• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀವತ್ಸ ಜೋಶಿಯವರ 'ಪುಳಕದ ಟಚ್'ನಲ್ಲೇನಿದೆ?

By Prasad
|

ವೈವಿಧ್ಯಮಯ ವಿಷಯಗಳನ್ನು ಹೆಕ್ಕುತ್ತ, ಪದಗಳೊಂದಿಗೆ ಆಟವಾಡುತ್ತ, ಓದುಗರಲ್ಲಿ ಆನಂದದ ಭಾವವನ್ನು ಚಿಮ್ಮಿಸುತ್ತ, ವಿಶಿಷ್ಟ ಬಗೆಯ ಲೇಖನಗಳನ್ನು ಕನ್ನಡದ ಓದುಗರಿಗೆ ಕಳೆದ ಒಂದು ದಶಕದಿಂದ ಹಂಚುತ್ತ ಬಂದಿರುವ ಅಮೆರಿಕನ್ನಡಿಗ, ಕನ್ನಡ ಅಂಕಣಕಾರ ಶ್ರೀವತ್ಸ ಜೋಶಿ ಅವರ ಲೇಖನಗಳ ಸಂಕಲನ 'ಪುಳಕದ ಟಚ್' ಅಮೆರಿಕದ ಅಟ್ಲಾಂಟಾದಲ್ಲಿ ನಡೆದ 7ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ.

ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟವಾಗುತ್ತಿದ್ದ 'ಪರಾಗಸ್ಪರ್ಶ' ಅಂಕಣ ಬರಹಗಳ ಸಂಕಲನವೇ 'ಪುಳಕದ ಟಚ್'. ಕಳೆದ ವರ್ಷ ಇದೇ ಅಂಕಣ ಬರಹದ ಎರಡು ಸಂಕಲನಗಳಾದ 'ಚೆಲುವಿನ ಟಚ್' ಮತ್ತು 'ಗೆಲುವಿನ ಟಚ್' ಬಿಡುಗಡೆಯಾಗಿದ್ದವು. ಒನ್ಇಂಡಿಯಾ ಕನ್ನಡದಲ್ಲಿ ಕೂಡ ಜೋಶಿಯವರು 2000ರಿಂದ 5 ವರ್ಷಗಳ ಕಾಲ 'ವಿಚಿತ್ರಾನ್ನ' ಅಂಕಣ ಬರೆಯುತ್ತಿದ್ದರು. ಆ ಅಂಕಣ ಬರಹಗಳು ಕೂಡ ಮೂರು ಭಾಗಗಳಲ್ಲಿ ಪ್ರಕಟವಾಗಿವೆ (ವಿಚಿತ್ರಾನ್ನ, ಇನ್ನೊಂದಿಷ್ಟು ವಿಚಿತ್ರಾನ್ನ, ಮತ್ತೊಂದಿಷ್ಟು ವಿಚಿತ್ರಾನ್ನ).

ಪುಳಕದ ಟಚ್ ಪುಸ್ತಕದಲ್ಲೇನಿದೆ? : ಯಾಂತ್ರಿಕ ಬದುಕಿನಲ್ಲಿ ನೈಜ ಜೀವನ ಸೌಂದರ್ಯವನ್ನು ಎಲ್ಲರಿಗೂ ಸರಳವಾಗಿ ತಿಳಿಸಬೇಕೆಂಬ ಅರ್ಥಪೂರ್ಣ ಕಾಳಜಿ ಮತ್ತು ಲಘು ಹಾಸ್ಯದ ಧಾಟಿಯಲ್ಲಿ ಓದುಗರನ್ನು ನಕ್ಕುನಗಿಸುತ್ತಲೇ ಚಿಂತನೆಗೆ ಹಚ್ಚುವ ವಿಶಿಷ್ಟ ಕರಾಮತ್ತುಗಳು ಈ ಬರಹಗಳಲ್ಲಿ ವಿಪುಲವಾಗಿ ಕಾಣಿಸುತ್ತವೆ.

ಪ್ರತಿಯೊಂದು ಲೇಖನವೂ ಅದರ ವಸ್ತುವಿನ ಸುತ್ತ ಮಾತ್ರ ಸುತ್ತದೆ ವಿವಿಧ ಸಂಗತಿಗಳ ಸಾಧ್ಯತೆ, ಹೊಂದಿಕೆ, ಹೋಲಿಕೆಗಳಿಂದ ಸೃಜನಶೀಲವಾಗುತ್ತದೆ. ಎಷ್ಟೋಸರ್ತಿ ಲೇಖನದ ತಲೆಬರಹವೇ ಓದುವಂತೆ ಪ್ರೇರೇಪಿಸುತ್ತದೆ. ಆರಂಭಿಕ ಹಂತದಲ್ಲೇ ಓದುಗರ ಮನಸ್ಸನ್ನು ಹೈಜಾಕ್ ಮಾಡುತ್ತದೆ. ಕೊನೆತನಕ ಸಲೀಸಾಗಿ ಓದಿಸಿ ಅನುಪಮ ಆನಂದಕ್ಕೆ, ಹದವಾದ ಹಿತಾನುಭವಕ್ಕೆ ಕಾರಣವಾಗುತ್ತದೆ.

ಬಾಲ್ಯ ಕಳೆದ ಹಳ್ಳಿ ಪರಿಸರದ ಸುಂದರ ನೆನಪುಗಳು, ಶಿಕ್ಷಣ ಮತ್ತು ವೃತ್ತಿಯಿಂದ ಬಂದಿರುವ ಎಂಜಿನಿಯರ್ ಮನಸ್ಸು, ತಾರ್ಕಿಕ ವಿಶ್ಲೇಷಣೆ, ಸಣ್ಣಸಣ್ಣ ಸಂಗತಿಗಳಲ್ಲೂ ಸ್ವಾರಸ್ಯವನ್ನು ಹುಡುಕುವ ಮನೋಭಾವ, ಅಕ್ಷರಗಳೊಂದಿಗೆ ಆಟವಾಡುತ್ತ ಪದವಿನೋದದಿಂದ ಹೊಸಹೊಸ ಅರ್ಥಗಳನ್ನು ಹುಟ್ಟುಹಾಕುತ್ತ ಸಾಗುವ ನವಿರಾದ ನಿರೂಪಣೆ- ಇವೆಲ್ಲವೂ ಶ್ರೀವತ್ಸ್ ಜೋಶಿಯವರ ಬರವಣಿಗೆಗೆ ತನ್ನದೇ ಆದ ಛಾಪು ನೀಡುತ್ತದೆ.

ಕಲೆ, ವಿಜ್ಞಾನ, ಸಂಸ್ಕೃತಿ ಎಲ್ಲವನ್ನೂ ಒಳಗೊಂಡ ವಿಷಯಗಳು ಆಮೀಬದಿಂದ ಅನಂತದತ್ತ ಸಾಗುತ್ತವೆ. ಸಣ್ಣಸಣ್ಣ ಸ್ವಾರಸ್ಯಕರ ಸಂಗತಿಗಳನ್ನು ಬೀಜದೊಳಗಿನ ವೃಕ್ಷದಂತೆ ಮುಂದಿಟ್ಟು ಓದುಗರನ್ನು ಸೂಕ್ಷ್ಮಗ್ರಾಹಿಗಳನ್ನಾಗಿ ಮಾಡುತ್ತವೆ.

ಪುಳಕದ ಟಚ್ ವಿವರಗಳು

ಪುಸ್ತಕದ ಹೆಸರು : "ಪರಾಗಸ್ಪರ್ಶ- ಪುಳಕದ ಟಚ್!" (ಇದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜುಲೈ 2011ರಿಂದ ಮೇ 2012ರ ಅವಧಿಯಲ್ಲಿ ಪ್ರಕಟವಾದ 'ಪರಾಗಸ್ಪರ್ಶ' ಅಂಕಣ ಬರಹಗಳ ಸಂಕಲನ)

ಲೇಖಕ : ಶ್ರೀವತ್ಸ ಜೋಶಿ

ಪ್ರಕಾಶಕರು : ಗೀತಾ ಬುಕ್ ಹೌಸ್, ಮೈಸೂರು

ಮುಖಪುಟ ವಿನ್ಯಾಸ : ವಿನಯ್ ಸಾಯ, ಉಡುಪಿ

ಬೆಲೆ : ರೂ.135

English summary
Kannada columnist, Americannadiga Srivathsa Joshi's latest collection of column write ups, published in Vijaya Karnataka Kannada daily, has been published in the name of 'Pulakada Touch'. The book published by Geetha Book House, Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X