ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಸಣ್ಣ ಕಥೆ ಕೇಳಲು 'ಕಥಾ ಕಣಜ' ಆಕಾಶವಾಣಿ ಕಾರ್ಯಕ್ರಮ

By Gururaj
|
Google Oneindia Kannada News

ಬೆಂಗಳೂರು, ಮೇ 25 : ಕನ್ನಡ ಸಾಹಿತ್ಯ ಲೋಕದಲ್ಲಿ ಸಣ್ಣಕಥೆಗಳಿಗೆ ವಿಶಿಷ್ಠ ಸ್ಥಾನವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಕಾಶವಾಣಿ ಮೂಲಕ ಸಣ್ಣಕಥೆಗಳನ್ನು ಜನರಿಗೆ ತಲುಪಿಸಲು ಸರಣಿ ಕಾರ್ಯಕ್ರಮವನ್ನು ನಡೆಸಲಿದೆ.

ಸಣ್ಣಕಥೆಗಳ ಕೌತುಕಗಳನ್ನು ಅನಾವರಣಗೊಳಿಸಿ ಜನರಿಗೆ ಕೇಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಕಥಾ ಕಣಜ' ಎಂಬ ಕಾರ್ಯಕ್ರಮವನ್ನು ನಡೆಸಲಿದೆ. ಅತ್ಯುತ್ತಮ ಕಥೆಗಳ ಓದು ಹಾಗೂ ವಿಮರ್ಶೆಯನ್ನು ಈ ಮಾಲಿಕೆ ಒಳಗೊಂಡಿರುತ್ತದೆ.

ಕುಂ. ವೀರಭದ್ರಪ್ಪ ಹೊಸ ಕಾದಂಬರಿ 'ಕತ್ತೆಗೊಂದು ಕಾಲ'ಕುಂ. ವೀರಭದ್ರಪ್ಪ ಹೊಸ ಕಾದಂಬರಿ 'ಕತ್ತೆಗೊಂದು ಕಾಲ'

ಕರ್ನಾಟಕ ಸಾಹಿತ್ಯ ಅಕಾಡೆಮಿಯು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಡಾ. ಗಿರಡ್ಡಿ ಗೋವಿಂದರಾಜು ಮತ್ತು ಬೋಳುವಾರು ಮೊಹಮದ್ ಕುಂಇ ಇವರ ಸಂಪಾದಕತ್ವದಲ್ಲಿ ನಮ್ಮ ನಾಡಿನ ಎಲ್ಲಾ ಪ್ರದೇಶಗಳ ಎಲ್ಲಾ ಪ್ರಕಾರಗಳ ಎಲ್ಲಾ ಸಮುದಾಯಗಳ ಸಾಕ್ಷಿಪ್ರಜ್ಞೆಯಂತೆ ಮತ್ತು ಎಲ್ಲರೂ ಒಪ್ಪುವಂತೆ ಆರಿಸಿದ 'ಶತಮಾನದ ಸಣ್ಣಕಥೆಗಳು' ಕಥಾ ಸಂಕಲನವು ಕಥಾಕಣಜ ಮಾಲಿಕೆಗೆ ಪ್ರಮುಖ ಆಕರವಾಗಿದೆ.

radio

ಲೇಖಕ ಹಾಗೂ ವಿಮರ್ಶಕರಾದ ಡಾ. ಎಸ್. ದಿವಾಕರ್ ರವರು ಸಂಪಾದಿಸಿರುವ ಕಥಾ ಸಂಕಲನ ಮತ್ತು ಪ್ರೊ. ಜಿ.ಹೆಚ್. ನಾಯಕ್ ರವರು ಸಂಪಾದಿಸಿರುವ ಕಥಾ ಸಂಕಲನದ ಕೆಲವು ಉತ್ತಮ ಕಥೆಗಳನ್ನು ಸಹ ಈ ಮಾಲಿಕೆಯಲ್ಲಿ ಬಳಸಿಕೊಳ್ಳಲಾಗಿದೆ.

ಶಿವರಾಮ ಕಾರಂತರ ಭೇಟಿ ಮಾಡಿದ ಆ ನೆನಪು ನಿಮ್ಮೊಂದಿಗಿಷ್ಟುಶಿವರಾಮ ಕಾರಂತರ ಭೇಟಿ ಮಾಡಿದ ಆ ನೆನಪು ನಿಮ್ಮೊಂದಿಗಿಷ್ಟು

ಈ ಸರಣಿ ಮಾಲಿಕೆಯಲ್ಲಿ ಪ್ರತಿವಾರ ಒಂದು ಕಥೆಯಂತೆ ಒಂದು ವರ್ಷಕ್ಕೆ 52 ಕಥೆಗಳು ಪ್ರಸಾರಗೊಳ್ಳಲಿವೆ. ಈ ಕಾರ್ಯಕ್ರಮವು ಕಥೆಗಾರನ ಮಾತು, ಕಥೆಯ ಓದು, ಹಿರಿಯ ಸಾಹಿತಿಗಳಿಂದ ವಿಮರ್ಶೆ ಹಾಗೂ ಪೂರಕ ಸಂಗೀತವನ್ನು ಒಳಗೊಂಡಿರುತ್ತದೆ.

ಹಿರಿಯ ಸಾಹಿತಿಗಳಾದ ಡಾ. ಹೆಚ್.ಎಸ್ ವೆಂಕಟೇಶ್ ಮೂರ್ತಿ, ಕುಂ.ವೀರಭದ್ರಪ್ಪ, ಜಯಂತಿ ಕಾಯ್ಕಿಣಿ ಮತ್ತು ಡಾ. ಎಂ.ಎಸ್.ಆಶಾದೇವಿ ಅವರು ಸೇರಿದಂತೆ 19 ಜನ ಸಾಹಿತಿಗಳು ಕಥಾ ವಿಮರ್ಶಕರಾಗಿ ಭಾಗವಹಿಸಲಿದ್ದಾರೆ.

ಶ್ರೀನಿವಾಸ ಪ್ರಭು, ಡಾ. ಅಬ್ದುಲ್ ರೆಹಮಾನ್ ಪಾಷಾ, ಜೆ.ಪಿ. ರಾಮಣ್ಣ, ಬಿ.ಕೆ ಸುಮತಿ ಸೇರಿದಂತೆ ಕನ್ನಡದ ಅತ್ಯುತ್ತಮ ನಿರೂಪಕರು ಕಥೆಗಳನ್ನು ಓದಲಿದ್ದಾರೆ.

ಕಾರ್ಯಕ್ರಮದ ವಿವರ
* ಪ್ರಸಾರದ ಅವಧಿ : ಪ್ರತಿ ಸೋಮವಾರ fm rainbow 101.3 mhz ನಲ್ಲಿ ಬೆಳಗ್ಗೆ 8.02ಕ್ಕೆ
* ಪ್ರತಿ ಬುಧವಾರ ಬೆಳಗ್ಗೆ 7.15 ಕ್ಕೆ ಕರ್ನಾಟಕದ ಎಲ್ಲ 13 ಬಾನುಲಿ ಕೇಂದ್ರಗಳು ಮತ್ತು ಬೆಂಗಳೂರು ಆಕಾಶವಾಣಿ ಮುಖ್ಯ ವಾಹಿನಿಯಲ್ಲಿ ಪ್ರಸಾರ
* ಪ್ರತಿ ಶುಕ್ರವಾರ ವಿವಿಧ ಭಾರತಿ fm 102.9 MHz ನಲ್ಲಿ 8.30 ಕ್ಕೆ ಮರುಪ್ರಸಾರ

ಕಾರ್ಯಕ್ರಮದ ಕುರಿತು : ಕಥಾ ಕಣಜ ಕಾರ್ಯಕ್ರಮದ ಪರಿಕಲ್ಪನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಎನ್.ಆರ್.‍ ವಿಶುಕುಮಾರ್ ಅವರದ್ದು. ಶೀರ್ಷಿಕೆ ಗೀತೆಯನ್ನು ಡಾ.ಕೆ.ವೈ ನಾರಾಯಣಸ್ವಾಮಿ ಅವರು ರಚಿಸಿದ್ದಾರೆ.

ಆಕಾಶವಾಣಿ ತಂಡ : ಸುಬ್ಬಯ್ಯ ( ಸುಬ್ಬು ಹೊಲೆಯಾರ್), ಶಿವಪ್ರಕಾಶ, ಬಿ.ಕೆ. ಸುಮತಿ. ಪ್ರತಿವಾರ ಒಂದು ಕಥೆಯಂತೆ ಒಂದು ವರ್ಷಕ್ಕೆ 52 ಕಥೆಗಳು ಪ್ರಸಾರವಾಗಲಿವೆ. ಈ ಕಾರ್ಯಕ್ರಮವು ಕಥೆಗಾರನ ಮಾತು, ನಿರೂಪಕರಿಂದ ಕಥೆಯ ಓದು, ಹಿರಿಯ ಸಾಹಿತಿಗಳಿಂದ ವಿಮರ್ಶೆ ಹಾಗೂ ಪೂರಕ ಸಂಗೀತ ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Karnataka Kannada and Culture Department will start unique radio programme for reach Kannada short stories to people. Katha Kanaja programme will broadcast on Fm Rainbow 101.3 on every Monday 08.02 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X