• search

ಏನೋ ಮಾಡಲು ಹೋಗಿ ಕಾರು ಮಾರಿದರುನಮ್ಮ ಸಿ.ಅಶ್ವತ್ಥ್‌

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    * ಸುಂದರ್‌

    C. Ashwathಸಿ.ಅಶ್ವತ್ಥ್‌ ಅವರಿಗೆ ಉತ್ಸಾಹ ಜಾಸ್ತಿ. ಉತ್ಸಾಹ ಜಾಸ್ತಿ ಇರುವ ಮನುಷ್ಯನಿಗೆ ಅವಸರವೂ ಜಾಸ್ತಿ, ಜೊತೆಗೆ ಮುಂಗೋಪವೂ ಜಾಸ್ತಿ. ಹಾಗಾದಾಗ ಎಡವಟ್ಟುಗಳಾಗುವುದು ಸಹಜ. ಅಶ್ವತ್ಥ್‌ ಎಡವಟ್ಟು ಮಾಡಿಕೊಂಡಿದ್ದಾರೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡು ಮೈಯೆಲ್ಲಾ ಪರಚಿಕೊಳ್ಳುವ ಸ್ಥಿತಿ ತಲುಪಿದ್ದಾರೆ.

    ಬಸವಣ್ಣನ ವಚನಗಳನ್ನು ಜನಪದೀಯ ಮಾಡುವ ಕಾಯಕಕ್ಕೆ ಅವರು ಹೊರಟಲ್ಲಿಂದಲೇ ತಾಪತ್ರಯ ಶುರುವಾಯಿತು. ಅಶ್ವತ್ಥ್‌ ಯೋಜನೆಗಳು ಯಾವತ್ತೂ ಗೌರಿಶಂಕರ ಶಿಖರದ ಎತ್ತರದಲ್ಲೇ ಇರುತ್ತವೆ ಅನ್ನೋದು ಅವರನ್ನು ಬಲ್ಲವರಿಗೆಲ್ಲಾ ಗೊತ್ತು. ಬಸವಣ್ಣನ ವಚನಗಳನ್ನು ಕ್ಯಾಸೆಟ್‌ ಮಾಡುವ ಯೋಜನೆಯೂ ಇಂಥಾದ್ದೇ. ಅದು ಬರೀ ಕ್ಯಾಸೆಟ್‌ ಅಲ್ಲ , ನೂರಾರು ಜನರಿಗೆ ಆ ವಚನಗಳನ್ನು ಕಲಿಸಿ, ಮುಂದಿನ ಬಸವ ಜಯಂತಿಯಂದು ಸಾರ್ವಜನಿಕ ಪ್ರದರ್ಶನ ನೀಡುವುದು. ರಾಗ ಸಂಯೋಜನೆಗೆ ಹತ್ತಾರು ವಾದ್ಯಗಳು ಮತ್ತು ಅಷ್ಟೇ ಗಾಯಕಿಯರೂ ಬೇಕು. ರಿಚ್ಚಾಗಿ ಬರಬೇಕು, ಇತ್ಯಾದಿ ಇತ್ಯಾದಿ ಕಾರಣಗಳಿಂದಾಗಿ ಬರೀ ರಾಗ ಸಂಯೋಜನೆಗೇ 2.40 ಲಕ್ಷ ರೂಪಾಯಿ ಖರ್ಚಾಯಿತು. ಆರಂಭದಲ್ಲಿ ಕೊಳದ ಮಠದ ಶಾಂತವೀರ ಸ್ವಾಮೀಜಿಗಳು ಈ ಖರ್ಚನ್ನು ವಹಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಅವರನ್ನು ಅಶ್ವತ್ಥ್‌ಗೆ ಪರಿಚಯಿಸಿದವರು ಕಿಕ್ಕೇರಿ ಕೃಷ್ಣ ಮೂರ್ತಿ.

    ಈ ಭಾರೀ ಯೋಜನೆಯ ಬಗ್ಗೆ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾದವು. ಅಲ್ಲೆಲ್ಲೂ ಪ್ರಾಯೋಜಕರ ಬಗ್ಗೆ ಪ್ರಶಂಸೆಯೇ ಇಲ್ಲ ಎಂಬ ಕಾರಣಕ್ಕೇ ಕೊಳದ ಮಠದ ಸ್ವಾಮೀಜಿ ಮುನಿಸಿಕೊಂಡರಂತೆ, ಯೋಜನೆಯಿಂದ ಹಿಂದಕ್ಕೆ ಸರಿದರಂತೆ. ಹಾಡಿನ ಧ್ವನಿಮುದ್ರಣವಾಗುವ ದಿನವೇ ಆ ಆಘಾತಕಾರೀ ಸುದ್ದಿ ಬಂತು. ಕಂಗಾಲಾದ ಅಶ್ವತ್ಥ್‌ ತಮ್ಮ ಕಾರನ್ನು ಮಾರಿದರು. ಕ್ಯಾಸೆಟ್‌ ಅಂತೂ ರೆಡಿಯಾಯಿತು. ಆದರೆ ಅದನ್ನು ಮಾರುಕಟ್ಟೆ ಮಾಡೋದಿಕ್ಕೆ ಮತ್ತೆ ಪ್ರಾಯೋಜಕರು ಬೇಕು. ಇಂಥಾ ಸಂದರ್ಭದಲ್ಲಿ ಅಶ್ವತ್ಥ್‌ ಥಿಂಕ್‌ ಟ್ಯಾಂಕ್‌ ಮತ್ತೊಬ್ಬ ಶರಣರ ಹೆಸರನ್ನು ಸೂಚಿಸಿತು. ಅವರೇ ರಮಣಶ್ರೀ ಹೋಟೆಲ್‌ ಬಳಗದ ಷಡಕ್ಷರಿ. ಕ್ಯಾಸೆಟ್‌ ಹಾಡುಗಳ ಬಗ್ಗೆ ಒಂದು ಸಂವಾದ ಕಾರ್ಯಕ್ರಮವನ್ನು ತಮ್ಮ ಖರ್ಚಿನಲ್ಲಿ, ತಮ್ಮದೇ ರೆಸಾರ್ಟ್‌ನಲ್ಲಿ ನಡೆಸುವುದಕ್ಕೆ ಷಡಕ್ಷರಿ ಒಪ್ಪಿಕೊಂಡರು.

    ಸಂಗೀತದ ಬಗ್ಗೆ ಸಂಗೀತಗಾರರೇ ಮಾತಾಡಿದರೆ ಚೆನ್ನಾಗಿರೋದಿಲ್ಲ, ಸಾಹಿತಿಗಳು, ಬುದ್ಧಿ ಜೀವಿಗಳು ಮಾತಾಡಬೇಕು ಅನ್ನೋದು ಅಶ್ವತ್ಥ್‌ ಕಾನ್ಸೆಪ್ಟು . ಹಾಗಾಗಿ ರಮಣಶ್ರೀ ರೆಸಾರ್ಟಿಗೆ ಆಹ್ವಾನಿತರಾಗಿದ್ದವರ ಪಟ್ಟಿಯಲ್ಲಿ ಕನಿಷ್ಠ ಎಂದರೂ ಇಪ್ಪತ್ತು ಸಾಹಿತಿಗಳಿದ್ದರು, ದೃಷ್ಠಿ ಬೊಟ್ಟಿನಂತೆ ಒಬ್ಬ ಮಾಜಿ ಸಚಿವೆ, ಹಾಲಿ ಅಧಿಕಾರಿ. ಅಶ್ವತ್ಥ್‌ ಕ್ಯಾಸೆಟ್‌ ಕೇಳಿಸಿದ ನಂತರ ಅದರ ಬಗ್ಗೆ ಮಾತನಾಡಿದವರು ಮೂವರೇ. ವಿಮರ್ಶಕ ನರಹಳ್ಳಿ ಬಾಲ ಸುಬ್ರಹ್ಮಣ್ಯ, ಕವಿ ಜಿ.ಎಸ್‌. ಶಿವರುದ್ರಪ್ಪ ಮತ್ತು ಮಾಜಿ ಸಚಿವೆ ಲೀಲಾ ದೇವಿ ಪ್ರಸಾದ್‌. ಇವರೆಲ್ಲರೂ ವಚನಗಳಿಗೆ ಹೊಸ ರೀತಿಯ ರಾಗ ಸಂಯೋಜನೆ ಮಾಡಿರುವುದನ್ನು ಹೊಗಳಿದರೋ ತೆಗಳಿದರೋ ಅನ್ನುವುದು ಸ್ಪಷ್ಟವಾಗಲಿಲ್ಲ. ಒಟ್ಟಾರೆಯಾಗಿ ಇದು ಯುವಜನಾಂಗವನ್ನು ಕುಣಿಸುವುದಕ್ಕೆ ಹೇಳಿ ಮಾಡಿಸಿದಂತಿದೆ ಅನ್ನುವ ಅನಿಸಿಕೆ ಮೂಡಿ ಬಂತು. 21 ನೇ ಶತಮಾನದಲ್ಲಿ ಬಸವಣ್ಣ ಮಕ್ಕಳ ಕಣ್ಮಣಿಯಾಗುವ ಸಾಧ್ಯತೆಯಂತೂ ಇದೆ.

    ಅಶ್ವತ್ಥ್‌ ಮತ್ತೆ ಕೊರಗುತ್ತಿದ್ದಾರೆ. ಸಂವಾದ ಮುಗಿದ ನಂತರ ಸಂತೋಷ ಕೂಟದಲ್ಲಿ ಅಶ್ವತ್ಥ್‌ ಪ್ರತಿಯಾಬ್ಬರ ಬಳಿ ಸ್ಪಷ್ಟೀಕರಣ ನೀಡುತ್ತಿದ್ದರು. ಇದು ಅಷ್ಟು ಬೇಗನೆ ಅರ್ಥವಾಗುವ ಕಾನ್ಸೆಪ್ಟಲ್ಲ , ಸ್ವಲ್ಪ ಟೈಮ್‌ ಹಿಡಿಯುತ್ತದೆ ಎನ್ನುತ್ತಿದ್ದರು. ಅಂದ ಹಾಗೆ ಬಸವಣ್ಣನ ವಚನಗಳ ಕ್ಯಾಸೆಟ್ಟಿನ ಕಾನ್ಸೆಪ್ಟು ಏನೆಂದರೆ ಶ್ರೀ ಸಾಮಾನ್ಯನನ್ನೂ ಸರಳವಾಗಿ, ಸುಲಭವಾಗಿ ತಲುಪುವುದು!

    ವಾರ್ತಾಸಂಚಯ
    ವಚನದಲ್ಲಿ ನಾದಾಮೃತ ತುಂಬಿ
    ಸಿ. ಅಶ್ವತ್‌ಗೆ 2ಲಕ್ಷ ರು. ಸಂದಾಯ, ಅಂತ್ಯಗೊಂಡ ಅಕ್ಕಾ ಚೆಕ್‌ ವಿವಾದ
    'ಅಕ್ಕ-ನ" ಮಾತು ನಂಬಿ ಮೋ-ಸಹೋದೆನಣ್ಣ
    ಸಿ. ಅಶ್ವತ್‌ಗೆ ನೀಡಿದ ಚೆಕ್‌ ಬಗ್ಗೆ "ಅಕ್ಕಾ" ಸ್ಪಷ್ಟನೆ
    ಈ ಕೀರ್ತಿ ನಿಸ್ಸಂದೇಹವಾಗಿ ಗಾಯಕ - ನಿರ್ದೇಶಕ ಸಿ. ಅಶ್ವತ್ಥ್‌ ಅವರಿಗೆ ಸಲ್ಲಬೇಕು !!
    'ಅಶ್ವತ್ಥ " ವೃಕ್ಷದ ಕೆಳಗೆ...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more