{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/literature/book/remade-in-america-book-by-anil-bharadwaj-095309.html" }, "headline": "Reಮೇಡ್ ಇನ್ ಅಮೆರಿಕ, ನಿರುದ್ಯೋಗಿ ಪರದೇಶಿಯ ದೈನಿಕ ಧಾರಾವಾಹಿ", "url":"http://kannada.oneindia.com/literature/book/remade-in-america-book-by-anil-bharadwaj-095309.html", "image": { "@type": "ImageObject", "url": "http://kannada.oneindia.com/img/1200x60x675/2015/07/14-1436868199-anil-bharadwaj1.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/07/14-1436868199-anil-bharadwaj1.jpg", "datePublished": "2015-07-14T15:43:57+05:30", "dateModified": "2015-07-25T12:24:31+05:30", "author": { "@type": "Person", "name": "Prasad" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Book", "description": "Remade in America. A collection of Kannada (essays) articles based on self experience about American life by Indian journalist Anil Bharadwaj, published by Srushti publications, Bengaluru. Journalists Vishweshwar Bhat, Udaya Marakini and Jogi have written foreword to this book. ", "keywords": "Remade in America, book by Anil Bharadwaj, kannada literature, america travelogue by journalist, lifestyle in america, software wife and house husband, Reಮೇಡ್ ಇನ್ ಅಮೆರಿಕ, ನಿರುದ್ಯೋಗಿ ಪರದೇಶಿಯ ಧಾರಾವಾಹಿ", "articleBody":"ಬರೆಯುವುದು ಕಷ್ಟ, ಬರೆದು ಓದಿಸುವುದೂ ಕಷ್ಟ, ಇನ್ನು ಪುಸ್ತಕ ಮಾಡುವುದು ಮತ್ತಷ್ಟು ಕಷ್ಟ ಎಂದು ಹೇಳುತ್ತಲೇ ಈ ಮೂರನ್ನೂ ಸುಳ್ಳು ಮಾಡಿ, ಸುಲಲಿತವಾದ ಬರವಣಿಗೆಗಳ ಮೂಲ ಓದುಗರು ಚಪ್ಪರಿಸಿ ಓದುವಂತೆ ಮಾಡುವ ಎರಡು ಪುಸ್ತಕಗಳನ್ನು ತಂದವರು ಪತ್ರಕರ್ತ ಅನಿಲ್ ಭಾರದ್ವಾಜ್.ರೀಮೇಡ್ ಇನ್ ಅಮೆರಿಕಾ ಮತ್ತು ಸ್ಟೇಟ್ಸ್ ಎಕ್ಸ್ ಪ್ರೆಸ್. ಮೊದಲನೆಯ ಪುಸ್ತಕದಲ್ಲಿ ಅವರು ಅಮೆರಿಕಾದ ಅರಿಝೋನಾ ರಾಜ್ಯದ ಟೆಂಪೆ ಎಂಬ ಊರಲ್ಲಿ ತಮ್ಮ ಒಂದು ಕಾಲು ವರ್ಷದ ವಾಸದ ಬಗ್ಗೆ ಬರೆದಿದ್ದಾರೆ. ಇದು ಪ್ರವಾಸ ಕಥನವಲ್ಲ. ಬದಲಾಗಿ ಅಮೆರಿಕಾದ ಆತ್ಮವನ್ನು ಹಿಡಿಯುವ ಪ್ರಯತ್ನ ಅನ್ನಬಹುದು.ರೋಚಕ ಕಥಾನಕ : ಅವರ ಅಮೆರಿಕಾ ಪ್ರವಾಸವೇ ಒಂದು ರೋಚಕ ಕತೆ. ಸುವರ್ಣ ನ್ಯೂಸ್ ನಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿದ್ದ ಅವರು ಪತ್ನಿಯ ಸಲುವಾಗಿ ತಮ್ಮ ನೌಕರಿಯನ್ನು ತ್ಯಾಗ ಮಾಡಿದರು. ಯಾಕೆಂದರೆ ಅವರ ಪತ್ನಿಗೆ ವಿಪ್ರೋ ಮೂಲಕ ಅಮೆರಿಕಾದಲ್ಲಿ ದುಡಿಯುವ ಅವಕಾಶ ಸಿಕ್ಕಿತು. ಐದು ವರ್ಷದ ಮಗು ಕೂಡಾ ತಾಯಿ ಜೊತೆ ಹೋಗುವುದು ಅನಿವಾರ್ಯವಾಗಿದ್ದರಿಂದ ಅನಿಲ್ ಅವರ ಜೊತೆ ಪೋಷಕನಾಗಿ ಹೋದರು. ಈ-ಪುಸ್ತಕವನ್ನು ಇಲ್ಲಿ ಓದಬಹುದುಅಲ್ಲಿ ಕೆಲಸ ಮಾಡುವಂತಿಲ್ಲ. ಹಾಗಾಗಿ ಮನೆಕೆಲಸ ಮತ್ತು ಅಡುಗೆಮನೆಯೇ ಅವರ ಕಾರ್ಯಕ್ಷೇತ್ರ. ಈ ಹೌಸ್ ಹಸ್& zwnj ಬೆಂಡ್ ಕೆಲಸವನ್ನು ಯಾವುದೇ ತಕರಾರಿಲ್ಲದೇ ಒಪ್ಪಿಕೊಂಡ ಅನಿಲ್ ಅದನ್ನು ಸಹ್ಯವಾಗಿಸಿದ್ದು ಬರೆವಣಿಗೆಯ ಮೂಲಕ. ಅಲ್ಲಿಯ ಊರು, ಜನ, ಮಾಲ್, ಪದ್ಥತಿ, ತನ್ನ ಸ್ಥಿತಿಗತಿಗಳ ಬಗ್ಗೆ ತಮಾಷೆಯಾಗಿ ಬರೆದಿದ್ದಾರೆ. ಅಲ್ಲಿ ಇದೇ ಹೋಗಿ ಬದುಕು ಕಟ್ಟುವ ಕನಸು ಕಾಣುವವರಿಗೆ ಇದು ಗೈಡ್ ಥರ ಇದೆ. ಇತರರಿಗೆ ಒಂದು ಸಾರಸ್ವಕರ ಓದು.ಪುಸ್ತಕ ಬಿಡುಗಡೆ ಎಂದು? : ಅಮೆರಿಕಾದಲ್ಲಿರುವ ಕನ್ನಡಿಗರೂ ಈ ಕೃತಿ ಓದಬೇಕು ಅನ್ನೋದು ಅವರಾಸೆ. ಆ ಕಾರಣಕ್ಕೆ ನಿಮ್ಮ ಸಹಾಯ ಕೇಳುತ್ತಿದ್ದಾರೆ. ಇದೇ ತಿಂಗಳ ಜುಲೈ 27ರಂದು ಸೋಮವಾರ ರೀಮೇಡ್ ಇನ್ ಅಮೆರಿಕಾ ಪುಸ್ತಕ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಅದಕ್ಕೆ ಮುಂಚೆ ಜುಲೈ 22ರಂದು ಸ್ಟೇಟ್ಸ್ ಎಕ್ಸ್ ಪ್ರೆಸ್ ಬಳ್ಳಾರಿಯಲ್ಲಿ ಬಿಡುಗಡೆ. ಆ ಪುಸ್ತಕ ಹಲವಾರು ಬಿಡಿ ಲೇಖನಗಳ ಗುಚ್ಛ ಅಷ್ಟೆ. ಪುಸ್ತಕದ ಬೆಲೆ ರು. 240.ತನ್ನ ಪತ್ರಿಕೋದ್ಯಮದ-ಜೀವನದ ದಿಕ್ಕನ್ನೇ ಬದಲಿಸಿ ಗುರುವಿನ ಸ್ಥಾನದಲ್ಲಿ ನಿಂತಿದ್ದಾರ ಎಂದು ಅನಿಲ್ ಹೇಳುವ, ಪತ್ರಕರ್ತರಾದ ಉದಯ ಮರಕಿಣಿ, ಗಿರೀಶ್ ರಾವ್ (ಜೋಗಿ) ಮತ್ತು ವಿಶ್ವೇಶ್ವರ ಭಟ್ ಅವರು ಈ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.ಈ ಮೂವರು ಬರೆದಿರುವ ಮುನ್ನುಡಿಯ ಝಲಕ್ ಕೆಳಗಿವೆ.ಜೋಗಿಈ ಪುಸ್ತಕವನ್ನು ಓದುತ್ತಾ ನಾನು ಮನಸಾರಿ ನಕ್ಕಿದ್ದೇನೆ. ಅನಿಲನ ಪಾಡು ನನಗೆ ಖುಷಿ ಕೊಟ್ಟಿದೆ, ಕಚಗುಳಿ ಇಟ್ಟಿದೆ, ಎಚ್ಚರಿಸಿದೆ. ಅಂಥದ್ದೊಂದು ಪರಿಸ್ಥಿತಿ ಎದುರಾದರೆ ನಾನು ಹೇಗೆ ಅದಕ್ಕೆ ಮುಖಾಮುಖಿ ಆಗಬಲ್ಲೆ ಎಂದು ಯೋಚಿಸುವಂತೆ ಮಾಡಿದೆ. ಈ ಕೃತಿ ಅಮೆರಿಕದಲ್ಲಿ ಕೆಲಸದಲ್ಲಿರುವ ಗಂಡನ್ನು ಮದುವೆಯಾಗಿ ಅಲ್ಲಿಗೆ ಹೋಗುವ ಹೆಣ್ಮಕ್ಕಳ ಪಾಲಿಗೆ ಅತ್ಯುತ್ತಮ ಕೈಪಿಡಿ. ಅಮೆರಿಕದಲ್ಲಿ ಇದ್ದು ಬರಲು ಹೋಗುವ ತರುಣರು ಓದಲೇಬೇಕಾದ ಪುಸ್ತಕ. ದೇಸಾಯಿಯ ಭಗವದ್ಗೀತೆ : ಜೋಗಿ ಸಣ್ಣ ಕಥೆಉದಯ ಮರಕಿಣಿಅನಿಲ್ ವಾರಕ್ಕೊಮ್ಮೆ ಒಂದು ಚಾಪ್ಟರನ್ನು ಬರೆದು ನನಗೆ ಮೇಲ್ ಮಾಡುತ್ತಾ ಹೋದರು. ಅದನ್ನು ಓದಿ ನನಗೆ ಸಂತೋಷವೂ ಆಶ್ಚರ್ಯವೂ ಆದದ್ದು ಸುಳ್ಳಲ್ಲ. ಯಾಕೆಂದರೆ, ಅನಿಲ್ ಬರೆಯಬಲ್ಲರು ಎಂಬ ಬಗ್ಗೆ ನನಗೆ ಅನುಮಾನವಿತ್ತು. ಅಮೆರಿಕದ ಮಹಿಮೆ ಏನೋ ಗೊತ್ತಿಲ್ಲ ಅನಿಲ್ ಒಳಗೊಬ್ಬ ಲೇಖಕ ಹುಟ್ಟಿಕೊಂಡಿದ್ದ. ಪತ್ರಕರ್ತನ ಚಿಕಿತ್ಸಕ ನೋಟ ಮತ್ತು ಲೇಖಕನ ಒಳನೋಟ ಇವೆರಡೂ ಈ ಪುಸ್ತಕದಲ್ಲಿ ಬಹಳ ಸೊಗಸಾಗಿ ಮಿಳಿತವಾಗಿದೆ. ಒಂದು ಸಣ್ಣ ಕಿರುನಗುವನ್ನು ಮುಖದಲ್ಲಿ ಧರಿಸಿಕೊಂಡೇ ಈ ಕಥಾನಕವನ್ನು ಓದುಗರು ಸವಿಯಬಹುದು. ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಗಡ್ಡಾಫಿವಿಶ್ವೇಶ್ವರ ಭಟ್ಅನಿಲ್ ಭಾರದ್ವಾಜ್ ಅವರ ಇಲ್ಲಿನ ಲೇಖನಗಳನ್ನು ನೋಡಿದಾಗ, ಅವರು ತಮ್ಮ ಅಮೆರಿಕದ ದಿನಗಳನ್ನು ಹೇಗೆ ಸಾರ್ಥಕ ಪಡಿಸಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಹೊಸ ಊರು, ದೇಶಕ್ಕೆ ಹೋದಾಗ ನೋಡಿದ್ದೆಲ್ಲ ಹೊಸತು ಎಂಬುದು ಸತ್ಯವಾದರೂ ಅವೆಲ್ಲವನ್ನು ಸ್ವಾರಸ್ಯವಾಗಿ ಇತರರಿಗೆ ಹೇಳುವ ಕಾಳಜಿ, ಉತ್ಸಾಹ ಅನಿಲ್ ಮೆರೆಯುವುದು ವಿಶೇಷ. ಅದರ ಫಲವೇ ಈ ಕೃತಿ. ಅಲ್ಪದಿನಗಳಲ್ಲಿ ರೌಂಡ್ ಟ್ರಿಪ್ ಹೊಡೆಯುವ ಪ್ರವಾಸಿಗಳಿಗೆ ಸಿಗುವ ಮಾಹಿತಿ, ಅನುಭವ ನಿಮ್ಮದಾದೀತು. ಕೊನೆಯಲ್ಲಿ ಅನಿಲ್ ಮತ್ತಷ್ಟು ಆಪ್ತರಾಗುತ್ತಾರೆ. ಎಲ್ಲರಂತೆ ನಾನೂ ಹಣವನ್ನು ಪ್ರೀತಿಸುತ್ತೇನೆ" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Reಮೇಡ್ ಇನ್ ಅಮೆರಿಕ, ನಿರುದ್ಯೋಗಿ ಪರದೇಶಿಯ ದೈನಿಕ ಧಾರಾವಾಹಿ

By Prasad
|
Google Oneindia Kannada News

"ಬರೆಯುವುದು ಕಷ್ಟ, ಬರೆದು ಓದಿಸುವುದೂ ಕಷ್ಟ, ಇನ್ನು ಪುಸ್ತಕ ಮಾಡುವುದು ಮತ್ತಷ್ಟು ಕಷ್ಟ" ಎಂದು ಹೇಳುತ್ತಲೇ ಈ ಮೂರನ್ನೂ ಸುಳ್ಳು ಮಾಡಿ, ಸುಲಲಿತವಾದ ಬರವಣಿಗೆಗಳ ಮೂಲ ಓದುಗರು ಚಪ್ಪರಿಸಿ ಓದುವಂತೆ ಮಾಡುವ ಎರಡು ಪುಸ್ತಕಗಳನ್ನು ತಂದವರು ಪತ್ರಕರ್ತ ಅನಿಲ್ ಭಾರದ್ವಾಜ್.

ರೀಮೇಡ್ ಇನ್ ಅಮೆರಿಕಾ ಮತ್ತು ಸ್ಟೇಟ್ಸ್ ಎಕ್ಸ್ ಪ್ರೆಸ್. ಮೊದಲನೆಯ ಪುಸ್ತಕದಲ್ಲಿ ಅವರು ಅಮೆರಿಕಾದ ಅರಿಝೋನಾ ರಾಜ್ಯದ ಟೆಂಪೆ ಎಂಬ ಊರಲ್ಲಿ ತಮ್ಮ ಒಂದು ಕಾಲು ವರ್ಷದ ವಾಸದ ಬಗ್ಗೆ ಬರೆದಿದ್ದಾರೆ. ಇದು ಪ್ರವಾಸ ಕಥನವಲ್ಲ. ಬದಲಾಗಿ ಅಮೆರಿಕಾದ ಆತ್ಮವನ್ನು ಹಿಡಿಯುವ ಪ್ರಯತ್ನ ಅನ್ನಬಹುದು.

ರೋಚಕ ಕಥಾನಕ : ಅವರ ಅಮೆರಿಕಾ ಪ್ರವಾಸವೇ ಒಂದು ರೋಚಕ ಕತೆ. ಸುವರ್ಣ ನ್ಯೂಸ್ ನಲ್ಲಿ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿದ್ದ ಅವರು ಪತ್ನಿಯ ಸಲುವಾಗಿ ತಮ್ಮ ನೌಕರಿಯನ್ನು ತ್ಯಾಗ ಮಾಡಿದರು. ಯಾಕೆಂದರೆ ಅವರ ಪತ್ನಿಗೆ ವಿಪ್ರೋ ಮೂಲಕ ಅಮೆರಿಕಾದಲ್ಲಿ ದುಡಿಯುವ ಅವಕಾಶ ಸಿಕ್ಕಿತು. ಐದು ವರ್ಷದ ಮಗು ಕೂಡಾ ತಾಯಿ ಜೊತೆ ಹೋಗುವುದು ಅನಿವಾರ್ಯವಾಗಿದ್ದರಿಂದ ಅನಿಲ್ ಅವರ ಜೊತೆ ಪೋಷಕನಾಗಿ ಹೋದರು. [ಈ-ಪುಸ್ತಕವನ್ನು ಇಲ್ಲಿ ಓದಬಹುದು]

Remade in America, book by Anil Bharadwaj

ಅಲ್ಲಿ ಕೆಲಸ ಮಾಡುವಂತಿಲ್ಲ. ಹಾಗಾಗಿ ಮನೆಕೆಲಸ ಮತ್ತು ಅಡುಗೆಮನೆಯೇ ಅವರ ಕಾರ್ಯಕ್ಷೇತ್ರ. ಈ ಹೌಸ್ ಹಸ್‌ಬೆಂಡ್ ಕೆಲಸವನ್ನು ಯಾವುದೇ ತಕರಾರಿಲ್ಲದೇ ಒಪ್ಪಿಕೊಂಡ ಅನಿಲ್ ಅದನ್ನು ಸಹ್ಯವಾಗಿಸಿದ್ದು ಬರೆವಣಿಗೆಯ ಮೂಲಕ. ಅಲ್ಲಿಯ ಊರು, ಜನ, ಮಾಲ್, ಪದ್ಥತಿ, ತನ್ನ ಸ್ಥಿತಿಗತಿಗಳ ಬಗ್ಗೆ ತಮಾಷೆಯಾಗಿ ಬರೆದಿದ್ದಾರೆ. ಅಲ್ಲಿ ಇದೇ ಹೋಗಿ ಬದುಕು ಕಟ್ಟುವ ಕನಸು ಕಾಣುವವರಿಗೆ ಇದು ಗೈಡ್ ಥರ ಇದೆ. ಇತರರಿಗೆ ಒಂದು ಸಾರಸ್ವಕರ ಓದು.

ಪುಸ್ತಕ ಬಿಡುಗಡೆ ಎಂದು? : ಅಮೆರಿಕಾದಲ್ಲಿರುವ ಕನ್ನಡಿಗರೂ ಈ ಕೃತಿ ಓದಬೇಕು ಅನ್ನೋದು ಅವರಾಸೆ. ಆ ಕಾರಣಕ್ಕೆ ನಿಮ್ಮ ಸಹಾಯ ಕೇಳುತ್ತಿದ್ದಾರೆ. ಇದೇ ತಿಂಗಳ ಜುಲೈ 27ರಂದು ಸೋಮವಾರ ರೀಮೇಡ್ ಇನ್ ಅಮೆರಿಕಾ ಪುಸ್ತಕ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಅದಕ್ಕೆ ಮುಂಚೆ ಜುಲೈ 22ರಂದು ಸ್ಟೇಟ್ಸ್ ಎಕ್ಸ್ ಪ್ರೆಸ್ ಬಳ್ಳಾರಿಯಲ್ಲಿ ಬಿಡುಗಡೆ. ಆ ಪುಸ್ತಕ ಹಲವಾರು ಬಿಡಿ ಲೇಖನಗಳ ಗುಚ್ಛ ಅಷ್ಟೆ. ಪುಸ್ತಕದ ಬೆಲೆ ರು. 240.

ತನ್ನ ಪತ್ರಿಕೋದ್ಯಮದ-ಜೀವನದ ದಿಕ್ಕನ್ನೇ ಬದಲಿಸಿ ಗುರುವಿನ ಸ್ಥಾನದಲ್ಲಿ ನಿಂತಿದ್ದಾರ ಎಂದು ಅನಿಲ್ ಹೇಳುವ, ಪತ್ರಕರ್ತರಾದ ಉದಯ ಮರಕಿಣಿ, ಗಿರೀಶ್ ರಾವ್ (ಜೋಗಿ) ಮತ್ತು ವಿಶ್ವೇಶ್ವರ ಭಟ್ ಅವರು ಈ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

Remade in America, book by Anil Bharadwaj

ಈ ಮೂವರು ಬರೆದಿರುವ ಮುನ್ನುಡಿಯ ಝಲಕ್ ಕೆಳಗಿವೆ.

ಜೋಗಿ

ಈ ಪುಸ್ತಕವನ್ನು ಓದುತ್ತಾ ನಾನು ಮನಸಾರಿ ನಕ್ಕಿದ್ದೇನೆ. ಅನಿಲನ ಪಾಡು ನನಗೆ ಖುಷಿ ಕೊಟ್ಟಿದೆ, ಕಚಗುಳಿ ಇಟ್ಟಿದೆ, ಎಚ್ಚರಿಸಿದೆ. ಅಂಥದ್ದೊಂದು ಪರಿಸ್ಥಿತಿ ಎದುರಾದರೆ ನಾನು ಹೇಗೆ ಅದಕ್ಕೆ ಮುಖಾಮುಖಿ ಆಗಬಲ್ಲೆ ಎಂದು ಯೋಚಿಸುವಂತೆ ಮಾಡಿದೆ. ಈ ಕೃತಿ ಅಮೆರಿಕದಲ್ಲಿ ಕೆಲಸದಲ್ಲಿರುವ ಗಂಡನ್ನು ಮದುವೆಯಾಗಿ ಅಲ್ಲಿಗೆ ಹೋಗುವ ಹೆಣ್ಮಕ್ಕಳ ಪಾಲಿಗೆ ಅತ್ಯುತ್ತಮ ಕೈಪಿಡಿ. ಅಮೆರಿಕದಲ್ಲಿ ಇದ್ದು ಬರಲು ಹೋಗುವ ತರುಣರು ಓದಲೇಬೇಕಾದ ಪುಸ್ತಕ. [ದೇಸಾಯಿಯ ಭಗವದ್ಗೀತೆ : ಜೋಗಿ ಸಣ್ಣ ಕಥೆ]

ಉದಯ ಮರಕಿಣಿ

ಅನಿಲ್ ವಾರಕ್ಕೊಮ್ಮೆ ಒಂದು ಚಾಪ್ಟರನ್ನು ಬರೆದು ನನಗೆ ಮೇಲ್ ಮಾಡುತ್ತಾ ಹೋದರು. ಅದನ್ನು ಓದಿ ನನಗೆ ಸಂತೋಷವೂ ಆಶ್ಚರ್ಯವೂ ಆದದ್ದು ಸುಳ್ಳಲ್ಲ. ಯಾಕೆಂದರೆ, ಅನಿಲ್ ಬರೆಯಬಲ್ಲರು ಎಂಬ ಬಗ್ಗೆ ನನಗೆ ಅನುಮಾನವಿತ್ತು. ಅಮೆರಿಕದ ಮಹಿಮೆ ಏನೋ ಗೊತ್ತಿಲ್ಲ ಅನಿಲ್ ಒಳಗೊಬ್ಬ ಲೇಖಕ ಹುಟ್ಟಿಕೊಂಡಿದ್ದ. ಪತ್ರಕರ್ತನ ಚಿಕಿತ್ಸಕ ನೋಟ ಮತ್ತು ಲೇಖಕನ ಒಳನೋಟ ಇವೆರಡೂ ಈ ಪುಸ್ತಕದಲ್ಲಿ ಬಹಳ ಸೊಗಸಾಗಿ ಮಿಳಿತವಾಗಿದೆ. ಒಂದು ಸಣ್ಣ ಕಿರುನಗುವನ್ನು ಮುಖದಲ್ಲಿ ಧರಿಸಿಕೊಂಡೇ ಈ ಕಥಾನಕವನ್ನು ಓದುಗರು ಸವಿಯಬಹುದು. [ಕನ್ನಡ ಚಲನಚಿತ್ರ ಪತ್ರಿಕೋದ್ಯಮದ ಗಡ್ಡಾಫಿ]

ವಿಶ್ವೇಶ್ವರ ಭಟ್

ಅನಿಲ್ ಭಾರದ್ವಾಜ್ ಅವರ ಇಲ್ಲಿನ ಲೇಖನಗಳನ್ನು ನೋಡಿದಾಗ, ಅವರು ತಮ್ಮ ಅಮೆರಿಕದ ದಿನಗಳನ್ನು ಹೇಗೆ ಸಾರ್ಥಕ ಪಡಿಸಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಹೊಸ ಊರು, ದೇಶಕ್ಕೆ ಹೋದಾಗ ನೋಡಿದ್ದೆಲ್ಲ ಹೊಸತು ಎಂಬುದು ಸತ್ಯವಾದರೂ ಅವೆಲ್ಲವನ್ನು ಸ್ವಾರಸ್ಯವಾಗಿ ಇತರರಿಗೆ ಹೇಳುವ ಕಾಳಜಿ, ಉತ್ಸಾಹ ಅನಿಲ್ ಮೆರೆಯುವುದು ವಿಶೇಷ. ಅದರ ಫಲವೇ ಈ ಕೃತಿ. ಅಲ್ಪದಿನಗಳಲ್ಲಿ ರೌಂಡ್ ಟ್ರಿಪ್ ಹೊಡೆಯುವ ಪ್ರವಾಸಿಗಳಿಗೆ ಸಿಗುವ ಮಾಹಿತಿ, ಅನುಭವ ನಿಮ್ಮದಾದೀತು. ಕೊನೆಯಲ್ಲಿ ಅನಿಲ್ ಮತ್ತಷ್ಟು ಆಪ್ತರಾಗುತ್ತಾರೆ. [ಎಲ್ಲರಂತೆ ನಾನೂ ಹಣವನ್ನು ಪ್ರೀತಿಸುತ್ತೇನೆ]

English summary
Remade in America. A collection of Kannada (essays) articles based on self experience about American life by Indian journalist Anil Bharadwaj, published by Srushti publications, Bengaluru. Journalists Vishweshwar Bhat, Udaya Marakini and Jogi have written foreword to this book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X