ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕು. ಅಮನಾ ನಾಡಿನ ದೊಡ್ಡ ಕವಯಿತ್ರಿಯಾಗಿ ಬೆಳೆಯಲಿ: ಡಾ. ದೊಡ್ಡರಂಗೇಗೌಡ!

|
Google Oneindia Kannada News

ಬೆಂಗಳೂರು, ಡಿ. 21: ಕೊರೊನಾ ವೈರಸ್‌ ಸೃಷ್ಟಿಸಿರುವ ಸಮಸ್ಯೆಗಳು, ತಂದಿಟ್ಟಿರುವ ಸಂಕಷ್ಟಗಳು ಒಂದೆರಡಲ್ಲ. ಕೋವಿಡ್ ಹಾವಳಿಯಿಂದಾಗಿ ಕಳೆದ ಮಾರ್ಚ್ ತಿಂಗಳಿನಲ್ಲಿ ಮುಚ್ಚಿರುವ ಶಾಲೆಗಳು ಈಗಲೂ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಕುಂಟಿತಗೊಂಡಿವೆ. ಶಿಕ್ಷಣ ಇಲಾಖೆ ವಿದ್ಯಾಗಮ, ಆನ್‌ಲೈನ್‌ ಕ್ಲಾಸ್‌ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪ್ರಯತ್ನ ನಡೆಸಿದೆ.

ಈ ಮಧ್ಯೆ ಆಟ-ಪಾಠಗಳ ಕಲಿಕೆ ಕುಂಠಿತವಾಗಿದ್ದರೂ, ವಿದ್ಯಾರ್ಥಿಗಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಕೋವಿಡ್ ಕಾಲದ ಸಂಕಷ್ಟಗಳ ಕುರಿತು ಬೆಂಗಳೂರಿನ ಬಿಷಪ್ ಕಾಟನ್‌ ಗರ್ಲ್ಸ್ ಸ್ಕೂಲ್‌ನ 7 ನೇ ತರಗತಿಯ ವಿದ್ಯಾರ್ಥಿನಿ ಕು. ಅಮನ, ಲಾಕ್‌ಡೌನ್‌ ಸಮಯದಲ್ಲಿ ಬರೊಬ್ಬರಿ 100ಕ್ಕೂ ಹೆಚ್ಚು ಕವನಗಳನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದಾಳೆ. ಆ ಮೂಲಕ ಕೋವಿಡ್ ಲಾಕ್‌ಡೌನ್ ಕಾಲದ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾಳೆ. ಅವರ ಮೊದಲ ಕವಲ ಸಂಕಲನ 'Echoes of Soulful Poems'ನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬಿಡುಗಡೆ ಮಾಡಿದರು.

ಕವನಸಂಕಲನ ಬಿಡುಗಡೆ

ಕವನಸಂಕಲನ ಬಿಡುಗಡೆ

ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 'Echoes of Soulful Poems' ಕವನ ಸಂಕಲನವನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಬಿಡುಗಡೆ ಗೊಳಿಸಿದರು. ನಂತರ ಮಾತನಾಡಿದ ಸುರೇಶ್ ಕುಮಾರ್, ಕೋವಿಡ್ ಲಾಕ್‌ಡೌನ್ ನಂತಹ ನಕಾರಾತ್ಮಕ ಸನ್ನಿವೇಶದಲ್ಲಿ ವಿದ್ಯಾರ್ಥಿ ಸಮೂಹದ ಸಕಾರಾತ್ಮಕ ಭಾವನೆಗಳಿಗೆ ಸ್ಪೂರ್ತಿಯಾಗುವಂತೆ ಕವನಗಳನ್ನು ಬರೆದಿರುವ ಪುಟ್ಟ ಬಾಲಕಿ ಕು. ಅಮನ ಭವಿಷ್ಯದಲ್ಲಿ ದೊಡ್ಡ ಕವಿಯತ್ರಿಯಾಗಿ ಬೆಳೆಯಲಿ ಎಂದು ಆಶಿಸಿದರು.

ಸಾಹಿತ್ಯ ಲೋಕಕ್ಕೆ ಮತ್ತೊಂದು ಪ್ರತಿಭೆ

ಸಾಹಿತ್ಯ ಲೋಕಕ್ಕೆ ಮತ್ತೊಂದು ಪ್ರತಿಭೆ

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಾಹಿತಿ ಡಾ. ದೊಡ್ಡರಂಗೇಗೌಡ ಅವರು, ಇಷ್ಟು ಸಣ್ಣ ವಯಸ್ಸಿಗೆ, ತನ್ನ ಸುತ್ತಮುತ್ತಲೂ ಕಾಣುವ ಪ್ರತಿಯೊಂದು ವಿಷಯವನ್ನು ಗ್ರಹಿಸಿ, ಕವನ ರೂಪದಲ್ಲಿ ತನ್ನ ಭಾವನೆಗಳನ್ನು ಅಭಿವ್ಯಕ್ತ ಪಡಿಸಿರುವುದು ಅನನ್ಯವಾಗಿದೆ. ಅವಳ ಕವನಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಬ್ಬ ಕವಯಿತ್ರಿಯ ಆಗಮನದ ಭರವಸೆಯನ್ನು ಮೂಡಿಸಿವೆ ಎಂದು ಅಭಿಪ್ರಾಯಪಟ್ಟರು.

ಕವಯಿತ್ರಿಯಾಗಿ ಬೆಳೆಯಲಿ

ಕವಯಿತ್ರಿಯಾಗಿ ಬೆಳೆಯಲಿ

ಈಗಾಗಲೇ, ಕು. ಅಮನ ಬರೆದಿರುವ ಕವನಗಳು ಹಾಗೂ ಸಂದರ್ಶನವು ಹಲವು ದಿನಪತ್ರಿಕೆಗಳು, ಸಾಮಾಜಿಕ ತಾಣದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಮಕ್ಕಳನ್ನು ಮತ್ತಷ್ಟು ಉತ್ತೇಜಿಸಿ, ಪ್ರೋತ್ಸಾಹಿಸಬೇಕಾಗಿದೆ. ಈ ಕವನ ಸಂಗ್ರಹ ನಕಾರಾತ್ಮಕ ಅವಧಿ ಎಂದೇ ಪ್ರಸಿದ್ಧವಾಗಿರುವ ಈ ಸಮಯಕ್ಕೆ ತಕ್ಕ ಉತ್ತರ, ಕು. ಅಮನಾ ನಾಡಿನ ದೊಡ್ಡ ಕವಯಿತ್ರಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಓದುಗರ ಮೆಚ್ಚುಗೆ

ಓದುಗರ ಮೆಚ್ಚುಗೆ

ಸ್ವಪ್ನಾ ಬುಕ್‌ಹೌಸ್‌ ಪ್ರಕಟಿಸಿರುವ 'Echoes of Soulful Poems' ಕವನ ಸಂಕಲದಲ್ಲಿ 64 ಕವನಗಳಿವೆ. ಲಾಕ್‌ಡೌನ್ ಸಂದರ್ಭದಲ್ಲಿನ ಸಂಕಷ್ಟ, ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ತನ್ನ ಭಾವನೆಗಳನ್ನು ಕು. ಅಮನಾ ವ್ಯಕ್ತಪಡಿಸಿದ್ದಾರೆ. ಈ ವರೆಗೆ ಒಟ್ಟು ಸುಮಾರು 100 ಕ್ಕೂ ಹೆಚ್ಚು ಕವಲನಗಳನ್ನು ಆಂಗ್ಲ ಭಾಷೆಯಲ್ಲಿ ಕು. ಅಮನಾ ಬರೆದಿದ್ದಾರೆ. ಅವುಗಳಲ್ಲಿ ಬಹಳ ಮನಮುಟ್ಟುವ ರೀತಿಯಲ್ಲಿ ಸಕಾರಾತ್ಮಕ ಚಿಂತನೆಗಳಿಂದ ಕವನಗಳು ಕೂಡಿವೆ ಎಂದು ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Bishop Cotton Girls School's student Amana used the time of the lockdown to write more than 100 poems in English. Hes first book Echoes of Soulful Poems was released by Education Minister of S Suresh Kumar. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X