ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಣಂ ಅವರ ಅರಿವಿನ ಸತ್ಯ ಹುಡುಕಾಟ ಗ್ರಸ್ತ ಕಾದಂಬರಿ

ಅಪ್ರತಿಮ ಸಾಹಿತಿ ಎಸ್ ಎಲ್ ಭೈರಪ್ಪ ಅವರಿಂದ ಹೊಗಳಿಸಿಕೊಂಡ 'ಕರ್ಮ', ಮದರ್ ತೆರೆಸಾ ಕಥೆ ಇದ್ದ 'ನನ್ನಿ' ಎಂಬ ಎರಡು ಚರ್ಚಿತ ಕಾದಂಬರಿಗಳ ನಂತರ ಕರಣಂ ಪವನ್ ಪ್ರಸಾದ್ ಅವರ ಹೊಸ ಕಾದಂಬರಿ' ಗ್ರಸ್ತ' ಬಗ್ಗೆ ಓದುಗರ ವಿಮರ್ಶೆ.

By Mahesh
|
Google Oneindia Kannada News

ಅಪ್ರತಿಮ ಸಾಹಿತಿ ಎಸ್ ಎಲ್ ಭೈರಪ್ಪ ಅವರಿಂದ ಹೊಗಳಿಸಿಕೊಂಡ 'ಕರ್ಮ', ಮದರ್ ತೆರೆಸಾ ಕಥೆ ಇದ್ದ 'ನನ್ನಿ' ಎಂಬ ಎರಡು ಚರ್ಚಿತ ಕಾದಂಬರಿಗಳ ನಂತರ ಯುವ ಲೇಖಕ ಕರಣಂ ಪವನ್ ಪ್ರಸಾದ್ ಅವರ ಹೊಸ ಕಾದಂಬರಿ' ಗ್ರಸ್ತ' ಬಗ್ಗೆ ನಾಗೇಗೌಡ ಕೀಲಾರ ಶಿವಲಿಂಗಯ್ಯ್ ಅವರು ಬರೆದಿರುವ ಅನಿಸಿಕೆ, ಅಭಿಪ್ರಾಯದ ಸಂಗ್ರಹ ಇಲ್ಲಿದೆ.

ಗಂಡು ಹೆಣ್ಣಿನ ಸಾಂಗತ್ಯದ ಫಲವಾಗಿ ಹುಟ್ಟಿ ಅದರ ಪರಿಣಾಮವಾಗಿ ಸಂಸಾರ, ಸಮಾಜದ ಚೌಕಟ್ಟುಗಳಲ್ಲಿ ಬದುಕುವ ಬಂಧನಕ್ಕೆ ಒಳಗಾಗುತ್ತೇವೆ. ಆದರೆ ಮನುಷ್ಯ ಚೇತನ ಈ ಚೌಕಟ್ಟನ್ನು ಮೀರುವ ಪ್ರಯತ್ನ ಮಾಡಿದಾಗ ವಿಜ್ಞಾನ ಮತ್ತು ವೇದಾಂತವನ್ನು ಅರಿಯಲು ಪ್ರಯತ್ನಿಸುತ್ತಾನೆ. ಆದರೆ ಅರಿಯುವ ಪ್ರಯತ್ನದಲ್ಲಿ ಪರಾ ಮತ್ತು ಅಪರಾ ವಿದ್ಯೆ ಒಂದಕ್ಕೆ ಜೋತು ಬೀಳುತ್ತಾನೆ.

ಅದರೆ, ಚೇತನದ ಪೂರ್ಣ ಬಿಡುಗಡೆ ಸಾಧ್ಯವಿರುವುದು ಎರಡು ವಿದ್ಯೆಗಳನ್ನು ಬೆಸೆದು ಕಂಡುಕೊಳ್ಳುವ ಸತ್ಯದಿಂದ. ಅಂತಹ ಒಂದು ಪ್ರಯತ್ನವನ್ನು ಗ್ರಸ್ತ ಕಾದಂಬರಿಯ ನಾಯಕ ಮಾಡಿ ಯಶಸ್ವಿಯಾಗುತ್ತಾನೆ.

Karanam Pavan Prasad Grashtha Kannada Novel review

ಕಾದಂಬರಿಕಾರರು ನಾಯಕನ ಮುಖಾಂತರ ಸಮಾಜ, ಸಂಸಾರ, ವಿಜ್ಞಾನ, ವೇದಾಂತ, ಬಂಧನ ವಿಷಯಗಳನ್ನು ಅಮೂಲಾಗ್ರವಾಗಿ ಪರಿಶೋಧಿಸುತ್ತಾರೆ. ಅದ್ವೈತ ಮತ್ತು ವಿಜ್ಞಾನದ ಸಮರಸವನ್ನು ಚೆನ್ನಾಗಿ ಮಾಡಿದ್ದಾರೆ. ವಿಜ್ಞಾನದ ಅತ್ಯುನ್ನತ ಅಲೋಚನೆಗಳನ್ನು ಒಳಗೊಂಡಿರುವ ಕ್ವಾಂಟಮ್ ಥಿಯರಿಯನ್ನು ನಮ್ಮ ಅಧಿಭೌತಿಕ ಚಿಂತನೆಗಳೊಂದಿಗೆ ಬೆಸೆದಿರುವ ರೀತಿ ಚೆನ್ನಾಗಿ ಮೂಡಿ ಬಂದಿದೆ. ತುಂಬಾ ಸಂಕ್ಷಿಪ್ತವಾಗಿ ಈ ವಿಚಾರಗಳು ಮೂಡಿಬಂದಿದೆ. ಬಹಳ ವಿಸ್ತಾರವಾಗಿ ಮೂಡಿಬಂದಿದ್ದರೆ ಓದುಗನಿಗೆ ಇನ್ನೂ ಹೆಚ್ಚಿನ ಹೊಳಹುಗಳು ದೊರೆಯುತ್ತಿತ್ತು.

ಕಥಾನಾಯಕ ಅನುಭವಿಸುವ ಭಾವ ತೀವ್ರತೆ ನಮ್ಮನ್ನು ಮನುಷ್ಯ ಸಂಬಂಧಗಳ ಬಗ್ಗೆ ಅದರಲ್ಲೂ ಗಂಡು ಹೆಣ್ಣಿನ ಸಂಬಂಧವನ್ನು ಮತ್ತಷ್ಟು ಪುನರ್ ವಿಮರ್ಶಿಸಲು ಒತ್ತಾಯಿಸುತ್ತದೆ.

ಹೆಚ್ಚಿನ ಕನ್ನಡ ಕಾದಂಬರಿಗಳು ಮನುಷ್ಯನ ಸಾಮಾಜಿಕ ಮತ್ತು ಮಾನಸಿಕ ಸ್ತರದಲ್ಲಿ ನಡೆಯುವ ಕಥೆಯನ್ನು ಹೇಳುತ್ತವೆ. ಆದರೆ ಈ ಕಾದಂಬರಿ ಸಾಮಾಜಿಕ ಮತ್ತು ಮಾನಸಿಕ ಸ್ತರದ ಜೊತೆಗೆ ವಿಜ್ಞಾನ ಮತ್ತು ಅಧಿಭೌತಿಕ ವಿಜ್ಞಾನವನ್ನು ಸೇರಿಸಿಕೊಂಡು ಕಥೆ ಹೇಳುತ್ತದೆ. ಕಾದಂಬರಿಕಾರರು ಇವತ್ತಿನ ಅತ್ಯುನ್ನತ ಜ್ಞಾನ ಶಾಖೆಗಳ ಅಧ್ಯಯನ ಮಾಡಿ ಅದನ್ನು ಶಕ್ತವಾಗಿ ಕಥೆಯಲ್ಲಿ ಉಪಯೋಗಿಸಿಕೊಂಡಿರುವುದು ಶ್ಲಾಘನೀಯ. ಕಾದಂಬರಿಕಾರನ ಈ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಲು ಓದಲೇಬೇಕಾದ ಕಾದಂಬರಿ 'ಗ್ರಸ್ತ'.

Karanam Pavan Prasad Grashtha Kannada Novel review

"ಗ್ರಸ್ತ" ಈಗ ಮಾರುಕಟ್ಟೆಯಲ್ಲಿ ಎಲ್ಲೆಲ್ಲಿ ಲಭ್ಯ:
ಸದ್ಯಕ್ಕೆ ಪುಸ್ತಕ ದೊರಕುವ ಪುಸ್ತಕ ಮಳಿಗೆಗಳು:
ಸಪ್ನ ಬುಕ್ ಹೌಸ್ (ಕರ್ನಾಟಕದ ಎಲ್ಲಾ ಮಳಿಗೆ)
ನವಕರ್ನಾಟಕ ಪಬ್ಲಿಕೇಷನ್ (ಕರ್ನಾಟಕದ ಎಲ್ಲಾ ಮಳಿಗೆ)
ಅಂಕಿತ ಪುಸ್ತಕ, ಗಾಂಧಿಬಜಾರ್
ಬೆಳಗೆರೆ ಬುಕ್ಸ್, ಗಾಂಧಿಬಜಾರ್
ಟೋಟಲ್ ಕನ್ನಡ, ಜಯನಗರ
ಆಕೃತಿ ಪುಸ್ತಕ, ರಾಜಾಜಿನಗರ
ಸ್ನೇಹ ಪುಸ್ತಕಾಲಯ, ಶ್ರೀನಗರ
ಸ್ವಸ್ತಿ ಪ್ರಕಾಶನ, ಕುಮಟಾ
ಆನ್ಲೈನ್ ಮಳಿಗೆ:
http://mybookadda.in/mybookadda/index.php
http://www.totalkannada.com/grastha--P32103?ver=0057024841
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
9902590303
[email protected]
****

Karanam Pavan Prasad

ಲೇಖಕರ ಬಗ್ಗೆ :
ನಾಟಕಕಾರ ಪಿಪಿ ಶರ್ಮ ಲೇಖಕ ಕರಣಂ ಪವನ್ ಆಗಿದ್ದು ಸದ್ಯ ಕಾನ್ ಕೇವ್ ಮೀಡಿಯಾ ಸಂಸ್ಥೆಯಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪವನ್ ಪ್ರಸಾದ್ ಶರ್ಮ ಅವರು ಕಳೆದ ಏಳು ವರ್ಷಗಳಿಂದ ಸೃಜನಾತ್ಮಕ ವಿನ್ಯಾಸಗಾರರಾಗಿದ್ದಾರೆ. ಕಸ್ತೂರಿ ಮೀಡಿಯಾ. ಪ್ರೈ.ಲಿ ನಲ್ಲಿ ಪೊಗ್ರಾಂ ಕಾನ್ಸೆಪ್ಟ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ವಂದೇಮಾತರಂ ಟ್ರಸ್ಟ್ ನ ಜನಗಣ ರಂಗ ತಂಡದ ಸಂಚಾಲಕರಾಗಿದ್ದರು. ಬೀದಿ ಬಿಂಬ ರಂಗದ ತುಂಬ, ಪುರಹರ ಸೇರಿದಂತೆ ಐದಾರು ಜನಪ್ರಿಯ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಇವರ ಎರಡು ಕೃತಿಗಳು ಈವರೆಗೂ ಪ್ರಕಟಗೊಂಡಿವೆ. ಹೆಚ್ಚಿನ ಮಾಹಿತಿಗೆ ಲೇಖಕರ ಕುರಿತ ಹೆಚ್ಚಿನ ಮಾಹಿತಿಯನ್ನು ವಿಕಿಪೀಡಿಯಾ ಪುಟದಲ್ಲಿ ಓದಿ

English summary
Karanam Pavan Prasad's latest novel Grashtha revolves around science, philosophy and life, evolution of human. The novel is tending to find the ultimate truth of life through the protagonist. Scenarios stitched in between the story, is very well equipped to project the basic conflicts of life and death. Here is a review by Karanam Pavan Prasad Grashtha Kannada Novel Nagegowda Kilara Shivalingaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X