ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿ ಡೈರಿಯ ಪುಟಗಳು, ಬೆಂಗಳೂರಿನಲ್ಲಿ ಅನಾವರಣ

By Shami
|
Google Oneindia Kannada News

ಬೆಂಗಳೂರು, ಮಾ 30 : ದೆಹಲಿಯಲ್ಲಿ ತಮಿಳು,ತೆಲುಗು,ಮಲೆಯಾಳಿಗಳ ಪ್ರಭಾವ ದಟ್ಟವಾಗಿ ಹಬ್ಬುತ್ತಿದ್ದು ಕನ್ನಡಿಗರ ದನಿ ಯಥಾಪ್ರಕಾರ ಅಷ್ಟಕಷ್ಟೇ. ನಮ್ಮಜನರ ಕೀಳರಿಮೆಯೇ ಇದಕ್ಕೆ ಕಾರಣ ಎಂದು ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ‌ ಅಮೀನ್ ‌ ಮಟ್ಟು ವಿಷಾದ ವ್ಯಕ್ತಪಡಿಸಿದರು.

ಕಳೆದ 30 ವರ್ಷಗಳಿಂದ ದೆಹಲಿ ನಿವಾಸಿಯಾಗಿರುವ ಧಾರವಾಡದವರಾದ ಲೇಖಕಿ ರೇಣುಕಾ ನಿಡಗುಂದಿ ಬರೆದ ದೆಹಲಿ ಜೀವನಾನುಭವಗಳ ಕಥನ ಗುಚ್ಛ 'ದಿಲ್ಲಿ ಡೈರಿಯ ಪುಟಗಳು' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ಕೃತಿ ಬಿಡುಗಡೆ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಬೆಳಗ್ಗೆ ಏರ್ಪಡಿಸಲಾಗಿತ್ತು.

ದೆಹಲಿಯ ಪರಿಸರ,ಅಲ್ಲಿನ ಸಂಸ್ಕೃತಿ ವಿಚಿತ್ರ. ಅಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ವಿರಳ. ಕನ್ನಡದವರು ಸಿಕ್ಕಿದರೆ ತಮ್ಮಿಂದ ಸಹಾಯ ಕೇಳುತ್ತಾರೆ ಎಂದು ಭಾವಿಸಿ ಅನ್ಯ ಭಾಷೆಯಲ್ಲಿ ಮಾತನಾಡುವ ಕನ್ನಡ ಅಧಿಕಾರಿಗಳೇ ಹೆಚ್ಚು. ಅಂತಹುದರಲ್ಲಿ ಕನ್ನಡದ ಕೆಲಸಗಳಿಗೆ ನಿರಂತರವಾಗಿ ಸ್ಪಂದಿಸುತ್ತ ದೆಹಲಿಯ ಗಲ್ಲಿಗಲ್ಲಿಗಳ ಅನುಭವವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿರುವ ರೇಣುಕಾನಿಡಗುಂದಿಯವರ ಲೇಖನ ವ್ಯವಸಾಯಕ್ಕೆ ಅಮೀನ್ ‌ ಮಟ್ಟು ಬೆನ್ನು ತಟ್ಟಿದರು.

Dilli Diarya Putagalu kannada book by Renuka Nidagundi release, Bangalore

ಬೇರೆ ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಭಾಷಾಂತರ. ಅದೇ ರೀತಿಯಾಗಿ ಒಂದು ಪ್ರಾಂತ್ಯದ ಸಂಸ್ಕೃತಿ, ಅಲ್ಲಿನ ಬದುಕು-ಬವಣೆಯನ್ನು ಇನ್ನೊಂದು ಭಾಷೆಗೆ ತರುವುದೂ ಒಂದು ರೀತಿಯಲ್ಲಿ ಭಾಷಾಂತರವೇ ಎಂದು ಕಾರ್ಯ ‌ಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಮರ್ಶಕ ಡಾ. ಸಿಎನ್ ‌.ರಾಮಚಂದ್ರ ಅಭಿಪ್ರಾಯಪಟ್ಟರು.

ಸಾಹಿತಿ, ದೆಹಲಿ ಕನ್ನಡ ಸಂಘ ಮತ್ತು ದೆಹಲಿ ಕನ್ನಡಿಗರ ಸ್ಫೂರ್ತಿಯ ಸೆಲೆ, ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸಾಹಿತ್ಯ ಬೆಳೆಯಲು ಕನ್ನಡ ಪತ್ರಿಕೆಗಳ ಕೊಡುಗೆ ಅಪಾರ. ಬೇರೆ ರಾಜ್ಯಗಳ ಪತ್ರಿಕೆಗಳು ಅಯಾ ದಿನವೇ ಬಂದರೂ ಕನ್ನಡದ ಪತ್ರಿಕೆಗಳು ದೆಹಲಿಯಲ್ಲಿ ನಮ್ಮ ಕೈಗೆ ಸಿಗುವುದಿಲ್ಲ. ಈ ಮಧ್ಯೆ ದೆಹಲಿಯಲ್ಲಿ ಕನ್ನಡ ಬರವಣಿಗೆಯನ್ನು ಆರಂಭಿಸಿ ಅಲ್ಲಿ ಕನ್ನಡದ ಕಂಪನ್ನು ಪಸರಿಸಿ, ಅಲ್ಲಿನ ಅನುಭವವನ್ನು ಕೃತಿ ರೂಪದಲ್ಲಿ ಹೊರ ತಂದದ್ದಕ್ಕೆ ರೇಣುಕಾ ನಿಡಗುಂದಿಯವರನ್ನು ಶ್ಲಾಘಿಸಿದರು.

ಇದೇ ವೇಳೆ, ರಾಜ್ಯದಿಂದ ಹೊರಗಡೆ ನೆಲೆಸಿ ಕನ್ನಡ ಬರವಣಿಗೆಗಳ ಮೂಲಕ ನಮ್ಮ ಭಾಷೆ ಮತ್ತು ಲೋಕಾನುಭವಗಳನ್ನು ಕನ್ನಡಕ್ಕೆ ತಂದ ಅನೇಕ ಕನ್ನಡಿಗ ಮನಸ್ಸುಗಳನ್ನು ಮತ್ತು ಲೇಖನಿಗಳನ್ನು ಬಿಳಿಮಲೆ ಈ ಸಂದರ್ಭದಲ್ಲಿ ಮನಃಪೂರ್ವಕವಾಗಿ ನೆನೆದರು.

ತಮ್ಮ ಕನ್ನಡ ಬರವಣಿಗೆ ಕೃಷಿಗೆ ಇಂಬು ನೀಡಿದ ದಟ್ಸ್ ಕನ್ನಡ.ಕಾಂ, ಕೆಂಡಸಂಪಿಗೆ, ಅವಧಿ..ಆನ್ ಲೈನ್ ಕನ್ನಡ ವಾಹಿನಿಗಳನ್ನು ಲೇಖಕಿ ರೇಣುಕಾ ನಿಡಗುಂದಿ ತಮ್ಮ ಭಾಷಣದಲ್ಲಿ ನೆನೆದರು. ದೆಹಲಿಯ ಬಹುಭಾಷಾ ಪರಿಸರದಲ್ಲಿ ತಮ್ಮ ಗ್ರಹಿಕೆಗಳನ್ನು ಕನ್ನಡ ಬರವಣಿಗೆಯ ಮೂಲಕ ದಾಖಲಿಸುವ ದೀರ್ಘ ಪ್ರಯಾಣವನ್ನು ಅವರು ಸಾರ್ಥಕಭಾವದಿಂದ ಸ್ಮರಿಸಿಕೊಂಡರು.

ಪುಸ್ತಕದ ಬಗ್ಗೆ:
ಲೇಖಕಿ: ರೇಣುಕಾ ನಿಡಗುಂದಿ
ಶೀರ್ಷಿಕೆ: ದಿಲ್ಲಿ ಡೈರಿಯ ಪುಟಗಳು
ಪ್ರಕಾಶಕರು: ಅಹರ್ನಿಶಿ ಪ್ರಕಾಶನ,ಶಿವಮೊಗ್ಗ
ಪುಟಗಳು : 168
ಬೆಲೆ: 140

English summary
Dilli Diarya Putagalu - Collection of Kannada short stories released in Bangalore. Author : Renuka Nidagundi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X