ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಲಪತಿಗಳೇ ತಡಬಡಾಯಿಸುವಂತಹ ಚಾಕಚಕ್ಯತೆಯಿದ್ದ ಪ.ಗೋ

By ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
|
Google Oneindia Kannada News

ವಿಶ್ವ ವಿದ್ಯಾನಿಲಯದ ಕುಲಪತಿಗಳು ಪತ್ರಿಕಾ ಗೋಷ್ಠಿ ನಡೆಸಿದರೂ ಅವರೇ ತಡಬಡಾಯಿಸಯವಂತಹ ಪ್ರಶ್ನೆ ಕೇಳುವ ಚಾಕಚಕ್ಯತೆ ಪ.ಗೋ ಅವರಲ್ಲಿತ್ತು. ತನ್ನ ಹಳೆಯ ಸ್ಕೂಟರಿನಲ್ಲೇ ಸಾಗುತಿದ್ದ ಪ.ಗೋ, ಲಾಬಿ ಮಾಡಿಕೊಳ್ಳುವ ಅವಕಾಶವಿದ್ದರೂ, ಹೊಸ ಗಾಡಿ ಖರೀದಿಸದೆ, ಪತ್ರಕರ್ತರು ಯಾರ ಸಹಾಯವನ್ನು ಪಡೆದರೂ ಅದು ಒಂದಲ್ಲ ಒಂದು ರೀತಿಯಿಂದ ನಮ್ಮನ್ನು ಕಟ್ಟಿ ಹಾಕುತ್ತದೆ.

ವೈಯುಕ್ತಿಕ ಕಾರಣಗಳು ನಮ್ಮ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು ಅದು ವಸ್ತುನಿಷ್ಠತೆಗೆ ಧಕ್ಕೆ ಉಂಟು ಮಾಡುತ್ತೆ ಎಂದು ಪ್ರತಿಪಾದಿಸಿದವರು. ಕೇವಲ ಎಂಟನೇ ತರಗತಿಯವರೆಗೆ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಪ. ಗೋ ಅವರ ಉತ್ತಮ ಚಿಂತನೆ ಹಾಗೂ ವಿಷಯ ಗ್ರಹಿಕೆಗಳ ಮೂಲಕ ಅವರ ಬದುಕೇ ಪತ್ರಿಕೋದ್ಯಮದ ಶಾಲೆಯಾಗಿತ್ತು. (ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ)

ಧಾರ್ಮಿಕ ಶೃದ್ಧೆ ಅಥವಾ ನಂಬಿಕೆಗಳನ್ನು ತಮ್ಮ ವೃತ್ತಿಯ ಮಧ್ಯ ಪ್ರದರ್ಶಿಸಬಾರದು ಎಂಬ ಸ್ಪಷ್ಟ ನಿಲುವು ಅವರದ್ದಾಗಿತ್ತು.'ಊರಿಗೆ ಅರಸನಾದರೂ ತಾಯಿಗೆ ಮಗ' ಎಂಬ ಗಾದೆ ಇದೆ. ಆದರೆ, ರಾಜನಾದವನು ತಾಯಿಯ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸುವಾಗ ,ಕೆಲವೊಂದು ಅಲಿಖಿತ ನಿಯಮಗಳನ್ನು ಪಾಲನೆ ಮಾಡುತ್ತಾನೆ ಅಂತಹ ವೃತ್ತಿ ಕಟ್ಟುಪಾಡುಗಳು ಪತ್ರಕರ್ತರಲ್ಲೂ ಇರಬೇಕು ಎಂದು ಪ್ರತಿಪಾದಿಸುತ್ತಾರೆ .

Book review of Pa Go Prapancha, book written by Chidambara Baikampady

ಪ.ಗೋ ಕೇವಲ ಪತ್ರಕರ್ತನಾಗಿರದೆ ಅವರೊಳಗೊಬ್ಬ ಅದ್ಭುತ ಕಲಾವಿದನು ಅಡಗಿಕೊಂಡಿದ್ದ, ಹಿಂದಿ ಸಿನೆಮಾದಲ್ಲಿ ನಟನೆ, ತುಳು ಚಿತ್ರ ನಿರ್ಮಾಣ, ಯಕ್ಷಗಾನವನ್ನು ರಾಜ್ಯಾದಂತ ಪಸರಿಸಿದ ಕೀರ್ತಿ ಪ.ಗೋ ಅವರಿಗೆ ಎಂಬುದನ್ನು ಲೇಖಕರು ಬಿಚ್ಚಿಡುತ್ತಾರೆ.

ಖ್ಯಾತ ವ್ಯಂಗ್ಯಚಿತ್ರಕಾರರಾದ ಹರಿಣಿಯವರು ಬರೆದಿರುವ ವ್ಯಂಗ್ಯಚಿತ್ರಗಳು ಪ.ಗೋ ಪ್ರಪಂಚ ಪುಸ್ತಕಕ್ಕೆ ಇನ್ನಷ್ಟು ಮೆರುಗು ನೀಡಿದೆ. ಸ್ವತಃ ಪ.ಗೋ ಅವರು ವ್ಯಂಗ್ಯಚಿತ್ರಗಳನ್ನು ಬಿಡಿಸುವುದರಲ್ಲಿ ನಿಪುಣರಾಗಿದ್ದರು ಆದ್ದರಿಂದ ಅವರ ಪುಸ್ತಕದಲ್ಲಿ ಒಬ್ಬ ಶ್ರೇಷ್ಠ ಕಲಾವಿದನ ಕಲಾನೈಪುಣ್ಯತೆಯ ಪರಿಚಯವೂ ಆಗಿದೆ.

ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಹಾಲ್ದೊಡ್ಡೇರಿ ಸುಧೀಂದ್ರ ಅವರು ತನ್ನ ತಂದೆಯ ಜೊತೆಗಿನ ಪ.ಗೋ ಒಡನಾಟವನ್ನು ತಿಳಿಸಿದ್ದಾರೆ. ಅವರ ತಂದೆಯ ಜೊತೆಗಿನ ಪತ್ರ ಸಂಭಾಷಣೆಗಳ ಬಗ್ಗೆ ತಿಳಿಸುತ್ತಾ ಇಂದಿಗೂ ಅವುಗಳನ್ನು ತಮ್ಮ ಬಳಿ ಜೋಪಾನವಾಗಿ ಇರಿಸಿದ್ದಾರೆ ಎಂಬ ಅಂಶವನ್ನೂ ತಿಳಿಸಿದ್ದಾರೆ ಅದೇ ರೀತಿ ಪ.ಗೋ ಅವರ ವೃತ್ತಿ ಬದ್ಧತೆಯ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. (ಚೇತನ್ ಭಗತ್ ಅರ್ಧ ಪ್ರೇಯಸಿಯ ಕಥೆ)

ಇಂದಿನ ಪತ್ರಕರ್ತರಿಗೆ ಬೆರಳ ತುದಿಯಲ್ಲಿ ವಿಷಯ ಸಂಗ್ರಹಿಸುವ ಹಾಗೂ ವಿಷಯ ಮುಟ್ಟಿಸುವ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ ಆದರೆ ಹಿಂದೆ ಇಂತಹ ಯಾವುದೇ ವ್ಯವಸ್ಥೆ ಇಲ್ಲದೇ ಇದ್ದ ಕಾಲದಲ್ಲಿ, ಸುದ್ದಿ ಸಂಗ್ರಹಿಸಿ ಪ್ರತಿದಿನ ಓದುಗರಿಗೆ ಏನಾದರೂ ಹೊಸ ವಿಚಾರ ಕೊಡಬೇಕು ಎಂದು ಶ್ರಮಿಸಿದ ಪತ್ರಕರ್ತ ಬದುಕಿದ ರೀತಿಯನ್ನು ಕಂಡು ಒಬ್ಬ ಓದುಗನಾದ ನನಗೆ ,ಈ ಪುಸ್ತಕದ ಕಡೆಗೆ ಯುವ ಪತ್ರಕರ್ತರು ಒಮ್ಮೆ ಕಣ್ಣಾಯಿಸಿದರೆ ಚೆನ್ನ ಎಂದನಿಸಿತು.

ಪುಸ್ತಕದ ವಿವರಗಳು
ಪುಸ್ತಕದ ಹೆಸರು : ಪ.ಗೋ. ಪ್ರಪಂಚ
ಲೇಖಕರು : ಚಿದಂಬರ ಬೈಕಂಪಾಡಿ, ಹಿರಿಯ ಪತ್ರಕರ್ತರು ಮತ್ತು ಅಂಕಣಕಾರರು , ಮಂಗಳೂರು
ಪ್ರಕಾಶಕರು : ಏಕಂ ಪ್ರಕಾಶನ, # 171 , ಶ್ರೀಮಾತಾ , ಅರ್ ಎಚ್ ಸಿ ಎಸ್ ಬಡಾವಣೆ , 4 ನೆ ಮುಖ್ಯ ರಸ್ತೆ, 8ನೆ ಕ್ರಾಸ್,ಅನ್ನಪೂರ್ಣೆಶ್ವರಿ ನಗರ , ನಾಗರಭಾವಿ , ಬೆಂಗಳೂರು 560091
ಮೊದಲ ಮುದ್ರಣ : 2016
ಪುಸ್ತಕದ ಅಳತೆ: ಪುಟಗಳು 1/8 ಡೆಮ್ಮಿ, 136 ಪುಟ
ಮೌಲ್ಯ : ರೂಪಾಯಿ 90/-

ಕೃತಿ ಲಭ್ಯವಿರುವ ಪುಸ್ತಕ ಮಳಿಗೆಗಳು :
ಸಪ್ನ ಬುಕ್ ಹೌಸ್, ಅಂಕಿತ ಪುಸ್ತಕ ಮತ್ತು ,ಬೆಳಗರೆ ಬುಕ್ಸ್ ಪುಸ್ತಕ ಮಳಿಗೆಗಳಲ್ಲಿ 'ಪ ಗೋ ಪ್ರಪಂಚ' ಪುಸ್ತಕ ಲಭ್ಯವಿದೆ. ಮಂಗಳೂರು , ಹುಬ್ಬಳ್ಳಿಯ ಪುಸ್ತಕ ಮಳಿಗೆಯಲ್ಲಿ'ಪ ಗೋ ಪ್ರಪಂಚ' ಪುಸ್ತಕ ಸಿಗುತ್ತದೆ. ಅಂಚೆ ಮೂಲಕ ನೇರವಾಗಿ ಪುಸ್ತಕ ಪಡೆಯಲು ಮಿಂಚಂಚೆ ವಿಳಾಸ [email protected] ಗೆ e-mail ಮಾಡಿ.

English summary
Book review of Pa Go Prapancha, book written by Chidambara Baikampady.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X