ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ ಗೆದ್ದ ಪೂರ್ಣಿಮಾ ಮಾಳಗಿಮನಿ

|
Google Oneindia Kannada News

ಬೆಂಗಳೂರು, ಆಗಸ್ಟ್ 16: ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಬುಕ್‌ ಬ್ರಹ್ಮ ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಏರ್ಪಡಿಸಿದ್ದ 'ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2022'ಯಲ್ಲಿ ಪೂರ್ಣಿಮಾ ಮಾಳಗಿಮನಿ ಪ್ರಥಮ ಸ್ಥಾನ ಗಳಿಸಿ 50,000 ರೂ. ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ಬುಕ್ ಬ್ರಹ್ಮ ಕಥಾ ಸ್ಪರ್ಧೆ ಅಂತಿಮ ಫಲಿತಾಂಶದಂತೆ ಪೂರ್ಣಿಮಾ ಮಾಳಗಿಮನಿ ಪ್ರಥಮ, ಬಸವಣ್ಣೆಪ್ಪ ಕಂಬಾರ ದ್ವಿತೀಯ, ಸಂದೀಪ ನಾಯಕ ತೃತೀಯ ಸ್ಥಾನ ಗಳಿಸಿದ್ದಾರೆ.

ಬುಕ್‌ ಬ್ರಹ್ಮ ಅವರ ಆಶ್ರಯದಲ್ಲಿ ಬ್ರೀವಿಂಗ್‌ ಗ್ಯಾಜೆಟ್ಸ್, ನವಕರ್ನಾಟಕ ಪ್ರಕಾಶನ, ಫೆರ್ಬಿಂಡನ್‌ ಮತ್ತು ಕಾಗ್ನಿಕ್ವೆಸ್ಟ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ‌ʻಕಥಾ ಸ್ಪರ್ಧೆ 2022ʼರ ಪ್ರಶಸ್ತಿ ವಿಜೇತರನ್ನು ಆಗಸ್ಟ್ 15ರಂದು ನಡೆದ ಸಮಾರಂಭದಲ್ಲಿ ಪ್ರಕಟಿಸಲಾಗಿದೆ.

ಬೆಂಗಳೂರಿನ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕೊಂಕಣಿ ಕಥೆಗಾರ ದಾಮೋದರ ಮಾವಜೊ ಪ್ರಶಸ್ತಿ ಘೋಷಿಸಿದರು. ಬುಕ್‌ ಬ್ರಹ್ಮದ ಮುಖ್ಯಸ್ಥ ಸತೀಶ್‌ ಚಪ್ಪರಿಕೆ ಅವರು ಪ್ರಶಸ್ತಿಗೆ ಆಯ್ಕೆಯಾದ ಕತೆಗಾರರೊಂದಿಗೆ ಸಂವಾದ ನಡೆಸಿದರು.

ಮೊದಲ ಬಹುಮಾನ ಪೂರ್ಣಿಮಾ ಮಾಳಗಿಮನಿ

ಮೊದಲ ಬಹುಮಾನ ಪೂರ್ಣಿಮಾ ಮಾಳಗಿಮನಿ

ಮೊದಲ ಬಹುಮಾನ ಪೂರ್ಣಿಮಾ ಮಾಳಗಿಮನಿ ಅವರ ''ವಿನ್ನರ್ ವಿನ್ನರ್ ಚಿಕನ್ ಡಿನ್ನರ'' ಕಥೆಗೆ ದೊರೆತಿದೆ.ಅವರಿಗೆ 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ದೊರೆತಿದೆ.

ಎರಡನೇ ಬಹುಮಾನ ಬಸವಣ್ಣೆಪ್ಪ ಕಂಬಾರ ಅವರ 'ನೆರಳ ನರ್ತನ' ಕಥೆಗೆ ಲಭಿಸಿದ್ದು, 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ದೊರೆತಿದೆ.

ಮೂರನೇ ಬಹುಮಾನ ಸಂದೀಪ ನಾಯಕ ಅವರ 'ಚಂದ್ರಶಾಲೆಯಲ್ಲಿ ನಿಂತ ತೇರು' ಕಥೆಗೆ ದೊರೆತಿದ್ದು, 15 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ದೊರೆತಿದೆ.

ಸಮಾಧಾನಕರ ಬಹುಮಾನ

ಸಮಾಧಾನಕರ ಬಹುಮಾನ

ಸಮಾಧಾನಕರ ಬಹುಮಾನ: (ತಲಾ ಐದು ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ)

  • ಅನುಪಮಾ ಪ್ರಸಾದ್ ಅವರ 'ಕುಂತ್ಯಮ್ಮಳ ಮಾರಾಪು',
  • ಮೌನೇಶ ಬಡಿಗೇರ ಅವರ 'ಒಂಟಿ ಓಲೆಯ ಮುತ್ತು',
  • ನಂದಿನಿ ಹೆದ್ದುರ್ಗ ಅವರ 'ಬಾಗಿದ ರೆಪ್ಪೆಯ ಅಡಗುತಾಣದಲ್ಲಿ'

ಉಳಿದ 14 ಕಥೆಗಾರರಿಗೆ ತಲಾ ಒಂದು ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಯಿತು.

ಗಿರೀಶ್‌ ಕಾಸರವಳ್ಳಿ ಉಪಸ್ಥಿತಿ

ಗಿರೀಶ್‌ ಕಾಸರವಳ್ಳಿ ಉಪಸ್ಥಿತಿ

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನಗಳನ್ನು ಪಡೆದ ಕಥೆಗಳನ್ನು ಪ್ರಕಟಿಸಿದರು.

ಇನ್ಫೋಸಿಸ್ ಬೆಂಗಳೂರು ಕೇಂದ್ರದ ಮುಖ್ಯಸ್ಥ, ಹಿರಿಯ ಉಪಾಧ್ಯಕ್ಷ ಗುರುರಾಜ ದೇಶಪಾಂಡೆ, ಕನ್ನಡಕ್ಕಾಗಿ ಬುಕ್ ಬ್ರಹ್ಮ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು.
ಅಂತಿಮ ಸುತ್ತಿಗೆ ಆಯ್ಕೆಯಾದ 20 ಕತೆಗಳನ್ನು 'ಬುಕ್ ಬ್ರಹ್ಮ' ವೆಬ್‌ಸೈಟ್‌ನಲ್ಲಿ ಹಾಗೂ ಪುಸ್ತಕ, ಇ-ಪುಸ್ತಕ, ಆಡಿಯೋ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುತ್ತದೆ.

ಎಲ್ಲ ಭಾಷೆಗಳಿಗಿಂತ ಮುಂದಿದೆ

ಎಲ್ಲ ಭಾಷೆಗಳಿಗಿಂತ ಮುಂದಿದೆ

ಕಥಾಸ್ಪರ್ಧೆ ತೀರ್ಪುಗಾರರಾಗಿದ್ದ ಜಿ.ಎನ್.ರಂಗನಾಥರಾವ್, ಶ್ರೀಧರ ಬಳಗಾರ, ಕೇಶವ ಮಳಗಿ, ಆಶಾದೇವಿ ಉಪಸ್ಥಿತರಿದ್ದರು. ಕಥಾಸ್ಪರ್ಧೆಗೆ ಬಂದಿದ್ದ ಕಡೆಯ ಸುತ್ತಿನ 50 ಕಥೆಗಳನ್ನು ಓದಿದ ಹಿನ್ನೆಲೆಯಲ್ಲಿ, ಕಥೆಗಳು ಪಡೆದುಕೊಳ್ಳುತ್ತಿರುವ ಇವತ್ತಿನ ನಿಲುವು ಒಲವುಗಳ ಬಗ್ಗೆ ಆಶಾದೇವಿ ಅವರು ಮಾತನಾಡಿದರು. ಕನ್ನಡ ಕಾವ್ಯ, ಕಥೆ ಮತ್ತು ವಿಮರ್ಶೆ ಯಾವ ಅನುಮಾನವೂ ಇಲ್ಲದೆಎಂದು ಅವರು ಹೇಳಿದರು. ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಪಾಲ್ಗೊಂಡಿದ್ದರು.

ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರ ರಂಗಪ್ರವೇಶವಾಗುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬುಕ್ ಬ್ರಹ್ಮ ಪ್ರಧಾನ ಸಂಪಾದಕ ದೇವು ಪತ್ತಾರ್ ಸ್ವಾಗತಿಸಿದರು. ಬುಕ್ ಬ್ರಹ್ಮ ಸಿಇಒ ಉಷಾ ಪ್ರಸಾದ್ ವಂದಿಸಿದರು. ವತ್ಸಲಾ ಮೋಹನ್, ಸ್ವಸ್ತಿಕ್ ಶೆಟ್ಟಿ ನಿರೂಪಿಸಿದರು.

ಚಿತ್ರಕೃಪೆ: ಬುಕ್ ಬ್ರಹ್ಮ

English summary
The Book Brahma Independence Day Story Competition 2022: Writer Poornima Malagimani declared winner, She grabbed First prize money Rs 50,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X