ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ

By ಮಲೆನಾಡಿಗ
|
Google Oneindia Kannada News

ಪುರಾಣ ಎಂದರೇನು? ಎಂಬುದಕ್ಕೆ "ಪುರೇ ನವ ಇತಿ ಪುರಾಣಃ" ಎಂಬ ಮಾತಿದೆ. ಪುರಾಣ ಎಂಬುದು ಹೊಸ ಹೊಸ ಭಾಷ್ಯದೊಂದಿಗೆ ಅಂದಿಗೂ ಇಂದಿಗೂ ಮೆಚ್ಚುವಂತೆ ಪ್ರಸ್ತುತಪಡಿಸುವುದು ಬಹುಮುಖ್ಯವಾಗುತ್ತದೆ. ಇಲ್ಲದಿದ್ದರೆ, 'ಪುರಾಣವಿತ್ಯೇವ ನಾ ಸಾಧು ಸರ್ವಂ' ಎಂಬ ಪುರಾಣ ಹೇಳಿದ್ದೆಲ್ಲ ಸರಿ ಎಂದು ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದರೆ ಬಾವಿಕಪ್ಪೆಗಳಂಥ ಮನಸ್ಥಿತಿ ಮುಂದುವರೆಯುತ್ತದೆ. 'ದ್ವಾಪರ' ಎಂಬ ಹೆಸರಿನಲ್ಲಿ ಮಹಾಭಾರತ ಕಾವ್ಯಕ್ಕೆ ಕಂನಾಡಿಗ ನಾರಾಯಣ ಅವರು ನೀಡಿರುವ ವಿಶ್ಲೇಷಣೆಯ ಬಗ್ಗೆ ನನ್ನ ಅನಿಸಿಕೆ ಇಲ್ಲಿದೆ...

ಮಹಾಭಾರತದ ಬೃಹತ್ ಕಥನವನ್ನು, ಒಂದು ಯುಗದ ಮಹಾನ್ ಕಾವ್ಯವನ್ನು ಕಲಿಯುಗದ ಜನ ಸಾಮಾನ್ಯರಿಗೂ ತಿಳಿಯುವಂತೆ ಸರಳವಾಗಿ, ಸಮರ್ಥವಾಗಿ, ವಾಸ್ತವಕ್ಕೆ ಹತ್ತಿರವಾಗಿ ರೂಪಿಸುವಲ್ಲಿ ಶಿವಮೊಗ್ಗದ ಗಾಡಿಕೊಪ್ಪದ ಕಂನಾಡಿಗ ನಾರಾಯಣ ಅವರು ಗೆದ್ದಿದ್ದಾರೆ. [ನತದೃಷ್ಟ ನಾಯಕನ ಉಭಯ ಕುಶಲೋಪರಿ]

ಇಲ್ಲಿ ಕಥೆ ಎಲ್ಲರಿಗೂ ತಿಳಿದಿದ್ದೇ ಆದರೂ, ನಿರೂಪಣಾ ಶೈಲಿ ನಾಟಕವೊಂದರಲ್ಲಿನ ಪಾತ್ರಧಾರಿಗಳ ಸ್ವಗತದ್ದಂತಿದೆ. ವ್ಯಾಸರಿಂದ ಆರಂಭವಾದ ಕಥನ ವ್ಯಾಸರು ಕಥನ ಬರೆಯುವ ಗುಂಗಿನೊಳಗೆ ಮುಳುಗುವುದರೊಂದಿಗೆ ಕೊನೆಗೊಳ್ಳುತ್ತದೆ. ಈ ರೀತಿಯ ಪ್ರಯೋಗ ಹಾಗೂ ಅದರ ಹಿಂದಿನ ಪರಿಶ್ರಮಕ್ಕೆ ತಲೆದೂಗಲೇ ಬೇಕು. ಕಲಿಯುಗದಲ್ಲಿ ದ್ವಾಪರದ ಅನುಭವ ಪಡೆಯಲು ಅವಶ್ಯವಾಗಿ ಕಂನಾಡಿಗರ ವಿಶ್ಲೇಷಣೆಯನ್ನು ಒಮ್ಮೆ ಓದಿ...ಲೇಖಕರ ಫೇಸ್ ಬುಕ್ ಐಡಿ ಲಿಂಕ್ ಇಲ್ಲಿದೆ

ಪಾತ್ರಗಳು ಮಾತಾಡಿವೆ, ಪರಿಸರ ಮೌನವಾಗಿದೆ

ಪಾತ್ರಗಳು ಮಾತಾಡಿವೆ, ಪರಿಸರ ಮೌನವಾಗಿದೆ

ವ್ಯಾಸ, ಭೀಷ್ಮ, ಕುಂತಿ, ಕೃಷ್ಣ, ಪಾಂಡವರು, ಕೌರವರು, ದ್ರೌಪದಿ, ವಿದುರ ಎಲ್ಲಾ ಪ್ರಮುಖ ಪಾತ್ರಗಳು ತಮ್ಮ ಅನುಭವ, ತಮ್ಮವರ ಜೊತೆಗಿನ ಸಾಂಗತ್ಯ, ಅಂದಿನ ಪರಿಸ್ಥಿತಿಯನ್ನು 'ಪಾದ್ರಿ ಮುಂದೆ ಕನ್ಫೆಷನ್ 'ಗೆ ಕೂತವರಂತೆ ಕಥೆ ಹೇಳುತ್ತಾ ಹೋಗುತ್ತಾರೆ.

ಪ್ರತಿ ಪಾತ್ರಕ್ಕೂ ಸೂಕ್ತ ಸಂಪರ್ಕ ಒದಗಿಸಿರುವುದರಿಂದ ಸರಾಗವಾಗಿ ಜೀವನದಿಯಂತೆ ಕಥೆ ಹರಿಯುತ್ತದೆ.

ಆದರೆ, ಪಾತ್ರಗಳು ಹುಟ್ಟಿ ಬೆಳೆದ ಪರಿಸರ ಹಾಗೂ ಮುಖ್ಯ ಪಾತ್ರಗಳ ಜೊತೆಗಿನ ಜನ ಸಾಮಾನ್ಯರ ಒಡನಾಟದ ಬಗ್ಗೆ ಹೆಚ್ಚಿನ ವಿವರಣೆ ಇಲ್ಲ.

ಪಾತ್ರ, ಪಾತ್ರಧಾರಿ ಮಾತ್ರ ಮುಖ್ಯವಾಗಿಸಲಾಗಿದೆ

ಪಾತ್ರ, ಪಾತ್ರಧಾರಿ ಮಾತ್ರ ಮುಖ್ಯವಾಗಿಸಲಾಗಿದೆ

ಉದಾಹರಣೆಗೆ ಊರುಗಳ ಹೆಸರುಗಳ ಬಗ್ಗೆ ವಿವರಣೆ ಓದುಗರು ಬಯಸುವ ವೇಳೆಗೆ ಕಥೆ ಮುಂದಕ್ಕೆ ಸಾಗಿರುತ್ತದೆ ಇಲ್ಲಿ ಪಾತ್ರ, ಪಾತ್ರಧಾರಿ ಮಾತ್ರ ಮುಖ್ಯವಾಗಿಸಲಾಗಿದೆ. ಪಾತ್ರದ ನೆಲೆಯ ಬಗ್ಗೆ ಗಮನ ಹರಿಸಿಲ್ಲ. ಅರಮನೆ ಹಾಗೂ ಮುಖ್ಯ ಪಾತ್ರಧಾರಿಗಳ ಸುತ್ತಲೇ ಕಥೆ ಸುತ್ತುತ್ತದೆ. ಈ ಪಾತ್ರಧಾರಿಗಳ ಮನಸ್ಸಿನ ತುಮುಲ, ಎದುರಿಸುವ ಪರಿಸ್ಥಿತಿ, ಸಂಕಷ್ಟಗಳನ್ನು ನಿಭಾಯಿಸುವ ರೀತಿಯನ್ನು ಅಚ್ಚುಕಟ್ಟಾಗಿ ದಾಖಲೀಕರಿಸಲಾಗಿದೆ. ಕಥಾ ನಿರೂಪಣಾ ಶೈಲಿ ಹೆಚ್ಚಿನ ವಿವರಣೆ ಬೇಡುವುದಿಲ್ಲ ಎಂದು ಲೇಖಕರು ಸಮಜಾಯಿಷಿ ನೀಡಬಹುದು.

ಮಹಿಳಾ ಪಾತ್ರಧಾರಿಗಳಿಗೆ ಹೆಚ್ಚಿನ ಮಹತ್ವ

ಮಹಿಳಾ ಪಾತ್ರಧಾರಿಗಳಿಗೆ ಹೆಚ್ಚಿನ ಮಹತ್ವ

ಮಹಿಳಾ ಪಾತ್ರಧಾರಿಗಳಿಗೆ ಹೆಚ್ಚಿನ ಮಹತ್ವ ಹಾಗೂ ಪುಟಗಳು ಸಿಕ್ಕಿವೆ. ಭೋಗ, ಕಾಮ, ಅಭ್ಯುದಯ, ಮಾನಸಿಕ ತುಮುಲ, ಸಾಂದರ್ಭಿಕ ಹೊಂದಾಣಿಕೆ ಇವೆ ಇಲ್ಲಿ ಪಾತ್ರಗಳಾಗಿವೆ. ಮಹಿಳಾ ಪಾತ್ರಗಳು ಎತ್ತುವ ಕೆಲ ಪ್ರಶ್ನೆಗಳು ಕಾಡುತ್ತವೆ. ಆದರೆ, ಕೆಲ ಪೋಷಕ ಪಾತ್ರಗಳನ್ನು ಕಥಾ ಪೋಷಣೆಗೆ ಮಾತ್ರ ಬಳಸಲಾಗಿದೆ. ಉದಾಹರಣೆ ಶಕುನಿ, ಗಾಂಧಾರಿ, ಏಕಲವ್ಯ, ಬಲರಾಮ ಪಾತ್ರಗಳ ಬಗ್ಗೆ ಹೊಸ ಸಂಗತಿಗಳನ್ನು ಹುಡುಕಿದರೆ ನಿರಾಶೆಯಾಗುತ್ತದೆ. ಶಕುನಿಯನ್ನಂತೂ ದ್ಯೂತದ ಆಟಕ್ಕೆ ಮಾತ್ರ ಕರೆಸಿಕೊಂಡಂತೆ ಇದೆ.

ಪ್ರೇರಣೆ, ಆಧಾರ, ರಿಮೇಕ್ ಅಲ್ಲದ ನಿರೂಪಣೆ

ಪ್ರೇರಣೆ, ಆಧಾರ, ರಿಮೇಕ್ ಅಲ್ಲದ ನಿರೂಪಣೆ

ಎಸ್ ಎಲ್ ಭೈರಪ್ಪ ಅವರ ಪರ್ವ, ವಿಎಸ್ ಖಾಂಡೇಕರ ಅವರ ಯಯಾತಿ, ಇರಾವತಿ ಕರ್ವೆ ಅವರ ಯುಗಾಂತ ಸೇರಿದಂತೆ ಕನ್ನಡ ಕವಿಗಳು ಮಹಾಭಾರತ ಆಧಾರವಾಗಿ ಬರೆದಿರುವ ಕಾವ್ಯಗಳು ಕಂನಾಡಿಗ ಅವರಿಗೆ ಪ್ರೇರಣೆಯಾಗಿರಬಹುದು.

ಈ ಎಲ್ಲವನ್ನು ಓದಿರುವ ಕನ್ನಡಿಗರು 'ದ್ವಾಪರ' ವನ್ನು ಕೈಗೆತ್ತಿಕೊಂಡಾಗ ಇತರೆ ಕೃತಿಗಳ ಜೊತೆ ಹೋಲಿಸಿ ನೋಡಬಹುದು.ಅದರೆ, ಪುರಾಣ ಹಾಗೂ ಮಹಾಕಾವ್ಯಗಳಿಗೆ ಮತ್ತೊಮ್ಮೆ ಭಾಷ್ಯ ಬರೆಯುವುದು, ವಿಶ್ಲೇಷಣೆ ಮಾಡುವುದು ಸುಲಭದ ಕೆಲಸವಲ್ಲ. ಬೇರೆ ಕಾದಂಬರಿಗಳ ಪ್ರಭಾವ, ಪ್ರೇರಣೆ ನಿರೂಪಣೆಯಲ್ಲಿ ಕಂಡು ಬಂದರೂ ಇದು ರಿಮೇಕ್ ಅಲ್ಲ ಅಪ್ಪಟ ಪರಿಶ್ರಮದಿಂದ ಬಂದ ಕೃತಿ.
ವ್ಯಾಸ ಮುನಿ ರಚಿತ ಅಥವಾ ಉಕ್ತ ಮಹಾಭಾರತ

ವ್ಯಾಸ ಮುನಿ ರಚಿತ ಅಥವಾ ಉಕ್ತ ಮಹಾಭಾರತ

ಆದರೆ, ವ್ಯಾಸ ಮುನಿ ರಚಿತ ಅಥವಾ ಉಕ್ತ ಮಹಾಭಾರತ ಮೂಲ ಕೃತಿಯ ಅರಿವು ಕೆಲ ಪ್ರಜ್ಞರಿಗೆ ಮಾತ್ರ ಇರುತ್ತದೆ. ಇಂಥ ಪ್ರಜ್ಞ ಹಾಗೂ ಪಾಮರರ ಮನಸ್ಸಿಗೆ ಒಪ್ಪುವಂಥ ಕಥನವನ್ನು ರೂಪಿಸುವಾಗ ಅದರಲ್ಲೂ ಫ್ಯಾಂಟಸಿ ರಹಿತ ವಾಸ್ತವವಾದ ರೂಪದಲ್ಲಿ ಕಥೆ ಹೆಣೆಯುವುದು ಕಷ್ಟಕರ. ಇಲ್ಲದಿದ್ದರೆ ಪೂರ್ವಾಗ್ರಹದಿಂದ ಈ ಕಥನ ಪಾರಾಯಣಕ್ಕೆ ತೊಡಗುವ ಜನಕ್ಕೆ ಆರಂಭದಲ್ಲೇ ಬೇಸರ ತರಿಸಬಹುದು.

ದೈವದ ಪಾತ್ರ ಇಲ್ಲಿ ಜನ ಸಾಮಾನ್ಯನಂತೆ ನಡೆದುಕೊಳ್ಳುವುದನ್ನು ಅರಗಿಸಿಕೊಳ್ಳುವ ಮನಸ್ಥಿತಿ ತರುವಂತೆ ಮಾಡುವಲ್ಲಿ ಕಂನಾಡಿಗ 'ಜಯ' ಸಾಧಿಸಿದ್ದಾರೆ. ಅದರೆ, ಜನಪದ ಕಥೆಯಾಗಿ ಮೌಖಿಕವಾಗಿ ಹರಡಿದ ಮಹಾಭಾರತವನ್ನು ಈ ದ್ವಾಪರದಲ್ಲಿ ಕಾಣಲು ಸಾಧ್ಯವಾಗಿಲ್ಲ. ಈ ಬಗ್ಗೆ ಮುನ್ನುಡಿ, ಬೆನ್ನುಡಿಯಲ್ಲಾದರೂ ಈ ಬಗ್ಗೆ ಹೇಳಬಹುದಾಗಿತ್ತು.

ಪ್ರಸಂಗಗಳು, ಘಟನಾವಳಿಗಳು

ಪ್ರಸಂಗಗಳು, ಘಟನಾವಳಿಗಳು

ಪುರಾಣವೆಂಬಂತೆ ಮಹಾಭಾರತದ ಹಲವು ಪ್ರಸಂಗಗಳು ಜನಮಾನಸದಲ್ಲಿ ಹಾಸುಹೊಕ್ಕಿವೆ.

ಮುಖ್ಯವಾಗಿ ಕೃಷ್ಣಲೀಲೆ, ಪಾಂಡವರ ಜನನ, ದೈತ್ಯ ಸಂಹಾರ, ಯುದ್ಧ, ಭಗವದ್ಗೀತೆ ಬೋಧನೆ, ಕರ್ಣನನ್ನು ಕಳೆದುಕೊಂಡ ಕುಂತಿ ಯಾತನೆ, ದ್ಯೂತ, ದ್ರೌಪದಿ ವಸ್ತ್ರಾಪಹರಣ ಹೀಗೆ ನಾನಾ ಘಟನೆಗಳಿಗೆ ವಾಸ್ತವದ ಲಾಜಿಕ್ ನೀಡಿರುವುದರಿಂದ ಮ್ಯಾಜಿಕ್ ಬಯಸುವವರಿಗೆ ನಿರಾಶೆಯಾಗಬಹುದು.

ಕುಂತಿ ಹಾಗೂ ಕರ್ಣನ ನಡುವಿನ ಎಪಿಸೋಡು ನೀರಸವಾಗಿದ್ದು, ಏಕಲವ್ಯ ನ ಶಪಥ ಏನಾಯಿತು, ರಾಜ್ಯಭಾರದ ಬಗ್ಗೆ ವಿದುರನ ಸಲಹೆಗಳೇನು?, ಕೃಷ್ಣನ ಪಾತ್ರ ಫ್ಯಾಂಟಸಿ ಬದಲಿಗೆ ಸಾಮಾನ್ಯವಾಗಿಸಿದ್ದು, ಕೃಷ್ಣನ ಅವತಾರವನ್ನು ವಾಸ್ತವ ಸತ್ಯಕ್ಕೆ ತರುವಲ್ಲಿ ಹೆಚ್ಚಿನ ಶ್ರಮವಹಿಸಿದ್ದು,ಯುದ್ಧ ತಂತ್ರ ರೂಪಿಸುವ ಬಗ್ಗೆ ವಿವರಣೆ ಇಲ್ಲದಿರುವುದು.

ಸುಯೋಧನನ ಅಂತ್ಯ ತ್ವರಿತವಾಗಿ ನಡೆದಿದ್ದು

ಸುಯೋಧನನ ಅಂತ್ಯ ತ್ವರಿತವಾಗಿ ನಡೆದಿದ್ದು

ಸುಯೋಧನನ ಅಂತ್ಯ ತ್ವರಿತವಾಗಿ ನಡೆದಿದ್ದು ಹೀಗೆ ಅನೇಕ ಘಟನೆಗಳು ಲೇಖಕರ ನಿರೂಪಣೆ ನಮ್ಮ ಗ್ರಹಿಕೆ ನಿಲುಕುವಂತಿದ್ದರೂ ಕೆಲವೊಮ್ಮೆ ರಂಜನೆ ನೀಡದೆ ಕೇವಲ ಮಾಹಿತಿ ಸಂಪಾದನೆ ಆಗರ ಬಿಟ್ಟಿದೆ.

ಕೆಲ ಡೈಲಾಗುಗಳು: ಎಲ್ಲಾ ಸೋಲುಗಳ ಅವಮಾನಕ್ಕಿಂತಲೂ ಹುಟ್ಟಿನ, ಜಾತಿಯ ಬಗೆಗಿನ ಅವಮಾನ ಹೆಚ್ಚು ಪರಿಣಾಮಕಾರಿಯಾದದ್ದು!
* ನಮ್ಮನ್ನು ಎಲ್ಲ ಕಾಲಕ್ಕೂ ಮಕ್ಕಳನ್ನು ಹೆರುವ ಯಂತ್ರಗಳಂತೆ, ಪ್ರಾಣಿಗಳಂತೆ ನೋಡಿದರೇ ವಿನಾ ಮನುಷ್ಯರಂತೆ ಕಾಣಲಿಲ್ಲ.
* ಕರ್ಣ ; ನನ್ನ ಹುಟ್ಟು ಮತ್ತು ಸಾವುಗಳೆರಡರಲ್ಲೂ ನನ್ನವರೆಂದುಕೊಂಡವರೆ ನನ್ನನ್ನು ತೊರೆದಿದ್ದರು ! ಇನ್ಯಾವ ಧರ್ಮವಿದೆ ಈ ಭೂಮಿಯಲ್ಲಿ
* ಆರಂಭದಲ್ಲಿ ಕಾಣುವ ಇಲ್ಲಿ ಯಾವುದೂ ಹೊಸತಲ್ಲ, ಯಾವುದೂ ಹಳೆಯದೂ ಅಲ್ಲ! ಇಲ್ಲಿ ಯಾವುದೂ ಆರಂಭವಲ್ಲ. ಯಾವುದೂ ಅಂತ್ಯವೂ ಅಲ್ಲ, ಇಲ್ಲಿ ಯಾವುದೂ ಶಾಶ್ವತವಲ್ಲ, ಯಾವುದೂ ಅಶಾಶ್ವತವೂ ಅಲ್ಲ !, ಆದರೆ, ನಿರಂತರ ಬದಲಾವಣೆಯೊಂದೇ ಶಾಶ್ವತ ಗಮನ ಸೆಳೆಯುತ್ತದೆ.

ಕಂನಾಡಿಗ ನಾರಾಯಣ ಪರಿಚಯ

ಕಂನಾಡಿಗ ನಾರಾಯಣ ಪರಿಚಯ

* 1966ರಲ್ಲಿ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಜನನ.
* ಇಂಗ್ಲೀಷ್, ಇತಿಹಾಸ, ರಾಜ್ಯಶಾಸ್ತ್ರ ಹಾಗೂ ಕಾನೂನು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ.
ಕೃತಿಗಳು: ಕಥಾ ಸಂಕಲನ: ಮಂಡಲ, ಕಪ್ಪು ರಂಧ್ರ, ಹಸಿರು ಕಣ್ಣಿನ ಹುಡುಗಿ, ನರವಿಂಧ್ಯ, ತಲ್ಲಣದ ಆ ಕ್ಷಣ, ಜೀ ಗಾಂಧಿ,
* ಕಾಂಡ (ರಾಮಾಯಣಕ್ಕೊಂದು ಮಧುರ ವ್ಯಾಖ್ಯಾನ)
* ದ್ವಾಪರ (ಸಂಕೀರ್ಣ ಮಹಾಭಾರತಕ್ಕೊಂದು ವಿಭಿನ್ನ ವಿಶ್ಲೇಷಣೆ)
* ಕಾದಂಬರಿ: ಆಕಾಶ, ಭೂಮಿ

* ದ್ವಾಪರ: ನವಕರ್ನಾಟಕ ಪಬ್ಲಿಕೇಷನ್ ಪ್ರಕಟಣೆ
* ಬೆಲೆ: 250ರು
* ಲೇಖಕರ ಇಮೇಲ್ ಐಡಿ: [email protected]

English summary
Dwapara A Kannada Novel by Kamnadiga Narayana narrates the story of the Mahabharata, Several principal characters reminisce almost their entire lives. Story is narrated in the form of personal reflections with absence of divine intervention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X