ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.22 ರಂದು 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಪುಸ್ತಕ ಬಿಡುಗಡೆ

|
Google Oneindia Kannada News

ಬೆಂಗಳೂರು, ಜುಲೈ 21: ಕಂಪ್ಯೂಟರ್ ಬಳಕೆ ಎಂಬುದು ಹೊಸ ತಲೆಮಾರಿನ 'ಅತ್ಯವಶ್ಯಕ'ಗಳಲ್ಲೊಂದಾಗಿರುವ ಈ ಹೊತ್ತಲ್ಲಿ, ಕಂಪ್ಯೂಟರ್ ಸಾಕ್ಷರತೆ ಪ್ರತಿಯೊಬ್ಬರಿಗೂ ಅನಿವಾರ್ಯ.

ಅದಕ್ಕೆಂದೇ ಕಂಪ್ಯೂಟರ್ ಕುರಿತು ಕನ್ನಡ ಭಾಷೆಯಲ್ಲಿಯೇ ಸಮಗ್ರ ಮಾಹಿತಿ ನೀಡುವ ಪ್ರಯತ್ನವಾಗಿ 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಎಂಬ ಪುಸ್ತಕವನ್ನು ವೃತ್ತಿಯಲ್ಲಿ ಉಪನ್ಯಾಸಕರಾದ ಪ್ರೊ.ಮಹದೇವಯ್ಯ ಅವರು ಹೊರತರುತ್ತಿದ್ದಾರೆ. ಜುಲೈ 22, ಭಾನುವಾರದಂದು ಬೆಳಿಗ್ಗೆ 10:30 ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ರಾಜ ಪರಿಷನ್ಮಂದಿರದಲ್ಲಿ(ಚಾಮರಾಜಪೇಟೆ) ಪುಸ್ತಕ ಬಿಡುಗಡೆಗೊಳ್ಳಲಿದೆ.

'ಏಷ್ಯನ್ ಪ್ರಿಂಟ್ ಅವಾರ್ಡ್' ಗರಿ ಮುಡಿಗೇರಿಸಿಕೊಂಡ ಡ್ರೀಮ್ ಲ್ಯಾಂಡ್ ಪುಸ್ತಕ'ಏಷ್ಯನ್ ಪ್ರಿಂಟ್ ಅವಾರ್ಡ್' ಗರಿ ಮುಡಿಗೇರಿಸಿಕೊಂಡ ಡ್ರೀಮ್ ಲ್ಯಾಂಡ್ ಪುಸ್ತಕ

ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವೇಣುಗೋಪಾಲ್ ಕೆ. ಆರ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ.ಎಚ್ ಹೊನ್ನೇಗೌಡ ಅವರು ಭಾಗವಹಿಸಲಿದ್ದು, ಡಿಆರ್ ಡಿಒ ಮಾಜಿ ವಿಜ್ಞಾನಿ, ವಿಜ್ಞಾನ ಬರಹಗಾರರಾದ ಸುಧೀಂದ್ರ ಹಾಲ್ದೊಡ್ಡೇರಿ ಅವರು ಪುಸ್ತಕ ಪರಿಚಯ ಮಾಡಲಿದ್ದಾರೆ.

Vrittipara Computer Saksharate book to release on July 22, in Bengaluru

ಬೆಂಗಳೂರಿನ ಎಸ್ ಕೆ ಎಸ್ ಜೆ ಟಿ ಕಾಲೇಜಿನಲ್ಲಿಮೆಕ್ಯಾನಿಕಲ್ ಇಂಜಿನಿಯರಿಂಗ್ ಉಪನ್ಯಾಸಕರಾಗಿರುವ ಮಹದೇವಯ್ಯ ಅವರು ಸ್ವಂತ ಪರಿಶ್ರಮದಿಂದ ಓದಿ, ಕಂಪ್ಯೂಟರ್ ಕುರಿತು ಸಮಗ್ರ ಜ್ಞಾನವನ್ನು ಬೆಳೆಸಿಕೊಂಡವರು. ಅವರ ಮೊದಲ ಪ್ರಯತ್ನವಾಗಿ ಈ ಕೃತಿ ಬಿಡುಗಡೆಯಾಗುತ್ತಿದ್ದು, ಸಹೃದಯರಿಗೆ ಕಾರ್ಯಕ್ರಮಕ್ಕೆ ಆಮಂತ್ರಣವಿದೆ.

ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ
ಲೇ: ಮಹದೇವಯ್ಯ
ಪುಟಗಳು: 300
ಬೆಲೆ: ರೂ. 300/-

English summary
'Vrittipara Computer Saksharathe' (Professional Computer Literacy)a wonderful book for Computer learners by Prof. Mahadevaiah will be releasing on July 22. Venue: Shri Krishnaraja Parishanmandira, Kannada Sahitya Parishat, Chamarajapet, Bengaluru. Time: 10:30am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X