ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ದಿನಾಚರಣೆ: ಧೃತಿ ಮಹಿಳಾ ಮಾರುಕಟ್ಟೆ ಯಶೋಗಾಥೆ ಪುಸ್ತಕ ಬಿಡುಗಡೆ

|
Google Oneindia Kannada News

ಬೆಂಗಳೂರು, ಮಾರ್ಚ್ 07: ಕೊರೊನಾ ಕಾಲದಲ್ಲಿ ಬಹಳಷ್ಟು ಜನರ ಬದುಕು ಅತಂತ್ರವಾಗಿತ್ತು. ಸಾಕಷ್ಟು ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡರು. ಹಿಂದೆ ಮುಂದಿಲ್ಲದ ರೋಗವೊಂದು ಇದ್ದಕ್ಕಿದ್ದಂತೆ ಇಡೀ ಪ್ರಪಂಚವನ್ನೇ ತನ್ನ ಭಯದ ತೆಕ್ಕೆಗೆ ಬೀಳಿಸಿತ್ತು. ಆ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳ ಹೆಂಗಳೆಯರೂ ಬಲ ಒಗ್ಗೂಡಿಸಿ ಎದ್ದು ನಿಂತು, ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಲಿ, ದುಡಿಮೆಯ ಅನಂತ ಸಾಧ್ಯತೆಗಳನ್ನು ಗುರುತಿಸುವಂತಾಗಲಿ ಎನ್ನುವ ಧ್ಯೇಯದೊಂದಿದೆ ಮೇ 2020 ರಂದು ಹುಟ್ಟಿದ ಫೇಸ್ ಬುಕ್ ಗುಂಪು "ಧೃತಿ ಮಹಿಳಾ ಮಾರುಕಟ್ಟೆ". ಇಂದು ಈ ಗ್ರೂಪಿನಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ.

ಈ ಆನ್ ಲೈನ್ ಮಹಿಳಾ ಮಾರುಕಟ್ಟೆಯ ಮೂಲಕ, ಎರಡು ವರ್ಷಗಳ ಅವಧಿಯಲ್ಲೇ ನೂರಾರು ಮಹಿಳೆಯರು ತಮ್ಮನ್ನು ಗುರುತಿಸಿಕೊಂಡು, ತಮ್ಮ ಕೌಶಲ್ಯಗಳನ್ನು ಪರೀಕ್ಷೆಗೊಡ್ಡಿ ತಮ್ಮ ಮತ್ತು ತಮ್ಮವರ ಬದುಕನ್ನು ಇನ್ನಷ್ಟು ಹಸನಾಗಿಸಲು ಸಮರ್ಥರಾದರು. ಮನೆಯಲ್ಲೇ ಕೂತು ತಯಾರಿಸಿದ ವಸ್ತುಗಳನ್ನು, ಆಹಾರ ಪದಾರ್ಥಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡಿ ಯಶಸ್ಸು ಗಳಿಸಿದರು. ಬದುಕಲ್ಲೇ ಒಂದು ಬಾರಿಯೂ ಇಂಟರ್ ನೆಟ್ ಮುಖ ನೋಡದವರೂ ಈ ಮಾರುಕಟ್ಟೆಯ ಸಹಾಯದಿಂದ ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ಮಾಡಿದರು.

ಈಗ, ಇವರಲ್ಲಿ ಆಯ್ದ 33 ಮಹಿಳೆಯರ ಯಶಸ್ಸಿನ ಕಥೆಗಳನ್ನು ಒಳಗೊಂಡ ಪುಸ್ತಕ "ಧೃತಿಗೆಡದ ಹೆಜ್ಜೆಗಳು" ಧೃತಿ ಮಹಿಳಾ ಮಾರುಕಟ್ಟೆಯಿಂದ ಪ್ರಕಟವಾಗುತ್ತಿದೆ. ಮಹಿಳಾ ದಿನಾಚರಣೆಯಂದು, ಮಾರ್ಚ್ 8, 2022, ಮಂಗಳವಾರ, ಚಾಮರಾಜಪೇಟೆಯ "ಕನ್ನಡ ಸಾಹಿತ್ಯ ಪರಿಷತ್" ಸಭಾಭವನದಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳಲಿದೆ.

Womens day Special: Dhruthi woman market Success story book release

ಪ್ರಸಿದ್ಧ ಅಂಕಣಕಾರ, ವಾಗ್ಮಿಯಾದ ರಮಣಶ್ರೀ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಎಸ್. ಷಡಕ್ಷರಿಯವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕ್ವಿಇನ್ ಫ್ರಾ ಸೊಲ್ಯೂಶನ್ಸ್ ನ ಡೈರೆಕ್ಟರ್ ಆಗಿರುವ ಕಿರಣ್ ಪ್ರಸಾದ್ ರಾಜನಹಳ್ಳಿ, ಸುಕೋ ಬ್ಯಾಂಕ್ ನಿರ್ದೇಶಕರು, ಮಲೆನಾಡು ನಟ್ಸ್ ಅಂಡ್ ಸ್ಪೈಸ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರೂ ಆಗಿರುವ ಮನೋಹರ ಮಸ್ಕಿ ದೂರದರ್ಶನದ ಹಿರಿಯ ಕಾರ್ಯಕ್ರಮ ನಿರೂಪಕರಾದ ಆರತಿ ಹೆಚ್.ಎನ್, ಎಂಡಿಪಿ ಕಾಫೀ ಹೌಸ್‌ನ ಮುಖ್ಯಸ್ಥರಾದ ಮಹದೇವ ಪ್ರಸಾದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು. ರೂಪಾ ಗುರುರಾಜ್, ಕಾರ್ಯಕ್ರಮ ನಿರೂಪಿಸಲಿದ್ದಾರೆ.

Recommended Video

Ind vs Pakistan Worldcup ಪಂದ್ಯದಲ್ಲಿ ನಡೆದಿದ್ದೇನು? | Oneindia Kannada

ಕೃತಿ: ಧೃತಿಗೆಡದ ಹೆಜ್ಜೆಗಳು
ಬಿಡುಗಡೆ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ.
ದಿನಾಂಕ: 08.03.2022, ಮಂಗಳವಾರ.
ಸಮಯ: 4.30PM
ಪ್ರಕಾಶನ: ಧೃತಿ ಮಹಿಳಾ ಮಾರುಕಟ್ಟೆ,ಬೆಂಗಳೂರು
ಪುಟಗಳು: 172
ಬೆಲೆ: ರೂ. 150
ಮುಂಗಡ ಖರೀದಿಗೆ ಸಂಪರ್ಕಿಸಿ: 8197759806

English summary
Womens day Special: A Kannada book 'Dhrutigedada Hejjegalu' on Dhruthi woman market Success story will be released on March 8, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X