• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಸ್ತಕಗಳು ಮಾತನಾಡುತ್ತಿವೆ, ನೀವು ಕೇಳುಗರಾಗಿರಿ!

By Prasad
|
Listen to Kannada books
ಬೆಳಗಿನ ಗಡಿಬಿಡಿಯಲ್ಲಿಯೇ ಮಕ್ಕಳಿಗೆ ರುಚಿಕರವಾದ ತಿಂಡಿಗಳನ್ನು ಮಾಡುತ್ತ, ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಕಚೇರಿಗೆ ತೆರಳುತ್ತಿರುವ ಸಂದರ್ಭದಲ್ಲಿ, ಟ್ರೆಡ್ ಮಿಲ್ ಮೇಲೆ ಬ್ರಿಸ್ಕ್ ವಾಕಿಂಗ್ ಮಾಡುತ್ತ, ಕಂಪನಿಯಲ್ಲಿ ಕಚೇರಿಯ ಕೆಲಸವನ್ನು ಮಾಡುತ್ತ ಕನ್ನಡ ಸಾಹಿತಿಗಳು ಬರೆದಿರುವ ಪುಸ್ತಕಗಳಲ್ಲಿನ ಅಕ್ಷರಗಳನ್ನು ಕಿವಿಗೆ ತುಂಬಿಕೊಳ್ಳುವಂತಿದ್ದರೆ ಹೇಗೆ?

ಇದೇನಿದು ತಮಾಷೆ ಎಂದು ನಕ್ಕುಬಿಡಬೇಡಿ, ಪುಸ್ತಕಗಳನ್ನು ಕೇಳುವುದು ಹೇಗೆ ಸಾಧ್ಯ ಎಂದು ನೀವೇ ಪ್ರಶ್ನಾರ್ಥಕ ಚಿಹ್ನೆ ಆಗಲೂಬೇಡಿ. ಇದನ್ನು ಸಾಧ್ಯವಾಗಿಸಿರುವುದು ಬುಕ್ಸ್‌ಟಾಕ್. ಪುಸ್ತಕ ಓದುಗರನ್ನು ಮೀರಿ, ಸಾಹಿತ್ಯ ಸಂಪದ್ಭರಿತವಾದ ಪುಸ್ತಕಗಳು ಕೇಳುಗರನ್ನು ತಲುಪಬೇಕು ಎಂಬ ಹೊಸ ಪರಿಕಲ್ಪನೆಯಿಂದ ಆಡಿಯೋ ಪುಸ್ತಕಗಳನ್ನು ಬುಕ್ಸ್‌ಟಾಕ್ ಹೊರತಂದಿದೆ.

ಕಾಲದ ವೇಗದೊಂದಿಗೆ ಜನರೂ ಇಂದಿನ ದಿನಗಳಲ್ಲಿ ಓಡುತ್ತಿರಲೇಬೇಕಾಗಿದೆ. ಪರಿಸ್ಥಿತಿಯೇ ಹೀಗಿರಬೇಕಾದರೆ ಕನ್ನಡ ಪುಸ್ತಕಗಳನ್ನು ಓದಬೇಕೆಂದರೂ ಓದಲು ಸಮಯವಾದರೂ ಎಲ್ಲಿರುತ್ತದೆ? ಓದಲು ಅಂತಹ ಆಸಕ್ತಿ ಇಲ್ಲದವರು ಕೂಡ ಪುಸ್ತಕಗಳತ್ತ ಆಕರ್ಷಿಸುವ ಉದ್ದೇಶದಿಂದ ಕನ್ನಡದ ಅನೇಕ ಖ್ಯಾತ ಲೇಖಕರ ಪುಸ್ತಕಗಳನ್ನು ಬುಕ್ಸ್‌ಟಾಕ್ ಆಡಿಯೋ ರೂಪದಲ್ಲಿ ತಂದಿದೆ.

ಯಾರ ಪುಸ್ತಕಗಳು ಲಭ್ಯ? : ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಸಣ್ಣಕಥೆ ಓದಬೇಕೆ (ಕೇಳಬೇಕೆ)? ಡಾ. ಯು.ಆರ್. ಅನಂತಮೂರ್ತಿಯವರ ಸಂಸ್ಕಾರ ಪುಸ್ತಕದಲ್ಲೇನಿದೆ ಎಂದು ತಿಳಿಯಬೇಕೆ? ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಯನ್ನು ಓದದೆಯೂ ತಿಳಿಯಬೇಕೆ? ಡಾ. ಚಂದ್ರಶೇಖರ ಕಂಬಾರರ ಸಿಂಗಾರೆವ್ವ ಅಥವಾ ಸುಧಾಮೂರ್ತಿಯವರ ಮನದ ಮಾತು ಪುಸ್ತಕ ಇನ್ನೂ ಓದಿಲ್ಲವೆ? ಚಿಂತಿಸಬೇಡಿ. ಅವೆಲ್ಲವೂ ಆಡಿಯೋ ರೂಪದಲ್ಲಿ ಬುಕ್ಸ್‌ಟಾಕ್ ವೆಬ್‌ಸೈಟಿನಲ್ಲಿ ಕೈಗೆಟಕುವ ಬೆಲೆಗೆ ಲಭ್ಯವಿವೆ.

ಈ ಪುಸ್ತಕಗಳೆಲ್ಲವನ್ನು ಖ್ಯಾತ ರಂಗಕರ್ಮಿಗಳಾದ ಸಿ.ಆರ್. ಸಿಂಹ, ಋತ್ವಿಕ್ ಸಿಂಹ, ಲಕ್ಷ್ಮೀ ಚಂದ್ರಶೇಖರ್ ಮುಂತಾದವರು ತಮ್ಮ ಅದ್ಭುತ ಕಂಠಸಿರಿಯಲ್ಲಿ ನಿರೂಪಣೆ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪ್ರೇಮಿಗಳು ಕೂಡ ಅಷ್ಟೇ ಆಸಕ್ತಿಯಿಂದ ಆಡಿಯೋಗಳನ್ನು ಕೊಳ್ಳುತ್ತಿದ್ದಾರೆ ಎಂದು ಒನ್ಇಂಡಿಯಾ ಕನ್ನಡಕ್ಕೆ ಬುಕ್ಸ್‌ಟಾಕ್ ಒಡತಿ ಜೈ ಅವರು ಹೇಳಿದ್ದಾರೆ.

2009ರ ನವೆಂಬರ್‌ನಲ್ಲಿ ಜೈ ಜೆಂಡೆ ಮತ್ತು ಜಯಶ್ರೀ ಮಂತ್ರಿ ಈಶ್ವರನ್ ಅವರು ಜಂಟಿಯಾಗಿ ಬೆಂಗಳೂರಿನಲ್ಲಿ ಬುಕ್ಸ್‌ಟಾಕ್ ಆರಂಭಿಸಿದರು. ಆಡಿಯೋ ಪುಸ್ತಕಗಳು ಅತೀ ವಿರಳವಾಗಿರುವುದೇ ಅವರ ಈ ಸಾಹಸಕ್ಕೆ ಪ್ರೇರಣೆಯಾಗಿದೆ. ಆಡಿಯೋ ಪುಸ್ತಕಗಳ ಮುಖಾಂತರ ಇನ್ನೂ ಹೆಚ್ಚಿನ ಕನ್ನಡಿಗರನ್ನು ತಲುಪುವುದು ಅಥವಾ ಕನ್ನಡ ಸಾಹಿತ್ಯವನ್ನು ಹೆಚ್ಚೆಚ್ಚು ಕನ್ನಡಿಗರಿಗೆ ತಲುಪಿಸುವುದು ಅವರ ಈ ಸಾಹಸದ ಹಿಂದಿನ ಮುಖ್ಯ ಉದ್ದೇಶ.

ಆಡಿಯೋ ಪುಸ್ತಕಗಳಿಂದ ದೃಷ್ಟಿವಿಹೀನರಿಗೆ ತುಂಬಾ ಅನುಕೂಲವಾಗಿದೆ. ಕನ್ನಡದ ಅನೇಕ ಶ್ರೇಷ್ಠ ಸಾಹಿತ್ಯಗಳು ಆಡಿಯೋ ಪುಸ್ತಕಗಳ ಮುಖಾಂತರ ಅವರಿಗೆ ತಲುಪುತ್ತಿವೆ. ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು ಎಂದು ಹೆಮ್ಮೆಯಿಂದ ಹೇಳುತ್ತಾರೆ ಜೈ. ಅನಿವಾಸಿ ಭಾರತೀಯರಿಂದ ಕೂಡ ಆಡಿಯೋ ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸದ್ಯಕ್ಕೆ ಕನ್ನಡ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯ ಪುಸ್ತಕಗಳ ಆಡಿಯೋ ಲಭ್ಯವಿವೆ. ಪುಸ್ತಕಗಳು ಮಾತನಾಡುತ್ತಿವೆ, ನೀವು ಕೇಳುಗರಾಗಿರಿ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BooksTALK has launched audio books, which is a new concept in India. It is for all of you who love listening to stories; you may or may not be an avid reader but you can enjoy Kannada audio books, while walking, travelling, cooking, exercising or busy with household work.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+135217352
CONG+375289
OTH8417101

Arunachal Pradesh

PartyLWT
BJP121224
CONG022
OTH437

Sikkim

PartyLWT
SKM4812
SDF639
OTH101

Odisha

PartyLWT
BJD1100110
BJP23023
OTH13013

Andhra Pradesh

PartyLWT
YSRCP9555150
TDP16824
OTH101

TRAILING

Ram Kripal Yadav - BJP
Pataliputra
TRAILING
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more