ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀತ್ ಅವರ 'ತರ್ಕ' ಕಾದಂಬರಿ ಪ್ರೀ ಬುಕ್ಕಿಂಗ್ ಆರಂಭ

ಅದ್ವೈತ ಸಿದ್ಧಾಂತ, ಮನಃಶಾಸ್ತ್ರ, ಬೌತಶಾಸ್ತ್ರ, ಶ್ರೀಚಕ್ರ ಉಪಾಸನೆ ಇದಕ್ಕೆ ಸಂಬಂಧಿಸಿದ ಕಾದಂಬರಿ ಈಗ ಪ್ರೀ ಬುಕ್ಕಿಂಗ್ ಮೂಲಕ ಲಭ್ಯವಿದೆ ಎಂದು ಲೇಖಕ ಸುಪ್ರೀತ್ ಕೆ.ಎನ್ ತಿಳಿಸಿದ್ದಾರೆ.

By Mahesh
|
Google Oneindia Kannada News

ಪ್ರೀತಿ, ಭಯ, ಭಕ್ತಿ, ಭ್ರೆಮೆ, ನಂಬಿಕೆ, ಅನುಮಾನ, ಜಿಗುಪ್ಸೆ; ಹೀಗೆ ಮನಸ್ಸಿನ ನಾನಾ ಭಾವನಾತ್ಮಕ ಸ್ಥಿತಿಗಳನ್ನೇ ಪಾತ್ರಗಳನ್ನಾಗಿ ಮಾಡಿ, ಅವುಗಳ ಮೂಲಕ ಬದುಕು, ಬ್ರಹ್ಮ, ಬ್ರಹ್ಮಾಂಡಗಳ ಬಗ್ಗೆ ಸತ್ಯಾನ್ವೇಷಣೆ ಮಾಡಿರುವ ವಿಭಿನ್ನ ಕಾದಂಬರಿ ತರ್ಕ. ಇದರಲ್ಲಿ ಯಾವುದನ್ನು ಒಪ್ಪಬೇಕು, ಯಾವುದನ್ನು ಅನುಮಾನಿಸಬೇಕು, ಯಾವುದನ್ನು ಅನುಸರಿಸಬೇಕು ಎಂದು ಓದುಗರು ತಮ್ಮ ಅನುಭವ ಆಲೋಚನೆಗಳ ಆಧಾರದ ಮೇಲೆ ತರ್ಕ ಮಾಡಬೇಕು.

ಈ ಕಾದಂಬರಿಯಲ್ಲಿ ಶ್ರೀಚಕ್ರ ಉಪಾಸನೆಯಲ್ಲಿ ಬರುವ ಪಂಚದಶೀ, ಷೋಡಶೀ ಇತ್ಯಾದಿ ಮಂತ್ರಗಳ ಬಗ್ಗೆ ಒಂದೆಡೆ ಪ್ರಸ್ತಾಪ ಮಾಡಿದರೆ ಮತ್ತೊಂದೆಡೆ ಗ್ರಹಗಳು, ಅನ್ಯಗ್ರಹಗಲ್ಲಿ ವಾಸಿಸುವ ಜೀವಿಗಳು, ಅಣು, ಕಣ, ವಿಶ್ವ; ಇವುಗಳ ಬಗ್ಗೆಯೂ ಪ್ರಸ್ತಾಪವಿದೆ. ಇಡೀ ಕಾದಂಬರಿಯನ್ನು ತ್ರಿಕೋನ ಪ್ರೇಮ ಕತೆಯ ಮೇಲೆ ಕಟ್ಟಲಾಗಿದೆ. [ಮಂದಿರ ಮಸೀದಿ ಕನ್ನಡ ಕಾದಂಬರಿ ಎಲ್ಲೆಲ್ಲಿ ಸಿಗುತ್ತದೆ?]

Tarka Kannada Novel by Supreeth KN Now available on Pre Booking

ಅದ್ವೈತ ಸಿದ್ಧಾಂತ, ಮನಃಶಾಸ್ತ್ರ, ಬೌತಶಾಸ್ತ್ರ, ಶ್ರೀಚಕ್ರ ಉಪಾಸನೆ ಇದಕ್ಕೆ ಸಂಬಂಧಿಸಿದ ಕಾದಂಬರಿ ಈಗ ಪ್ರೀ ಬುಕ್ಕಿಂಗ್ ಮೂಲಕ ಲಭ್ಯವಿದೆ ಎಂದು ಲೇಖಕ ಸುಪ್ರೀತ್ ಕೆ.ಎನ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಸುಪ್ರೀತ್ ಕೆಎನ್ ಅವರು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಕಾಲದಿಂದಲೇ ತಮ್ಮ ಲೇಖನಗಳ ಮೂಲಕ ಗಮನ ಸೆಳೆದವರು. ಕಾದಂಬರಿ (?), ಸ್ವ್ಯಾಪಿಂಗ್ ಮತ್ತು ಮಂದಿರ-ಮಸೀದಿ ಇವರ ಕೃತಿಗಳು. 'ತರ್ಕ' ಇವರ ನಾಲ್ಕನೆಯ ಕೃತಿ. ಸದ್ಯ ಇವರು ಒನ್ಇಂಡಿಯಾ ಸುದ್ದಿ ಸಂಸ್ಥೆಯಲ್ಲಿ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರೀ ಬುಕ್ಕಿಂಗ್: ಪುಸ್ತಕ ಬಿಡುಗಡೆಗೂ ಮುನ್ನ ಆಸಕ್ತರು ಮುಂಗಡವಾಗಿ ಪುಸ್ತಕವನ್ನು ಕಾಯ್ದಿರಿಸಿಕೊಳ್ಳಬಹುದು. ಲಿಂಕ್ ಕ್ಲಿಕ್ ಮಾಡಿ

English summary
Tarka a Kannada Novel which revolves around Advaitha philosophy, Psychology by writer Supreeth KN now available on pre Booking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X