ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕನ್ನಡಕ್ಕೆ ಐದು ಪೈಸೆ ಕಿಮ್ಮತ್ತು ನೀಡದ ಅಮೆಜಾನ್‌ಗೆ ಧಿಕ್ಕಾರ'!

By Prasad
|
Google Oneindia Kannada News

ಹೀಗೊಂದು ಬಲವಾದ ಕೂಗು ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಖ್ಯಾತ ಕನ್ನಡ ಲೇಖಕ, ಛಂದ ಪ್ರಕಾಶನದ ಮಾಲಿಕ ವಸುಧೇಂದ್ರ ಅವರು ಹೊಸ ಪುಸ್ತಕ 'ಐದು ಪೈಸೆ ವರದಕ್ಷಿಣೆ' ಪುಸ್ತಕವನ್ನು, ಅಮೆಜಾನ್ ಕಿಂಡಲ್‌ನಿಂದ ಕಿತ್ತುಹಾಕಿದೆ. ಇದಕ್ಕೆ ನೀಡಿರುವ ಕಾರಣವೇನು ಗೊತ್ತೆ? ಅಮೆಜಾನ್ ಕಿಂಡಲ್ ನಲ್ಲಿ ಕನ್ನಡಕ್ಕೆ ಸಪೋರ್ಟ್ ಇಲ್ಲವಂತೆ! ಕನ್ನಡದ ಪ್ರತಿಷ್ಠೆಗೆ ಹೊಡೆತ ನೀಡಿದೆ. Kannada Books in Kindle ಅಂತ ಸರ್ಚ್ ಮಾಡಿದಾಗ ಕನ್ನಡ ಪುಸ್ತಕಗಳು ಸಿಗುತ್ತಿರುವಾಗ, ವಸುಧೇಂದ್ರ ಅವರ ಪುಸ್ತಕಕ್ಕೆ ಸಪೋರ್ಟ್ ಇಲ್ಲ ಎಂದು ಹೇಳಿರುವುದು ಅಮೆಜಾನ್ ಧೋರಣೆಯನ್ನು ತೋರಿಸುತ್ತದೆ.

ಫೇಸ್ ಬುಕ್ಕಿನಲ್ಲಿ ಈಗಾಗಲೆ ಇದರ ವಿರುದ್ಧ ಭಾರೀ ಪ್ರತಿಭಟನೆ ಶುರುವಾಗಿದೆ. ಕನ್ನಡ ಪುಸ್ತಕ ಪ್ರೇಮಿಗಳು ಹರಿತವಾದ ಮಾತುಗಳಿಂದ ಅಮೆಜಾನ್‌ಗೆ ಬಾರಿಸುತ್ತಿದ್ದಾರೆ. ಹೀಗೇಕೆ ಮಾಡಿದಿರಿ ಎಂದು ಕನ್ನಡಿಗ ವಸಂತ್ ಶೆಟ್ಟಿ ಅವರು ಅಮೆಜಾನ್ ಅವರನ್ನು ಕೇಳಿದಾಗ ಸಿಕ್ಕ ಉತ್ತರವೇನು ಎಂಬುದನ್ನು ಕೆಳಗಡೆ ಓದಿರಿ. ಕನ್ನಡಕ್ಕೆ ಅವಮಾನ ಮಾಡಿರುವ ಅಮೆಜಾನ್‌ಗೆ ನೀವು ಕೊಡುವ ಉತ್ತರವೇನು ಎಂಬುದನ್ನು ಕಾಮೆಂಟ್ ಬಾಕ್ಸಲ್ಲಿ ಹಾಕಿರಿ. ಕನ್ನಡಿಗರೆಲ್ಲ ಒಂದಾಗಿ ಪ್ರತಿಭಟಿಸಿದರೆ ಅಮೆಜಾನ್ ಯಾಕೆ ಬಗ್ಗಲ್ಲ? [ತಮಿಳ್ನಾಡಿನಲ್ಲಿ ಕನ್ನಡ ಮಾತಾಡಿದ್ದಕ್ಕೆ ದಂಡ : ಪ್ರತಿಕ್ರಿಯೆ]

Down with Amazon Kindle for not supporting Kannada

***

ಅಮೆಜಾನ್ ಕಂಪನಿಯ ಕಿಂಡಲ್ ಡಿವೈಸಿನಲ್ಲಿ ಕನ್ನಡ ಸಪೋರ್ಟ್ ಇಲ್ಲ ಅನ್ನುವ ನೆಪ ಹೇಳಿ ವಸುಧೇಂದ್ರ ಅವರ "ಐದು ಪೈಸೆ ವರದಕ್ಷಿಣೆ" ಪುಸ್ತಕವನ್ನು ತೆಗೆದು ಹಾಕಿದ ಸುದ್ದಿ ತಿಳಿದು ಅಮೇಜಾನ್ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದೆ. ಕನ್ನಡದಲ್ಲಿ ಮಾತನಾಡಲು ಯಾರೂ ದೊರೆಯಲಿಲ್ಲ ಅನ್ನುವ ಕಾರಣಕ್ಕೆ ಇಂಗ್ಲಿಷಿನಲ್ಲೇ ಮಾತನಾಡಿದೆ. ನಮ್ಮ ಮಾತುಕತೆ:

ಅಮೆಜಾನ್ : ಕಿಂಡಲ್ ಸಪೋರ್ಟ್ ಕಡೆಯಿಂದ, ಹೇಳಿ ಹೇಗೆ ಸಹಾಯ ಮಾಡಲಿ?

ನಾನು : ನಾನು ಬೆಂಗಳೂರಿನಿಂದ ಕರೆ ಮಾಡುತ್ತಿರುವೆ. ಕಿಂಡಲ್ ಅಲ್ಲಿ ಕನ್ನಡ ಪುಸ್ತಕಗಳು ದೊರೆಯಲು ಶುರುವಾಗಿದೆ ಎಂದು ತಿಳಿದು ಕಿಂಡಲ್ ಮತ್ತು ಪುಸ್ತಕ ಎರಡೂ ಕೊಳ್ಳುವ ಆಲೋಚನೆಯಲ್ಲಿದ್ದೆ. ಆದರೆ ಈಗ ನೋಡಿದರೆ ಪುಸ್ತಕವನ್ನು ತೆಗೆದು ಹಾಕಿ, ಕನ್ನಡ ಭಾಷೆ ಸಪೋರ್ಟ್ ಮಾಡಲ್ಲ ಎಂದು ಅಮೇಜಾನ್ ಹೇಳಿರುವುದನ್ನು ಕೇಳಿ ಬೇಸರದಿಂದ ಕರೆ ಮಾಡಿರುವೆ. ಯಾಕೆ ಹೀಗೆ ಮಾಡಿದ್ದೀರಿ?

ಅಮೆಜಾನ್ : ಅಮೆಜಾನಿನಲ್ಲಿ ಕನ್ನಡ ಸಪೋರ್ಟ್ ಇಲ್ಲ. ಹೀಗಾಗಿ ಅದನ್ನು ತೆಗೆದಿದ್ದೇವೆ.

ನಾನು : ಸಪೋರ್ಟ್ ಇಲ್ಲದೇ ಆ ಪುಸ್ತಕ ನಾಲ್ಕು ದಿನದ ಹಿಂದೆ ಅಮೆಜಾನಿನಲ್ಲಿ ಹೇಗೆ ಬಿಡುಗಡೆ ಆಯ್ತು? [ಕನ್ನಡ ಕಲಿಸುವ ಗುರು ನಿಮ್ಮ ಮೊಬೈಲ್‌ನಲ್ಲಿ ಬರಲಿದ್ದಾರೆ!]

ಅಮೆಜಾನ್ : ಸಪೋರ್ಟ್ ಇಲ್ಲ ಸರ್, ಅದಕ್ಕೆ ತೆಗೆಯಾಲಾಯಿತು.

ನಾನು : ಸಪೋರ್ಟ್ ಇಲ್ಲದೇ ಅದು ಅಮೆಜಾನಿನಲ್ಲಿ ಹೇಗಯ್ಯ ಬಂತು? ಹಲವರು ಅದನ್ನು ಖರೀದಿ ಕೂಡ ಮಾಡಿಲ್ಲವೇ?

ಅಮೆಜಾನ್ : ಇಲ್ಲ ಅದು ಕೆಲವೇ ಕೆಲ ಪುಟ ಕಾಣಿಸಿದ್ದು. ಉಳಿದ ಪುಟ ಸಪೋರ್ಟ್ ಇಲ್ಲ. ಹೀಗಾಗಿ ಖರೀದಿಸಿದವರಿಗೆ ನಾವು ರಿಫಂಡ್ ಮಾಡುತ್ತಿದ್ದೇವೆ.

Down with Amazon Kindle for not supporting Kannada

ನಾನು : ಅಲ್ಲಯ್ಯ, ಸಪೋರ್ಟ್ ಅಂದ್ರೇನು? ಕಿಂಡಲಿನಲ್ಲಿ ಕನ್ನಡ ಅಕ್ಷರ ಕಾಣಿಸಬೆಕು ಅಲ್ಲವೇ? ಕನ್ನಡ ಅಕ್ಷರ ಕಾಣಿಸದೇ ಹಲವರು ಹೇಗೆ ಖರೀದಿಸಲು ಸಾಧ್ಯ?

ಅಮೆಜಾನ್ : ಅದನ್ನೇ ಸರ್ ಹೇಳುತ್ತಿದ್ದೇನೆ. ಸಪೋರ್ಟ್ ಇಲ್ಲ, ಅದಕ್ಕೆ ತೆಗೆದಿದ್ದೇವೆ.

ನಾನು : ಹೇಳಿದ್ದನ್ನೇ ಹೇಳುತ್ತಿದ್ದೀರಲ್ರಿ? ನಾಲ್ಕು ದಿನ ಇದ್ದ ಪುಸ್ತಕ ಇವತ್ತು ಸಪೋರ್ಟ್ ಇಲ್ಲ ಅಂತ ತೆಗೆಯುತ್ತೀನಿ ಅಂತೀರಲ್ಲಾ? ಬುಲ್ ಶಿಟ್.

ಅಮೆಜಾನ್ : ನಿಮ್ಮ ಫೀಡ್ ಬ್ಯಾಕ್ ನಮ್ಮ ಕಿಂಡಲ್ ಸಪೋರ್ಟ್ ವಿಭಾಗಕ್ಕೆ ಕಳಿಸುವೆ.

ನಾನು : ಸರಿ, ನಿಮ್ಮ ಹಿರಿಯ ಅಧಿಕಾರಿಯಿಂದ ಒಂದು ಕಾಲ್ ಮಾಡಿಸಿ. ನಾನೊಬ್ಬ ಗ್ರಾಹಕನಾಗಿ ನನ್ನ ಅನಿಸಿಕೆ ತಿಳಿಸಬೇಕು.

ಅಮೆಜಾನ್ : ಇಲ್ಲ ಸರ್, ನಾನು ಪಾಸ್ ಮಾಡುತ್ತೇನೆ. ಕಾಲ್ ಮಾಡಿಸುತ್ತೇನೆ ಅಂತ ಪ್ರಾಮಿಸ್ ಮಾಡಲಾಗಲ್ಲ.

ನಾನು : ನಿಮ್ಮ ಕನ್ನಡ ವಿರೋಧಿ ಧೋರಣೆಯನ್ನು ನಾನು ವಿರೋಧಿಸುತ್ತೇನೆ. ಇದನ್ನು ಸರಿಪಡಿಸದೇ ಹೋದರೆ, ನನ್ನೆಲ್ಲ ಗೆಳಯರಿಗೂ ಅಮೆಜಾನ್ ಅನ್ನು ಬಹಿಷ್ಕರಿಸುವಂತೆ ತಿಳಿಸುತ್ತೇನೆ ಎಂದು ಕರೆ ಮುಗಿಸಿದೆ.

ಗ್ರಾಹಕರ ಸಾತ್ವಿಕ ಪ್ರತಿಭಟನೆಗಿರುವ ಶಕ್ತಿ ದೊಡ್ಡದು. ಅದನ್ನು ಪ್ರಯೋಗಿಸಿ, ಅಮೆಜಾನಿಗೆ ತನ್ನ ತಪ್ಪು ತಿಳಿಯುವಂತೆ ಮಾಡಿ. ಕಿಂಡಲ್ ಅಲ್ಲಿ ಕನ್ನಡ ಹೆಚ್ಚೆಚ್ಚು ಬಂದರೆ ಕನ್ನಡ ಪುಸ್ತಕ, ಸಾಹಿತ್ಯದ ಪ್ರಸಾರಕ್ಕೆ ಶಕ್ತಿಯೂ ಬರುತ್ತೆ. ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಕನ್ನಡ ಪುಸ್ತಕಗಳನ್ನು ಕಿಂಡಲ್ ಮೂಲಕ ಓದಲು ಸಾಧ್ಯವಾಗುತ್ತೆ. ನಿಮ್ಮದೊಂದು ಸಣ್ಣ ಪ್ರತಿಭಟನೆ ದಾಖಲಿಸಿ.

ಪ್ರತಿಭಟನೆ ಸಲ್ಲಿಸಬೇಕಿದ್ದರೆ : ಅಮೆಜಾನ್ ಇಂಡಿಯಾ ಅವರ ಮಿಂಚೆ ವಿಳಾಸ - [email protected]. ಇಲ್ಲಿಯೂ ಸಹ ನೇರ feedback ನೀಡಬಹುದು.

English summary
Amazon has deleted Vasudhendra's kindle version of his latest book Aidu Paise Varadakshine. They have sent an email saying "we do not support Kannada". Many Kannadiga's were thrilled seeing Kannada fonts on Kindle. But the joy was short lived. Register your protest against step-motherly treatment for Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X