ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣು ಮಗು ಜನಿಸಿದರೆ 111 ಗಿಡ ನೆಡುವ ರಾಜಸ್ಥಾನದ ಪಿಪ್ಲಾಂತ್ರಿ ಗ್ರಾಮ

|
Google Oneindia Kannada News

ರಾಜಸ್ಥಾನದ ರಾಜ್‍ಸಮಂಡ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ. ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ಆ ರಾಜ್ಯದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ.

ಗ್ರಾಮದಲ್ಲಿ ಹೆಣ್ಣು ಮಗು ಜನಿಸಿದಾಗ 111 ಗಿಡ ನೆಟ್ಟು ಸಂಭ್ರಮಿಸುವ ಪಿಪ್ಲಾಂತ್ರಿ ಗ್ರಾಮದ ಬಗ್ಗೆ ಕನ್ನಡದಲ್ಲಿ ವಿಸ್ತೃತವಾಗಿ ಕೃತಿಯನ್ನು ಲೇಖಕ ಶಿವರಾಮ ಪೈಲೂರು ಅವರು ರಚಿಸಿದ್ದಾರೆ.

ಕರಣಂ ಅವರ ಅರಿವಿನ ಸತ್ಯ ಹುಡುಕಾಟ ಗ್ರಸ್ತ ಕಾದಂಬರಿಕರಣಂ ಅವರ ಅರಿವಿನ ಸತ್ಯ ಹುಡುಕಾಟ ಗ್ರಸ್ತ ಕಾದಂಬರಿ

ಕೃತಿ: ಪಿಪ್ಲಾಂತ್ರಿ
ಲೇ: ಶಿವರಾಂ ಪೈಲೂರು
ಪುಟಗಳು: 40
ಮುದ್ರಣ: ಅಕ್ಟೋಬರ್ 2019
ಬೆಲೆ: ರೂ.40
ಪ್ರಕಾಶನ: ಕೃಷಿ ಮಾಧ್ಯಮ ಕೇಂದ್ರ
#113, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಪಿಳ್ಳಪ್ಪ ಬ್ಲಾಕ್, ಗಂಗಾನಗರ
ಅಂಚೆ: ಆರ್.ಟಿ. ನಗರ, ಬೆಂಗಳೂರು - 560032
ಇಮೇಲ್: [email protected]

ಸಂಜೀವಿನಿ: ಮೊದಲ ಪ್ರೀತಿಯ ಬೆರುಗನ್ನು ಆಪ್ತವಾಗಿಸುವ ಕಾದಂಬರಿಸಂಜೀವಿನಿ: ಮೊದಲ ಪ್ರೀತಿಯ ಬೆರುಗನ್ನು ಆಪ್ತವಾಗಿಸುವ ಕಾದಂಬರಿ

ಪಿಪ್ಲಾಂತ್ರಿ ಗ್ರಾಮ ಹಾಗೂ ಲೇಖಕ ಶಿವರಾಮ ಪೈಲೂರು ಅವರ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ..

ಪಿಪ್ಲಾಂತ್ರಿ ಪುಸ್ತಕ ಕುರಿತು

ಪಿಪ್ಲಾಂತ್ರಿ ಪುಸ್ತಕ ಕುರಿತು

ರಾಜಸ್ಥಾನದ ರಾಜ್‍ಸಮಂಡ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ.

ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ. ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ಆ ರಾಜ್ಯದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ.

ಈ ಯಶೋಗಾಥೆಯ ರೂವಾರಿ ಶ್ಯಾಮ್ ಸುಂದರ್ ಪಾಲೀವಾಲ್. ಅವರು ಪಿಪ್ಲಾಂತ್ರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದಾಗ 2006ರಲ್ಲಿ ಕಿರಣ್ ನಿಧಿ ಯೋಜನೆ ಸೇರಿದಂತೆ ವಿವಿಧ ಕೆಲಸಕಾರ್ಯಗಳನ್ನು ಕೈಗೆತ್ತಿಕೊಂಡರು.

ಶ್ಯಾಮ್ ಸುಂದರ್ ಪಾಲೀವಾಲ್

ಶ್ಯಾಮ್ ಸುಂದರ್ ಪಾಲೀವಾಲ್

ಹಾಲಿ ಪಿಪ್ಲಾಂತ್ರಿ ಜಲಾನಯನ ಸಮಿತಿಯ ಅಧ್ಯಕ್ಷರಾಗಿರುವ ಶ್ಯಾಮ್ ಸುಂದರ್ ಪಾಲೀವಾಲ್ ಅವರು ಹೇಳುವಂತೆ, "ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಸಂಪೂರ್ಣ ಸದುಪಯೋಗಪಡಿಸಿಕೊಂಡು ಪಿಪ್ಲಾಂತ್ರಿಯ ಸರ್ವಾಂಗೀಣ ಪ್ರಗತಿ ಸಾಧಿಸಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಜನರ ಸಕ್ರಿಯ ಸಹಭಾಗಿತ್ವಕ್ಕೆ ಆದ್ಯತೆ ನೀಡಿರುವುದರಿಂದ ಹಣ ಒಂದಿಷ್ಟೂ ಪೋಲಾಗಿಲ್ಲ.

ಪುಸ್ತಕ ವಿಮರ್ಶೆ: ನಮ್ಮ ಬೆಂಗಳೂರು 'ಜೋಗಿ' ಕಂಡಂತೆಪುಸ್ತಕ ವಿಮರ್ಶೆ: ನಮ್ಮ ಬೆಂಗಳೂರು 'ಜೋಗಿ' ಕಂಡಂತೆ

ಇಡೀ ವಿಶ್ವದ ಗಮನ ಸೆಳೆದಿರುವ ಪಿಪ್ಲಾಂತ್ರಿ

ಇಡೀ ವಿಶ್ವದ ಗಮನ ಸೆಳೆದಿರುವ ಪಿಪ್ಲಾಂತ್ರಿ

ಜಲಾನಯನ ಅಭಿವೃದ್ಧಿ ಅಭಿಯಾನದಿಂದಾಗಿ ನೆಲಜಲ ಸಂರಕ್ಷಣೆಯ ಜತೆಗೆ ಹಸಿರು ಹೊದಿಕೆ ಸೃಷ್ಟಿಯಾಗಿದ್ದು ಈ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕೂಡ ಲಭಿಸಿದೆ."

ಪಿಪ್ಲಾಂತ್ರಿಯ ಕೆರೆಕುಂಟೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಗುಡ್ಡಬೆಟ್ಟಗಳಲ್ಲಿ ಹೆಚ್ಚುಹೆಚ್ಚು ಗಿಡಮರಗಳು ಬೆಳೆಯುತ್ತಿದ್ದಂತೆ ವನ್ಯಜೀವಿಗಳೂ ಮತ್ತೆ ಕಾಣಿಸಿಕೊಳ್ಳುತ್ತಿವೆ.

"ಇಂದು ಪಿಪ್ಲಾಂತ್ರಿಯ ಸುಸ್ಥಿರ ಅಭಿವೃದ್ಧಿ ಮಾದರಿ ಕೇವಲ ರಾಜಸ್ಥಾನ ಅಥವಾ ಭಾರತ ಮಾತ್ರವಲ್ಲ, ಇಡೀ ವಿಶ್ವದ ಗಮನ ಸೆಳೆದಿದೆ. ಇದು ನಮಗೆ ಹೆಮ್ಮೆಯ ಸಂಗತಿ" ಎನ್ನುತ್ತಾರೆ ಶ್ಯಾಮ್‍ಸುಂದರ್.

ಲೇಖಕರ ಪರಿಚಯ: ಶಿವರಾಂ ಪೈಲೂರು

ಲೇಖಕರ ಪರಿಚಯ: ಶಿವರಾಂ ಪೈಲೂರು

ಊರು ದಕ್ಷಿಣ ಕನ್ನಡ ಜಿಲ್ಲೆಯ ಚೊಕ್ಕಾಡಿ. ಕೃಷಿ ಕುಟುಂಬ. ಪತ್ರಿಕೋದ್ಯಮದಲ್ಲಿ ಎಂ.ಎ., ಕೃಷಿ ಸಂವಹನದಲ್ಲಿ ಡಾಕ್ಟರೇಟ್. 1988ರಲ್ಲಿ ಮಣಿಪಾಲದ ತರಂಗ' ವಾರಪತ್ರಿಕೆಯಲ್ಲಿ ಉಪಸಂಪಾದಕನಾಗಿ ಪತ್ರಿಕೋದ್ಯಮ ಪ್ರವೇಶ. ಬಳಿಕ ಕೊಚ್ಚಿನ್‍ನ ಸಂಬಾರ ಮಂಡಳಿಯಲ್ಲಿ ಉದ್ಯೋಗ. ಸ್ಪೈಸ್ ಇಂಡಿಯಾ' ಕನ್ನಡ ಮಾಸಪತ್ರಿಕೆಯ ಸಂಪಾದಕತ್ವ.

1991ರಲ್ಲಿ ಕೇಂದ್ರ ಸರ್ಕಾರದ ಭಾರತೀಯ ಸಮಾಚಾರ ಸೇವೆಗೆ ಸೇರ್ಪಡೆ. ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆಕಾಶವಾಣಿ, ದೂರದರ್ಶನದ ವಿವಿಧ ಹುದ್ದೆಗಳಲ್ಲಿ ಮಂಗಳೂರು, ಧಾರವಾಡ, ದೆಹಲಿ ಮತ್ತು ಬೆಂಗಳೂರಿನಲ್ಲಿ ಸೇವೆ. ಪರಿಸರ ವರದಿಗಾರಿಕೆ ಕುರಿತು ದಿ ನೆದರ್ಲೆಂಡ್ಸ್‍ನಲ್ಲಿ ತರಬೇತಿ. ರಾಷ್ಟ್ರಪತಿಯವರ ಚೈನಾ ಪ್ರವಾಸದ ವೇಳೆ ಮಾಧ್ಯಮ ತಂಡದಲ್ಲಿ ಭಾಗಿ.

ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ

ಗ್ರಾಮೀಣ ಪತ್ರಿಕೋದ್ಯಮ ಆಸಕ್ತಿ ಹೊಂದಿರುವ ಪೈಲೂರು

ಗ್ರಾಮೀಣ ಪತ್ರಿಕೋದ್ಯಮ ಆಸಕ್ತಿ ಹೊಂದಿರುವ ಪೈಲೂರು

ರಕ್ಷಣಾ ಸಚಿವಾಲಯದಡಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿಯೂ ಕಾರ್ಯನಿರ್ವಹಣೆ. ಪ್ರೆಸ್ ಇನ್ಫರ್ಮೇಶನ್ ಬ್ಯೂರೋದ ಉಪನಿರ್ದೇಶಕ ಹಾಗೂ ಆರ್‍ಎನ್‍ಐ ಸಹಾಯಕ ರಿಜಿಸ್ಟ್ರಾರ್ ಹುದ್ದೆಯಿಂದ 2017ರ ಡಿಸೆಂಬರ್ ನಲ್ಲಿ ಸ್ವಯಂನಿವೃತ್ತಿ.

ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಆಸಕ್ತಿಯ ವಿಷಯ. ಒಂದೂವರೆ ದಶಕ ಕಾಲ ಪುತ್ತೂರಿನ ಮಧು ಪ್ರಪಂಚ' ತ್ರೈಮಾಸಿಕದ ಗೌರವ ಪ್ರಧಾನ ಸಂಪಾದಕ. 2000ನೇ ಇಸವಿಯಲ್ಲಿ ಸಮಾನಾಸಕ್ತರೊಂದಿಗೆ ಧಾರವಾಡದಲ್ಲಿ ಕೃಷಿ ಮಾಧ್ಯಮ ಕೇಂದ್ರ (ಕಾಮ್) ಸ್ಥಾಪನೆ. ಅಡಿಕೆ ಪತ್ರಿಕೆ'ಯ ಕಂಡದ್ದು ಕಾಣದ್ದು' ಅಂಕಣದ ಬರಹಗಳು ಊಟ ಭರ್ಜರಿ ಹೊಟ್ಟೆ ಖಾಲಿ' ಶೀರ್ಷಿಕೆಯ ಪುಸ್ತಕವಾಗಿ ಪ್ರಕಟ. ಇತ್ತೀಚಿನ ಪುಸ್ತಕ: ಕೃಷಿ-ಗ್ರಾಮೀಣ ಪತ್ರಿಕೋದ್ಯಮ; ಬರವಣಿಗೆಯ ಕೈಪಿಡಿ.'

English summary
Piplantri village in Rajasthan makes a conscious effort to save girl children and the green cover at the same time, by planting 111 trees every time a girl is born. Here is introduction to Kannada book by Shivaram Pailoor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X