• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊತ್ತೂಟಕ್ಕೆ ಕಛೇರಿನೆಚ್ಚಿಕೊಂಡಾತನ ಮಗ ಚಾ ಕಂಪನಿಗೆ ಬಿಕರಿಯಾದ!

By Staff
|

ಮೊನ್ನೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಉಸ್ತಾದ್‌ ಝಾಕಿರ್‌ ಹುಸೇನ್‌ ಬೆರಳುಗಳು ತಬಲಾ ಮೋಡಿ ಮಾಡುತ್ತಿದ್ದಾಗ ಅನೇಕರು ಆಡಿಕೊಂಡ ಮಾತು- ‘ಈತ ಎಷ್ಟು ದುಡ್ಡು ಮಾಡಿರಬಹುದು?’ ಹೌದು, ಝಾಕಿರ್‌ ಈಗ ಸಾಕಷ್ಟು ದುಡ್ಡು ಮಾಡಿರುವುದು ನಿಜ. ಜೊತೆಗೆ ತಾಜ್‌ಮಹಲ್‌ ಚಹ ಜಾಹಿರಾತಿಗೆ ಕಲೆಯನ್ನೇ ಪಣ ಇಟ್ಟ ದುರಾಸೆಯವ ಎಂಬ ಅಭಿಮಾನಿಗಳ ಆರೋಪಕ್ಕೂ ಗುರಿಯಾಗಿರುವಾತ. ಆದರೆ ಝಾಕಿರ್‌ ತಂದೆ...

ಉಸ್ತಾದ್‌ ಅಲ್ಲಾ ರಖಾ, ಕಛೇರಿಗೆ ಕರೆ ಬರಲಿ ಎಂದು ತಹತಹಿಸುತ್ತಿದ್ದುದನ್ನು ಖುದ್ದು ಝಾಕಿರ್‌ ಮರೆತಿಲ್ಲ. ಅಲ್ಲಾ ರಖಾ ನಿಧನರಾಗಿ ಎರಡು ವರ್ಷ ಸವೆಯುತ್ತಾ ಬಂದಿದೆ. ಅವರು ನಿಧನರಾದ ದಿನಾಚರಣೆ ಹೇಗಿರಬೇಕು ಎಂಬುದು ಝಾಕಿರ್‌ ಈ ಹೊತ್ತಿನ ಚಿಂತನೆ. ಆ ದಿನವನ್ನು ಸಂಗೀತ ಮಯವಾಗಿಸುವುದು ಅವರ ಯೋಚನೆ.

ಅಂದು- ಇಂದು : ವರ್ಷಗಳ ಹಿಂದೆ ಸಂಗೀತಗಾರರಿಗೆ ಈಗಿನಂತೆ ರೆಡ್‌ ಕಾರ್ಪೆಟ್‌ ಹಾಸು ಇರುತ್ತಿರಲಿಲ್ಲ. ರಾಜರ ಕಾಲದಲ್ಲಿ ಬೀಗುತ್ತಿದ್ದ ಆಸ್ಥಾನ ಸಂಗೀತ ವಿದ್ವಾನ್‌ಗಳಂತಲ್ಲ ಇವರ ಸ್ಥಿತಿ. ಸಾಧನೆಯೇ ಪರಮಪದ. ಆದರೆ ಹೊಟ್ಟೆಗೆ ತಣ್ಣೀರು ಬಟ್ಟೆ ಅನ್ನುವ ಸ್ಥಿತಿ. ನಂತರವಷ್ಟೇ ಪರಿಸ್ಥಿತಿ ಕೊಂಚ ಸುಧಾರಿಸಿದ್ದು. ಆದರೆ ಈಗ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್‌ ಶುಲ್ಕ 6 ಲಕ್ಷ ರುಪಾಯಿ ! ದೇವಸ್ಥಾನಕ್ಕೆ ಹೋಗಲು ಸಂಗೀತದ ಮೂಲಕ ಪ್ರವೇಶ ಗಿಟ್ಟಿಸಿದ ಜೇಸುದಾಸ್‌, ಒಂದು ಚಿತ್ರ ಗೀತೆಗೆ ಹಲವಾರು ಸಾವಿರ ರುಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ಝಾಕಿರ್‌ ತಬಲಾ ಕಛೇರಿ ರೇಟು ಫಿಕ್ಸ್‌ ಮಾಡುವುದು ತಾಜ್‌ ಟೀ. ಪ್ರತಿ ಟಿಕೇಟು ದರ ಕನಿಷ್ಠ 500 ರು.!

1919ರಲ್ಲಿ ಹುಟ್ಟಿದ ಉಸ್ತಾದ್‌ ಅಲ್ಲಾ ರಖಾ ತಬಲಾ ಬಾರಿಸುವುದನ್ನು ಕಲಿತದ್ದು ಮಿಲನ್‌ ಕಾದರ್‌ ಬಕ್ಷ್‌ ಅವರಿಂದ. ಪಂಡಿತ್‌ ರವಿಶಂಕರ್‌ ಜೊತೆಯಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಹಿಂದೂಸ್ತಾನಿ ಸಂಗೀತದ ಸೆಳಕನ್ನು ಜಗತ್ತಿಗೆ ಪಸರಿಸಿದ ಸಾಧನೆ ಇವರದು. ಸದಾ ಸಂಗೀತದ ಗುಂಗಲ್ಲೇ ಕಳೆದು ಹೋಗಿರುತ್ತಿದ್ದ ಅಲ್ಲಾ ರಖಾ ಅವರನ್ನು ಮಾತಾಡಿಸುವುದೇ ಕಷ್ಟವಾಗಿತ್ತಂತೆ. ಸಂಗೀತದ ಧ್ಯಾನದಲ್ಲೇ ಇರುತ್ತಿದ್ದ ಅವರನ್ನು ನಾಲ್ಕು ಬಾರಿ ಜೋರಾಗಿ ಕೂಗಬೇಕಾಗಿತ್ತು. ಆ ನಂತರವೇ ಹ್ಞೂಂಗುಡುತ್ತಿದ್ದುದು- ನೆನೆಯುತ್ತಾರೆ ಪತ್ನಿ ಬಾವಿ ಬೇಗಂ.

Zakir Hussainಹೊತ್ತು ಊಟಕ್ಕೂ ಚಿಂತೆ : ಅಪ್ಪನ ಆ ದಿನಗಳನ್ನು ಮೆಲುಕು ಹಾಕುವ ಉಸ್ತಾದ್‌ ಝಾಕಿರ್‌ ಹುಸೇನ್‌, ಊಟಕ್ಕೂ ಪರದಾಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಅಮ್ಮ ಮುಂದಿನ ಹೊತ್ತಿನ ಊಟಕ್ಕೆ ಏನು ಮಾಡುವುದು ಅಂತ ಕೇಳಿದಾಗ, ಅಪ್ಪ ಹೇಳುತ್ತಿದ್ದರು- ‘ದೇವರಿದ್ದಾನೆ. ಹುಟ್ಟಿಸಿದಾತ ಹುಲ್ಲು ಮೇಯಿಸುವುದಿಲ್ಲ’. ಅದು ನಿಜ ಕೂಡ. ಅಪ್ಪ ಹಾಗೆಂದ ಕೆಲವೇ ನಿಮಿಷಗಳಲ್ಲಿ ಯಾವುದಾದರೂ ಕಛೇರಿಗೆ ಬುಲಾವು ಬರುತ್ತಿತ್ತು. ಕಾರಣ ಅಪ್ಪನಲ್ಲಿ ಪ್ರತಿಭೆ ಇತ್ತು. ಆಮೇಲೆ ನಮ್ಮ ಜೀವನ ಸುಧಾರಿಸಿತು. ಅಪ್ಪನಿಗೆ ಒಳ್ಳೆ ಶಿಷ್ಯವೃಂದ ಸಿಕ್ಕಿತು.

ಸಹೋದರ ತೌಫಿಕ್‌ ಖುರೇಶಿ ಜೊತೆ ಉಸ್ತಾದ್‌ ಝಾಕಿರ್‌ ಹುಸೇನ್‌ ಅಪ್ಪನ ಪುಣ್ಯ ತಿಥಿಯನ್ನು ಸಂಗೀತಮಯವಾಗಿಸುವುದರ ಬಗೆಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಸಂಗೀತಕ್ಕಾಗಿ ಬದುಕಿದ ಅಪ್ಪನಿಗೆ ಸಂಗೀತವೇ ಶ್ರದ್ಧಾಂಜಲಿ ಎನ್ನುತ್ತಿದ್ದಾರೆ ಮಕ್ಕಳು. ಅಂದಹಾಗೆ, ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ, ಉಸ್ತಾದ್‌ ಜಾಕಿರ್‌ ಹುಸೇನ್‌ ಹಾಗೂ ಉಸ್ತಾದ್‌ ಅಲ್ಲಾ ರಖಾ ಶಿಷ್ಯ ವೃಂದ ಉಸ್ತಾದ್‌ ಅಲ್ಲಾ ರಖಾ ನೆನಪಿಗೆ ಇಡೀ ದಿನ ಸಂಗೀತದ ಹೊಳೆ ಹರಿಸಲಿದೆ. ನಂತರ ಇಂಗ್ಲೆಂಡಿನಲ್ಲೂ ಈ ಹೊಳೆ ಹರಿಸುವ ಉದ್ದೇಶ ಅಲ್ಲಾ ರಖಾ ಮಕ್ಕಳದು.

ತಂದೆಯ ನೆನಪಿನಲ್ಲಿ ಹಾಡುವ ಸಂಜೆಗೂ ಟಿಕೇಟು ಇರಿಸುವರೋ ಏನೋ ಇನ್ನೂ ಗೊತ್ತಿಲ್ಲ. ಆದರೆ, ತಾಜ್‌ಮಹಲ್‌ ಚಹಾ ತಯಾರಕರು ಟಿಕೇಟು ದರ ಫಿಕ್ಸ್‌ ಮಾಡುವ ಕೆಲಸದಲ್ಲಿ ಈಗಾಗಲೇ ತಲ್ಲೀನರಾಗಿದ್ದಾರಂತೆ ! ಸಂಗೀತ ಮಾರಾಟದ ಈ ದಿನಗಳ ಬಗೆಗೆ ನೀವೇನಂತೀರಿ?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more