ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಭಾಷೆಗಳಲ್ಲಿಆಡಿಯೋ ಪುಸ್ತಕ ಹೊರ ತಂದ ಸ್ಟೋರಿಟೆಲ್‍

|
Google Oneindia Kannada News

ಕಳೆದ ಕೆಲವು ವರ್ಷಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ವಿಷಯದ ಬೇಡಿಕೆ ಗಮನಾರ್ಹವಾಗಿ ಏರಿಕೆಯಾಗಿದೆ ಮತ್ತು ಹೆಚ್ಚುತ್ತಲೇ ಇದೆ. ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಿ ಸ್ಟೋರಿಟೆಲ್ ತನ್ನ ಪ್ರಾರಂಭಿಕ ಚಂದಾದಾರಿಕೆ ಯೋಜನೆ-ಸೆಲೆಕ್ಟ್ ಅನ್ನು ವಿಸ್ತರಿಸುತ್ತಿದ್ದು ಇದು ಗ್ರಾಹಕರಿಗೆ 11 ಪ್ರಾದೇಶಿಕ ಭಾಷೆಗಳಲ್ಲಿ ಆಡಿಯೊ ಪುಸ್ತಕಗಳನ್ನು ಬಳಸಲು ಅವಕಾಶ ಕಲ್ಪಿಸಲಿದೆ.

ಸ್ಟೋರಿಟೆಲ್ 2020ರಲ್ಲಿ ಮರಾಠಿ ಭಾಷೆಯಲ್ಲಿ ಸಾವಿರಾರು ಆಡಿಯೊ ಪುಸ್ತಕಗಳು ಮತ್ತು ಇ ಪುಸ್ತಕಗಳೊಂದಿಗೆ ಸೆಲೆಕ್ಟ್ ಸೇವೆಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿತ್ತು. ಈಗ ಹಿಂದಿ, ಮರಾಠಿ, ಉರ್ದು, ಬಂಗಾಳಿ, ತಮಿಳು, ಮಲಯಾಳಂ, ತೆಲುಗು, ಅಸ್ಸಾಮಿ, ಗುಜರಾತಿ, ಒಡಿಯಾ ಮತ್ತು ಕನ್ನಡ ಭಾಷೆಗಳನ್ನು ಒಳಗೊಂಡು 11 ಭಾಷೆಗಳಿಗೆ ವಿಸ್ತರಿಸಿದ್ದು ತಿಂಗಳಿಗೆ ಕೈಗೆಟುಕುವ ಬೆಲೆ ₹149 ನಿಗದಿಪಡಿಸಿದೆ. ನೀವು ಈ ಪ್ಲಾನ್‍ಗೆ storytel ವೆಬ್ ತಾಣದ ಮೂಲಕ ಚಂದಾದಾರಿಕೆ ಪಡೆಯಬಹುದು.

ಗ್ರಾಹಕರು ಈಗ ಎರಡು ಪಾವತಿಯ ಆಯ್ಕೆಗಳನ್ನು ಪಡೆಯುತ್ತಾರೆ. "ಸೆಲೆಕ್ಟ್" ಪಾವತಿಯ ಆಯ್ಕೆ ರೂ. 149 ಮೂಲಕ ಪ್ರಾದೇಶಿಕ ಭಾಷೆಗಳನ್ನು ಬಳಸುವ ಸೌಲಭ್ಯ. ಮತ್ತೊಂದು "ಅನ್‍ಲಿಮಿಟೆಡ್" ರೂ.299 ಹೊಂದಿದ್ದು ಇಂಗ್ಲಿಷ್ ಭಾಷೆಯೊಂದಿಗೆ ಎಲ್ಲ 11 ಭಾಷೆಗಳೂ ಲಭ್ಯವಿರುತ್ತವೆ. ಇದರ ಉದ್ದೇಶ ಭಾರತೀಯ ಭಾಷೆಗಳನ್ನು ಮಾತ್ರ ಆಲಿಸುವ ಜನರ ಜೊತೆಗೆ, ಹಾಗೂ ಇಂಗ್ಲಿಷ್‍ನ ಪ್ರಮುಖ ಅಂತಾರಾಷ್ಟ್ರೀಯ ಶೀರ್ಷಿಕೆಗಳನ್ನು ಕೂಡಾ ಪಡೆಯುವ ಆಯ್ಕೆ ನೀಡುವುದಾಗಿರುತ್ತದೆ.

ನಾಗಮಂಡಲ, ಅಮ್ಮಚ್ಚಿ ಎಂಬ ನೆನಪು

ನಾಗಮಂಡಲ, ಅಮ್ಮಚ್ಚಿ ಎಂಬ ನೆನಪು

ಪುಸ್ತಕ ಪ್ರೇಮಿಗಳು ಮತ್ತು ಸಾಹಿತ್ಯ ಉತ್ಸಾಹಿಗಳು ಸ್ಟೋರಿಟೆಲ್ ಆ್ಯಪ್‍ನಲ್ಲಿ ಹಲವು ಅತ್ಯಂತ ಜನಪ್ರಿಯ ಪುಸ್ತಕಗಳಾದ ನಾಗಮಂಡಲ, ಅಮ್ಮಚ್ಚಿ ಎಂಬ ನೆನಪು, ಸಂಧ್ಯಾರಾಗ ಅಲ್ಲದೆ ಸಮಕಾಲೀನ ಜನಪ್ರಿಯ ಕೃತಿಗಳಾದ ಘಾಚರ್ ಘೋಚರ್, ಲೈಫ್ ಈಸ್ ಬ್ಯೂಟಿಫುಲ್, ಗ್ರಸ್ಥ, ತೇರು ಇತ್ಯಾದಿಗಳನ್ನು ಪಡೆಯಬಹುದು. ಸ್ಟೋರಿಟೆಲ್ ಹಲವು ಪ್ರಮುಖ ಪ್ರಕಾಶನ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿದೆ.

ಸ್ಥಳೀಯವಾಗಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ

ಸ್ಥಳೀಯವಾಗಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ

ರಿಚ್ ಡ್ಯಾಡ್ ಪೂರ್ ಡ್ಯಾಡ್ ಜೊತೆಗೆ ಪ್ರತಿ ತಿಂಗಳು ಸೇರಿಸಲ್ಪಡುವ ಇನ್ನೂ ಹೆಚ್ಚು ಶೀರ್ಷಿಕೆಗಳನ್ನು ಆಪ್‍ನಲ್ಲಿ ಆಲಿಸಬಹುದು.

ಸ್ಟೋರಿಟೆಲ್ ಸೆಲೆಕ್ಟ್ ಅನ್ನು ವಿಸ್ತರಿಸುವುದು ಸ್ಟೋರಿಟೆಲ್‍ನ ಈ ಪ್ರಯಾಣದಲ್ಲಿ ಮುಂದಿನ ಹೆಜ್ಜೆಯಾಗಿದೆ. ಇದರ ಉದ್ದೇಶ ಗ್ರಾಹಕರಿಗೆ ಅವರು ನಿರೀಕ್ಷಿಸುತ್ತಿರುವ ಆಯ್ಕೆಗಳನ್ನು ನೀಡುವುದು. ಇದು ಸ್ಥಳೀಯವಾಗಿ ಗ್ರಾಹಕರ ಅಗತ್ಯಗಳನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಹೊಂದಿಕೊಳ್ಳುತ್ತದೆ.

ಸ್ಟೋರಿಟೆಲ್ ಇಂಡಿಯಾದ ಯೋಗೇಶ್ ದಶರಥ್

ಸ್ಟೋರಿಟೆಲ್ ಇಂಡಿಯಾದ ಯೋಗೇಶ್ ದಶರಥ್

"ನಮ್ಮ ಗುರಿ ಹೆಚ್ಚು ಹೆಚ್ಚು ಜನರು ಅವರ ಬೇರುಗಳಿಂದ ಕವಲುಗಳಾದ ಕಥೆಗಳು ಮತ್ತು ಸಾಹಿತ್ಯಕ್ಕೆ ಹತ್ತಿರವಾಗಬೇಕು ಎನ್ನುವುದಾಗಿದೆ. ಸೆಲೆಕ್ಟ್ ಅನ್ನು ಉತ್ಪನ್ನವಾಗಿ ವಿಸ್ತರಿಸುತ್ತಾ ನಾವು ಬಳಕೆದಾರರಿಗೆ ಅವರು ಏನನ್ನು ವಾಸ್ತವವಾಗಿ ಬಳಸುತ್ತಾರೋ ಅದನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಪಾವತಿಸುವ ಶಕ್ತಿ ನೀಡುವ ಬಯಕೆ ಹೊಂದಿದ್ದೇವೆ. ನಾವು ಇಂಗ್ಲಿಷ್ ಅಲ್ಲದ ಭಾಷೆಯಲ್ಲಿ ಆಡಿಯೊ ಪುಸ್ತಕಗಳ ಬಳಕೆಗೆ ದುಪ್ಪಟ್ಟು ಆಸಕ್ತಿಯನ್ನು ಕಂಡಿದ್ದೇವೆ, ಆದ್ದರಿಂದಲೇ ನಾವು ಭಾರತಕ್ಕೆ ಅಗತ್ಯ ಯೋಜನೆ ರೂಪಿಸಿದ್ದು ಅದರಲ್ಲಿ ಅವರು ಆಡಿಯೊ ಪುಸ್ತಕಗಳನ್ನು ಅವರದೇ ಭಾಷೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಆನಂದಿಸುವ ಅವಕಾಶ ನೀಡುತ್ತದೆ" ಎಂದು ಸ್ಟೋರಿಟೆಲ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಯೋಗೇಶ್ ದಶರಥ್ ಹೇಳಿದರು.

 2 ಲಕ್ಷಕ್ಕೂ ಹೆಚ್ಚು ಆಡಿಯೊ ಪುಸ್ತಕಗಳು

2 ಲಕ್ಷಕ್ಕೂ ಹೆಚ್ಚು ಆಡಿಯೊ ಪುಸ್ತಕಗಳು

ಸ್ಟೋರಿಟೆಲ್ ಒಂದು ಆಡಿಯೋ ಪುಸ್ತಕ ಹಾಗೂ ಇ ಪುಸ್ತಕ ಆಪ್‍ನ ಸ್ಟ್ರೀಮಿಂಗ್ ಸೇವೆಯಾಗಿದ್ದು ಭಾರತದಲ್ಲಿ ನವೆಂಬರ್ 27, 2017ರಲ್ಲಿ ಪ್ರಾರಂಭಿಸಲಾಗಿದೆ. ಕಂಪನಿಯು ಸ್ವೀಡನ್‍ನ ಸ್ಟಾಕ್‍ಹೋಮ್‍ನಲ್ಲಿ ಮುಖ್ಯ ಕಛೇರಿ ಹೊಂದಿದೆ ಮತ್ತು ಪ್ರಸ್ತುತ ವಿಶ್ವದಾದ್ಯಂತ 25 ಮಾರುಕಟ್ಟೆಗಳಲ್ಲಿ ವ್ಯಾಪ್ತಿ ಹೊಂದಿದೆ.

ಭಾರತದಲ್ಲಿ ಈ ಆ್ಯಪ್ ಪ್ರಸ್ತುತ ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು, ಬಂಗಾಳಿ, ತಮಿಳು, ಮಲಯಾಳಂ, ತೆಲುಗು, ಅಸ್ಸಾಮಿ, ಗುಜರಾತಿ ಮತ್ತು ಕನ್ನಡ ಒಳಗೊಂಡು 12 ಭಾಷೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಆಡಿಯೊ ಪುಸ್ತಕಗಳು ಮತ್ತು ಇ ಪುಸ್ತಕಗಳನ್ನು ಒಳಗೊಂಡಿದೆ. ನಮ್ಮ ಉದ್ದೇಶ ಯಾರೇ ಆದರೂ ಎಲ್ಲಿಯೇ ಆದರೂ ಮತ್ತು ಯಾವುದೇ ಸಮಯದಲ್ಲಿ ಉತ್ತಮ ಕಥೆಗಳನ್ನು ಹಂಚಿಕೊಳ್ಳುವ ಮತ್ತು ಆನಂದಿಸುವ ಮೂಲಕ ವಿಶ್ವವನ್ನು ಹೆಚ್ಚು ಅನುಭೂತಿ ಹೊಂದಿದ ಸ್ಥಳವನ್ನಾಗಿ ಮಾಡುವುದು.

ಲಭ್ಯತೆ: ಸ್ಟೋರಿಟೆಲ್ ಈಗ ಗೂಗಲ್ ಪ್ಲೇಸ್ಟೋರ್ http://bit.ly/2rriZaU ಮತ್ತು ಐಒಎಸ್ ಆಪ್ ಸ್ಟೋರ್ https://apple.co/2zUcGkG ನಲ್ಲಿ ಲಭ್ಯ.

English summary
Storytel is expanding its starter subscription plan - Select - which allows customers to access audiobooks in 11 regional languages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X