ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶಿಷ್ಟ ಕಾರ್ಯಕ್ರಮಕ್ಕೆ ಸಜ್ಜಾಗಿದೆ ಸಾಹಿತ್ಯ ಪರಿಷತ್ತು

By Prasad
|
Google Oneindia Kannada News

Kannada Sahitya Parishat to witness unique book release
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಜನವರಿ 5 ಭಾನುವಾರ ಸಂಜೆ 5.30 ಗಂಟೆಗೆ, ಒಂದು ವಿಶಿಷ್ಟವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಹವ್ಯಾಸಿ ಬರಹಗಾರ ವಿದ್ಯಾಶಂಕರ ಹರಪನಹಳ್ಳಿ ಅವರು ಬರೆದಿರುವ ಎರಡು ಪುಸ್ತಕಗಳು ಅಂದು ಸಂಜೆ ಕನ್ನಡ ಪುಸ್ತಕ ಪ್ರೇಮಿಗಳ ಕೈಸೇರಲಿವೆ.

ಇದರಲ್ಲಿ ವೈಶಿಷ್ಟ್ಯತೆ ಏನಿದೆ ಎಂದು ನೀವು ಅಚ್ಚರಿ ಪಡುವುದು ಗ್ಯಾರಂಟಿ. ಆ ವೈಶಿಷ್ಟ್ಯತೆ ಏನೆಂದರೆ ಕನ್ನಡದ ಪ್ರಪ್ರಥಮ ಮೊಬೈಲ್ ಕೃತಿ, ಅಂದರೆ ಸಂಪೂರ್ಣವಾಗಿ ಮೊಬೈಲ್ ನಲ್ಲಿಯೇ ಬರೆದಿರುವ 'ಕನಸಿನ ಚಿಟ್ಟೆಯ ಹಿಡಿಯಲು ಹೊರಟು' ಎಂಬ ಕನ್ನಡ ಕಾದಂಬರಿ ಬಿಡುಗಡೆಯಾಗಲಿದೆ. ಚೀನಾದ ಲೇಖಕರೊಬ್ಬರು ಪ್ರಥಮ ಬಾರಿಗೆ ಈ ಪ್ರಯೋಗ ಮಾಡಿದ್ದರೂ, ಕನ್ನಡದ ಮಟ್ಟಿದೆ ಇದೇ ಪ್ರಥಮ. ['ಕನಸಿನ ಚಿಟ್ಟೆ ಹಿಡಿಯಲು...' ಮೂಡಿದ ಬಗೆ]

ಇದರ ಜೊತೆ, ಒನ್ಇಂಡಿಯಾ ಕನ್ನಡ ಪೋರ್ಟಲ್ ನಲ್ಲಿ ಪ್ರಕಟವಾಗುತ್ತಿದ್ದ ಸ್ಫೂರ್ತಿಸೆಲೆ ಉಕ್ಕಿಸುವ ಸಣ್ಣಕಥೆಗಳ ಸಂಕಲನ 'ಶುಭಸಂಕಲ್ಪ' ಪುಸ್ತಕ ಕೂಡ ಬಿಡುಗಡೆಯಾಗಲಿದೆ. ನೋವೇ ಅನಾರೋಗ್ಯ, ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ! ಎಂಬ ಅಡಿಬರಹದೊಂದಿಗೆ ಈ ಸ್ಫೂರ್ತಿದಾಯಕ ಸಣ್ಣಕಥೆಗಳು ಪ್ರತಿ ಭಾನುವಾರ ಪ್ರಕಟವಾಗುತ್ತಿದ್ದವು. ಅದ್ವೈತ ಪಬ್ಲಿಕೇಷನ್ ಈ ಎರಡು ಕೃತಿಗಳನ್ನು ಪ್ರಕಟಿಸಿದೆ.

ಒನ್ಇಂಡಿಯಾ ಕನ್ನಡ ಸಂಪಾದಕ ಎಸ್.ಕೆ. ಶಾಮ ಸುಂದರ, ಉದಯವಾಣಿ ಪುರವಣಿ ಸಂಪಾದಕ ಮತ್ತು ಲೇಖಕ ಗಿರೀಶ್ ರಾವ್ (ಜೋಗಿ), ಕವಯಿತ್ರಿ ಮತ್ತು ಪತ್ರಕರ್ತೆ ಚೇತನಾ ತೀರ್ಥಹಳ್ಳಿ, ರಂಗಕರ್ಮಿ ಮತ್ತು ಜನಪ್ರಿಯ ಚಿತ್ರನಟಿ ಸುಕೃತ ವಾಗ್ಲೆ ಮುಂತಾದ ಗಣ್ಯರು ಶುಭಹಾರೈಸಲು ಬರುತ್ತಿದ್ದಾರೆ. ಇವರೆಲ್ಲ ಇದ್ದಾರೆಂದರೆ ಮಾತುಕತೆಗಳಿಗೆ ಕೊರತೆ ಇರುವುದಿಲ್ಲ.

ವಿದ್ಯಾಶಂಕರ ಹರಪನಹಳ್ಳಿ ಅವರು ಕಾರ್ಯಕ್ರಮಕ್ಕೆ ಬರುವ ಪುಸ್ತಕ ಪ್ರೇಮಿಗಳೇ ಮುಖ್ಯ ಅತಿಥಿಗಳು ಎಂದು ಹೇಳಿದ್ದಾರೆ. ಮುಖ್ಯ ಅತಿಥಿಗಳೆಂದ ಮೇಲೆ ಪುಸ್ತಕ ಬಿಡುಗಡೆ ತಪ್ಪಿಸಿಕೊಂಡರೆ ಹೇಗೆ? ಖಂಡಿತ ಬರ್ತೀರಿ ತಾನೆ? ಹೇಗಿದ್ರೂ ಮತ್ತೊಂದಿಷ್ಟು ಗೆಳೆಯ, ಗೆಳತಿಯರು ಹರಟೆಗೆ ಸಿಗುತ್ತಾರೆ. ಚಳಿಗೆ ಹೆದರಿಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಡಿ, ಬಿಸಿಬಿಸಿ ಕಾಫಿ ಮತ್ತು ತಿಂಡಿಯನ್ನು ವಿದ್ಯಾಶಂಕರ ಅರೇಂಜ್ ಮಾಡಿರುತ್ತಾರೆ.

English summary
Kannada Sahitya Parishat to witness unique book release function on 5th January, 2014 on Sunday. Vidyashankar Harapanahalli's two books, one first ever Kannada novel written on mobile and another short story collection will be released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X