರು).
  • ನಾನು ತುಂಬಾ ಸಣ್ಣವ. ನನಗ ಏನೂ ಬರಲ್ಲ . ಅದಕ್ಕಾ ನನಗ ಪುಟ್ಟ ಎಂದು ಹೆಸರಿಟ್ಟಾರ.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more