ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಈ ಹೊತ್ತಿಗೆ' ಸಾಹಿತ್ಯ ವಿಮರ್ಶಾ ಕಮ್ಮಟಕ್ಕೆ ಆಹ್ವಾನ

By Prasad
|
Google Oneindia Kannada News

'ಈ ಹೊತ್ತಿಗೆ'ಯು ಇದೇ ನವೆಂಬರ್ 21 ಮತ್ತು 22ರಂದು (ಶನಿವಾರ ಮತ್ತು ಭಾನುವಾರ), ಖ್ಯಾತ ಸಾಹಿತಿ ಎಸ್. ದಿವಾಕರ್ ಅವರ ನಿರ್ದೇಶನದಲ್ಲಿ 'ಸಾಹಿತ್ಯ ವಿಮರ್ಶಾ ಕಮ್ಮಟ'ವನ್ನು ಏರ್ಪಡಿಸಿ, ಅದರಲ್ಲಿ ಭಾಗವಹಿಸಲು ರಾಜ್ಯಾದ್ಯಂತ ಆಸಕ್ತ ಓದುಗರು ಮತ್ತು ಬರಹಗಾರರನ್ನು ಆಹ್ವಾನಿಸುತ್ತಿದೆ. ಆಸಕ್ತರು ದಿನಾಂಕ ನವೆಂಬರ್ 10ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.

ಸಾಹಿತ್ಯ ವಿಮರ್ಶೆ - ಏನು? ಯಾಕೆ?, ವಿಮರ್ಶೆಯ ಆಯಾಮಗಳು, ಸಹೃದಯ, ನವ್ಯ, ಬಂಡಾಯ, ಸ್ತ್ರೀವಾದಿ, ಆಧುನಿಕೋತ್ತರ, ರೂಪ ನಿಷ್ಠ ಮತ್ತು ಮನೋವಿಶ್ಲೇಷಣಾ ವಿಮರ್ಶೆಗಳು ಕಮ್ಮಟದ ವಿಷಯಗಳಾಗಿರುತ್ತವೆ.

ನಮ್ಮ ನಾಡಿನ ಖ್ಯಾತ ವಿಮರ್ಶಕರುಗಳಾದ ಎಸ್ ದಿವಾಕರ್, ಸಿ.ಎನ್ ರಾಮಚಂದ್ರನ್, ಓ.ಎಲ್ ನಾಗಭೂಷಣಸ್ವಾಮಿ, ಬಸವರಾಜ ಕಲ್ಗುಡಿ, ಬಿ,ಎನ್ ಸುಮಿತ್ರಾಬಾಯಿ, ಎಸ್.ಆರ್ ವಿಜಯಶಂಕರ್, ಕೆ.ವೈ ನಾರಾಯಣಸ್ವಾಮಿ ಮತ್ತು ಜಿ.ಬಿ ಹರೀಶ್ ಅವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಮ್ಮಟವನ್ನು ನಡೆಸಿಕೊಡಲಿದ್ದಾರೆ. [ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]

Invite for Kannada literary enthusiasts to participate in seminar

ಎರಡು ದಿನದ ಈ ಕಮ್ಮಟದಲ್ಲಿ ಭಾಗವಹಿಸಲು ಐದು ನೂರು ರೂಪಾಯಿಗಳ (ರೂ. 500/-) ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರ ಊರಿನಿಂದ ಬರಲಿಚ್ಛಿಸುವ ಅಭ್ಯರ್ಥಿಗಳು ತಾವು ಬಂದು ಹೋಗುವ ಮತ್ತು ಉಳಿದುಕೊಳ್ಳುವ ವ್ಯವಸ್ಥೆಯನ್ನು ತಾವೇ ನೋಡಿಕೊಳ್ಳಬೇಕು.

ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ನಡೆಯುವ ಈ ಕಮ್ಮಟದಲ್ಲಿ ಎರಡೂ ದಿನ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಕಮ್ಮಟ ನಡೆವ ಸ್ಥಳ : ಕಪ್ಪಣ್ಣ ಅಂಗಳ, 148/1, 32, ಎ ಮುಖ್ಯರಸ್ತೆ, ಜೆ.ಪಿ.ನಗರ, ಮೊದಲ ಹಂತ, ಬೆಂಗಳೂರು - 560 078.

ಆಸಕ್ತರು ದಿನಾಂಕ ನವೆಂಬರ್ 10ರ ಒಳಗಾಗಿ ತಮ್ಮ ಹೆಸರು, ವಿಳಾಸ, ಫೋನ್ ನಂಬರ್ ಮತ್ತು ಇ ಮೇಲ್ ಐಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಇಲ್ಲವೆ ಇ ಮೇಲ್ ಐಡಿಗೆ ಕಳುಹಿಸಿ ನೊಂದಾಯಿಸಿಕೊಳ್ಳಬಹುದು. [ಭಾವ ಜೀವಿಯ ಕೈ ಹಿಡಿದ ಪ್ರೀತಿಯ ಸೆಲೆ!]

ವಿವರಗಳನ್ನು ಕಳುಹಿಸಬೇಕಾದ ವಿಳಾಸ:
'ಈ ಹೊತ್ತಿಗೆ', #65, 'ಮುಗುಳ್ನಗೆ', 3rd A ಅಡ್ಡರಸ್ತೆ, ಪಿ.ಎನ್.ಬಿ.ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು - 560 062.
ಈಮೇಲ್ : [email protected]
ಮೊಬೈಲ್ : +91 99456 05906

English summary
Ehottige, a platform to discuss new Kannada books, has invited literary enthusiasts to participate in 2 day seminar on Kannada literary vimarshe. This will be held on 21st and 22nd November in Bengaluru under the leadership of writer S Diwakar. Jayalakshmi Patil is hosting this seminar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X