ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಮಿಶ್ರ ಸೋದರರ ಬನಾರಸ್‌ ಖಯಾಲ್‌, ಜುಗಲ್‌ಬಂದಿ

By Staff
|
Google Oneindia Kannada News

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಇಬ್ಬರು ದಿಗ್ಗಜರು ಬೆಂಗಳೂರಿಗೆ ಬರುತ್ತಿದ್ದಾರೆ. ಬನಾರಸ್‌ ಶೈಲಿಯ ಖಯಾಲ್‌ ಕೇಳಬಯಸುವ ಅಭಿಮಾನಿಗಳಂತೂ ಈ ಕಾರ್ಯಕ್ರಮ ಸಂಗೀತದ ಹಬ್ಬ. ಮಿಶ್ರ ಸಹೋದರರೆಂದೇ ಖ್ಯಾತಿಯಾಗಿರುವ ರಾಜನ್‌ ಮತ್ತು ಸಾಜನ್‌ ಮಿಶ್ರ ಫೆಬ್ರವರಿ 10ರ ಸಂಜೆ ಬೆಂಗಳೂರಿನ ಎಸ್‌.ಎಸ್‌.ಎಂ.ಆರ್‌.ವಿ. ಕಾಲೇಜು ಸಭಾಂಗಣದಲ್ಲಿ ಸಂಗೀತದ ಸುಧೆ ಹರಿಸಲಿದ್ದಾರೆ.

ಮಿಶ್ರ ಸಹೋದರರು ನಿಮಗೆ ಗೊತ್ತೆ ?
ಬನಾರಸ್‌ ಘರಾನದ ವರಸೆ ಮೆರೆದ ಪಂಡಿತ್‌ ಹನುಮಾನ್‌ ಮಿಶ್ರ ಮಕ್ಕಳು ರಾಜನ್‌ ಮತ್ತು ಸಾಜನ್‌. ತಂದೆಯೇ ಸಂಗೀತ ಗುರು. ಸಂಬಂಧಿಕರಾದ ಪಂಡಿತ್‌ ಗೋಪಾಲ್‌ ಪ್ರಸಾದ್‌ ಮಿಶ್ರ ಮತ್ತು ಗಾಯನಾಚಾರ್ಯ ದಿವಂಗತ ಬಡೇ ರಾಮದಾಸ್‌ಜೀ ಅವರ ಬಳಿ ಸಾರಂಗಿ ತರಪೇತಿ. ಬನಾರಸ್‌ ಖಯಾಲ್‌ ಜೊತೆಗೆ ಟಪ್ಪ, ತರಾನ, ಭಜನೆಯಂಥಾ ಲಘು ಪ್ರಕಾರಗಳಲ್ಲೂ ಮಿಶ್ರ ಸೋದರರು ನುರಿತರು.

ಇವರೀರ್ವರ ಜುಗಲ್‌ ಬಂದಿಗೆ ಸಹಸ್ರಾರು ಅಭಿಮಾನಿಗಳು. 1979ರಲ್ಲಿ ಪ್ರಧಾನ ಮಂತ್ರಿಗಳಿಂದ ಸಂಸ್ಕೃತಿ ಪ್ರಶಸ್ತಿಗೆ ಭಾಜನರಾದ ಮಿಶ್ರ ಸೋದರರಿಗೆ ಸಂದ ಪ್ರಶಸ್ತಿಗಳು ಅಸಂಖ್ಯ. ‘ಮಹರ್ಷಿ ಗಂಧರ್ವ ವೇದ ಸಂಗೀತ’ವನ್ನು ಪುನರುತ್ಥಾನ ಮಾಡಿರುವ ಇವರು ಹಿಂದೂಸ್ತಾನಿ ಸಂಗೀತವನ್ನು ದೇಶ- ವಿದೇಶಗಳ ಅಭಿಮಾನಿಗಳಿಗೆ ಉಣಿಸಿ, ಸೈ ಎನಿಸಿಕೊಂಡವರು.

ಅಂದಹಾಗೆ, ಬೆಂಗಳೂರಿನ ಮಿಶ್ರ ಸೋದರರ ಕಛೇರಿ ನೋಡಲು ಡೋನರ್‌ ಕಾರ್ಡ್‌ ಪಡೆಯಬೇಕು. ಕಾರ್ಡ್‌ ದರ 300 ಹಾಗೂ 500 ರುಪಾಯಿ. ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ , ಕ್ಯಾಲಿ--ಪ್ಸೋ, 3ನೇ ಬ್ಲಾಕ್‌, ಜಯನಗರ (ದೂರವಾಣಿ ಸಂಖ್ಯೆ- 0800- 6552368) ಹಾಗೂ ಮ್ಯೂಸಿಕ್‌ ವರ್ಲ್ಡ್‌, ಬ್ರಿಗೇಡ್‌ ರಸ್ತೆಯಲ್ಲಿ ಡೋನರ್‌ ಕಾರ್ಡ್‌ಗಳು ಲಭ್ಯ. ಕಛೇರಿ ಸಮಯ : ಸಂಜೆ 6.30ಕ್ಕೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X