ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಜೋಗಿಯ ಮೂರು ಪುಸ್ತಕಗಳ ಬಿಡುಗಡೆ

By Prasad
|
Google Oneindia Kannada News

Jogi's 3 books release on 23rd December
ಡಿಸೆಂಬರ್ ತಿಂಗಳ ಸುದೀರ್ಘ 'ರಹಸ್ಯ ರಾತ್ರಿ'ಯ ದಿನದಂದು ಪ್ರಳಯ ಸಂಭವಿಸುವುದೆಂಬ 'ಹುಚ್ಚು' ಕಲ್ಪನೆಗೆ ಅಪಹಾಸ್ಯದ ನಗೆ ನಕ್ಕು ಮತ್ತೊಂದು ಬೆಳಗಿಗೆ ಕಣ್ಣು ತೆರೆದುಕೊಂಡಿರುವ ಬೆಂಗಳೂರಿನ 'ಮಹಾನಗರ'ದ ಜನತೆ ಪುಸ್ತಕ ಬಿಡುಗಡೆಯೆಂಬ ನವೋಲ್ಲಾಸಕ್ಕೆ ಅಣಿಯಾಗುತ್ತಿದ್ದಾರೆ.

ಈ ನವೋಲ್ಲಾಸಕ್ಕೆ ಕಾರಣರಾಗುತ್ತಿರುವವರು ಖ್ಯಾತ ಲೇಖಕ, ಪತ್ರಕರ್ತ ಗಿರೀಶ್ ರಾವ್ ಊರ್ಫ್ ಜೋಗಿ. ಅವರ ಕತೆಗಳ ಮರುಮುದ್ರಣ ಸೇರಿದಂತೆ ಮೂರು ಪುಸ್ತಕಗಳು ಭಾನುವಾರ, ಡಿ.23ರಂದು ಬೆಳಿಗ್ಗೆ 10.30ರ ಮುಹೂರ್ತದ ಸಮಯದಲ್ಲಿ ಬೆಂಗಳೂರಿನಲ್ಲಿ ಓದುಗರ ಕೈಸೇರಲಿವೆ.

ಎಂದಿನಂತೆ, ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ 'ವಾಡಿಯಾ ಸಭಾಂಗಣ' ಪುಸ್ತಕ ಪ್ರಸವಕ್ಕೆ ಸಜ್ಜಾಗಲಿದೆ. ಓದುಗರೆ ಗಮನಿಸಿ, ಬೆಳಿಗ್ಗೆ 9.30ಕ್ಕೆ ಉಪಹಾರ ಕೂಡ ನಿಮಗಾಗಿ ಕಾದಿರುತ್ತದೆ.

ಯಾವ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು : ದೇವರ ಹುಚ್ಚು (ಕಾದಂಬರಿ), ಮಹಾನಗರ (ಗ್ರಹಿಕೆಗಳು) ಮತ್ತು ರಾಯಭಾಗದ ರಹಸ್ಯ ರಾತ್ರಿ (ಕತೆಗಳು - ಎರಡನೇ ಮುದ್ರಣ).

ಪುಸ್ತಕ ಬಿಡುಗಡೆ : ನಾಗತಿಹಳ್ಳಿ ಚಂದ್ರಶೇಖರ್, 'ಉಂಡೂ ಹೋದ ಕೊಂಡೂ ಹೋದ' ಕನ್ನಡ ಚಲನಚಿತ್ರ ಖ್ಯಾತಿಯ ಲೇಖಕ ಮತ್ತು ನಿರ್ದೇಶಕ.

ಮುಖ್ಯ ಅತಿಥಿಗಳು : ಟಿ.ಎನ್. ಸೀತಾರಾಂ (ಟಿವಿ ಧಾರಾವಾಹಿ ನಿರ್ದೇಶಕ), ಅನಂತ್ ಚಿನಿವಾರ್ (ಜನಶ್ರೀ ಟಿವಿ ವಾಹಿನಿಯ ಮುಖ್ಯಸ್ಥ) ಮತ್ತು ಕುಮಾರಿ ನೀತೂ (ಬೇರು ಖ್ಯಾತಿಯ ಚಲನಚಿತ್ರ ನಟಿ).

ಉಪಸ್ಥಿತಿ : ಗಿರೀಶ್ ರಾವ್ (ಸಾಹಿತಿ ಮತ್ತು ಪತ್ರಕರ್ತ)

ಪ್ರಕಟಣೆ : ಅಂಕಿತ ಪುಸ್ತಕ, ಗಾಂಧಿ ಬಜಾರ್, ಬೆಂಗಳೂರು.

English summary
Noted writer, journalist Girish Rao's 3 books are being releases at Indian Institute of World Culture, B.P. Wadia road, Basavanaguri, Bangalore on 23rd December, Sunday. Film director Nagathihalli Chandrashekhar will be releasing books of Jogi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X