ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಸವ್ಯಸಾಚಿ'' ಡಾ ಕೃಷ್ಣಾನಂದ ಕಾಮತರ ಕೃತಿಗಳು ಆನ್ಲೈನಲ್ಲೇ ಲಭ್ಯ

|
Google Oneindia Kannada News

ಶಿಕ್ಷಣತಜ್ಞ, ವಿದ್ವಾಂಸ, ಬರಹಗಾರ, ಛಾಯಾಚಿತ್ರಗ್ರಾಹಕ, ಚಿತ್ರಕಾರ... ಎಲ್ಲವೂ ಆಗಿದ್ದ ಕೃಷ್ಣಾನಂದ ಲಕ್ಷ್ಮಣ ಕಾಮತ್ ಅವರು ಸೃಜನಶೀಲತೆಯ ಪ್ರತಿಬಿಂಬ. ಅವರೊಬ್ಬ ಚಿಕಿತ್ಸಕ ಮನಸ್ಸಿನ ಆಲ್ ರೌಂಡರ್ ಆಗಿದ್ದರು. ಅಪಾರ ಜೀವನಾನುಭವ ತುಂಬಿಕೊಂಡಿದ್ದ ಕಾಮತ್ ಅವರ ನೆನಪಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗ್ರಂಥಾಲಯವೊಂದು ದಶಕದ ಹಿಂದೆ ಆರಂಭಿಸಲಾಗಿದೆ. ಈಗ ಅವರ ಸಮಗ್ರ ಕೃತಿಗಳು ಆನ್ಲೈನ್ ನಲ್ಲಿ ಲಭ್ಯವಾಗಿದೆ. ಅನುಭವ ಸಮೃದ್ಧವಾದ ಶ್ರೀಮಂತ ಸಾಹಿತ್ಯವನ್ನು ಕ್ರಿಯೇಟೀವ್ ಕಾಮನ್ಸ್ ಅಡಿಯಲ್ಲಿ ವಾಣಿಜ್ಯೇತರ ಉಪಯೋಗಕ್ಕೆ ಬಳಸಬಹುದು.

ಲೇಖಕ- ವಿಜ್ಞಾನಿಯಾಗಿ ಮಾತ್ರವಲ್ಲದೆ ಛಾಯಾಗ್ರಾಹಕರಾಗಿ, ಚಿತ್ರಕಾರರಾಗಿ, ಸಾಂಸ್ಕೃತಿಕ ರಾಯಭಾರಿ, ಪರಿಸರ-ಪ್ರಾಣಿ ಜಗತ್ತು ಪರಿಚಯಿಸಿದ ಸಾಹಿತಿ ಎನಿಸಿಕೊಂಡವರು. ಡಾಟ್‌ಕಾಂ ಜಗತ್ತಿನಲ್ಲಿ ಕಾಮತ್‌.ಕಾಂ ದೊಡ್ಡ ಹೆಸರು. ಸಾಂಸ್ಕೃತಿಕ ಜಾಲ ತಾಣವಾಗಿ ತನ್ನದೇ ಆದ ಛಾಪನ್ನು ವೆಬ್ ಲೋಕದಲ್ಲಿ ಮೂಡಿಸಿದೆ.

ಕೃಷ್ಣಾನಂದ ಕಾಮತ್ ಅವರು ವಿಭಿನ್ನ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪ್ರವಾಸ ಕಥನ, ಕಲೆ, ಪರಿಸರ, ಪ್ರಬಂಧ, ಕಾದಂಬರಿ, ಪ್ರಾಣಿ ಪಕ್ಷಗಳ ಬಗ್ಗೆ ಕೂಡ ಅನೇಕ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ತಮ್ಮ ಹೆಂಡತಿ ಜ್ಯೋತ್ಸ್ನಾ ಮತ್ತು ಮಗ ವಿಕಾಸ್ ಅವರಿಗೆ ಬರೆದ ಪತ್ರಗಳ ಸಂಕಲನಗಳನ್ನೂ ತಂದಿದ್ದಾರೆ.

Multi talented writer Dr. Krishnananda Kamats works, books goes online

ಅವರು ಬರೆದಿರುವ ಪುಸ್ತಕಗಳ ಪಟ್ಟಿ ಇಂತಿದೆ
* ನಾನೂ ಅಮೆರಿಕಾಗೆ ಹೋಗಿದ್ದೆ (ಪ್ರವಾಸ ಕಥನ)
* ಭಗ್ನ ಸ್ವಪ್ನ (ಕಾದಂಬರಿ)
* ವಂಗ ದರ್ಶನ (ಪ್ರವಾಸ ಕಥನ)
* ನಾ ರಾಜಸ್ತಾನದಲ್ಲಿ (ಪ್ರವಾಸ ಕಥನ)
* ಪ್ರಾಣಿ ಪರಿಸರ (ಪರಿಸರ)
* ಕಲಾರಂಗ (ಪ್ರವಾಸ ಕಥನ)
* ಪ್ರೇಯಸಿಗೆ ಪತ್ರಗಳು (ಪತ್ರಗಳು)
* ಪಶು-ಪಕ್ಷಿ ಪ್ರಪಂಚ (ಪ್ರಾಣಿ ಜೀವನ)
* ಬಸ್ತಾರ ಪ್ರವಾಸ (ಪ್ರವಾಸ ಕಥನ)
* ಕೀಟ ಜಗತ್ತು (ಕೀಟಶಾಸ್ತ್ರ)
* ಸಸ್ಯ ಪ್ರಪಂಚ (ಪರಿಸರ)
* ಕವಿಕಲೆ (ಕಲೆ)
* ಮಧ್ಯಪ್ರದೇಶದ ಮಡಿಲಲ್ಲಿ (ಪ್ರವಾಸ ಕಥನ)
* ಸಸ್ಯ ಪರಿಸರ (ಪರಿಸರ)
* ಅಕ್ಷತಾ (ಪ್ರಬಂಧ)
* ದಿ ಟೈಮ್ ಲೆಸ್ ಥಿಯೇಟರ್ (ಮಲ್ಟಿಮೀಡಿಯಾ)
* ಇರುವೆಯ ಇರುವು (ಕೀಟಶಾಸ್ತ್ರ)
* ಕಾಗೆಯ ಕಾಯಕ (ಪ್ರಾಣಿ ಜೀವನ)
* ಕೊಂಕಣ್ಯಗಳೆ ಕವಿಕಾಲ (ಕಲೆ)
* ಪ್ರವಾಸಿಯ ಪ್ರಬಂಧಗಳು (ಪ್ರವಾಸ ಕಥನ)
* ಮರು ಪಯಣ (ನಿರೂಪಣೆ)
* ಸರ್ಪ ಸಂಕುಲ (ಪ್ರಾಣಿ ಜೀವನ)
* ಪತ್ರ ಪರಚಿ (ಪತ್ರಗಳು)
* ನಾ ಕಂಡ ಕರ್ನಾಟಕ (ಪ್ರಬಂಧ)

Multi talented writer Dr. Krishnananda Kamats works, books goes online

ಈಗ ಡಿಜಿಟಲ್ ರೂಪದಲ್ಲಿಕೃತಿಗಳು:
ಶಿಕ್ಷಣತಜ್ಞ, ವಿದ್ವಾಂಸ, ಬರಹಗಾರ, ಛಾಯಾ ಚಿತ್ರಗ್ರಾಹಕ, ಚಿತ್ರಕಾರ ಹೀಗೆ ಅವರ ಆಸಕ್ತಿ ಮತ್ತು ತಜ್ಞತೆಯ ಕ್ಷೇತ್ರಗಳು ಹಲವು. ಹವ್ಯಾಸ ಮಟ್ಟದಲ್ಲಿ ತೊಡಗಿಸಿಕೊಂಡ ಕ್ಷೇತ್ರಗಳಲ್ಲಿಯೂ ಅವರು ಗಳಿಸಿದ ಪರಿಣತಿ ಅಪಾರ. ಅವರ 25ಕ್ಕೂ ಹೆಚ್ಚು ಪುಸ್ತಕಗಳ ವೈವಿಧ್ಯಮಯ ವಿಷಯವೇ ಅವರ ವ್ಯಕ್ತಿತ್ವವನ್ನು ಹೇಳಿಬಿಡುತ್ತದೆ. ಇದರಾಚೆಗೆ ಅವರು ತೆಗೆದ ಛಾಯಾಚಿತ್ರಗಳ ಕತೆ ಮತ್ತೊಂದು. ಜೊತೆಗೆ ಅವರೇ ಚಿತ್ರಕಾರರೂ ಆಗಿದ್ದರಿಂದ ಅಲ್ಲಿನ ವಿಸ್ಮಯ ಮತ್ತೊಂದು. ಸಾಹಿತ್ಯ, ಶಿಕ್ಷಣ, ಜೀವ ವಿಜ್ಞಾನ ಹೀಗೆ ಹಲವು ದಿಕ್ಕುಗಳಲ್ಲಿ ಹರಡಿಕೊಂಡಿರುವ ಕೃಷ್ಣಾನಂದ ಕಾಮತರ ಬರೆಹ ಮತ್ತು ಛಾಯಾಚಿತ್ರಗಳನ್ನು ಅವರ ಕುಟುಂಬ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುತ್ತಿದೆ.

Multi talented writer Dr. Krishnananda Kamats works, books goes online

ಅವರ ಪತ್ನಿ ಜ್ಯೋತ್ಸ್ನಾ ಕಾಮತ್ ಮತ್ತು ಪುತ್ರ ವಿಕಾಸ್ ಕಾಮತ್ ಅವರ ತುಂಬು ಹೃದಯದ ಸಹಕಾರದಿಂದಾಗಿ ಡಿಜಿಟಲ್ ರೂಪಕ್ಕಿಳಿಸಲಾಗಿದೆ.ಆ ಪುಸ್ತಕಗಳು ಕ್ರಿಯೇಟೀವ್ ಕಾಮನ್ಸ್ ಅಡಿ ವಾಣಿಜ್ಯೇತರ ಉಪಯೋಗಕ್ಕೆ ಲಭ್ಯವಿರಲಿದೆ ಎಂದು ಸಂಚಯ ಮತ್ತು ಸಂಚಿ ಫೌಂಡೇಶನ್ ಪರವಾಗಿ ಓಂಶಿವಪ್ರಕಾಶ್ ಅವರು ಒನ್ಇಂಡಿಯಾಕ್ಕೆ ತಿಳಿಸಿದರು. ಸಾಹಿತ್ಯ ಆಸಕ್ತರು ಕಾಮತರ ಕೃತಿಗಳನ್ನು ಈ ಲಿಂಕ್ (https://books.kamat.com) ಮೂಲಕ ಓದಬಹುದು.

English summary
Multi talented writer Dr. Krishnananda Kamat's works, books, letters goes online and made available to public on famous kamat website with the help of Sanchi foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X