ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆಲ್ ರೌಂಡರ್' ಕೃಷ್ಣಾನಂದ ಕಾಮತ್ ಕೃತಿಗಳು

By Prasad
|
Google Oneindia Kannada News

Dr. Krishnanand L Kamat (photo : Kamat.com)
ಶಿಕ್ಷಣತಜ್ಞ, ವಿದ್ವಾಂಸ, ಬರಹಗಾರ, ಛಾಯಾಚಿತ್ರಗ್ರಾಹಕ, ಚಿತ್ರಕಾರ... ಎಲ್ಲವೂ ಆಗಿದ್ದ ಕೃಷ್ಣಾನಂದ ಲಕ್ಷ್ಮಣ ಕಾಮತ್ ಅವರು ಸೃಜನಶೀಲತೆಯ ಪ್ರತಿಬಿಂಬ. ಅವರೊಬ್ಬ ಚಿಕಿತ್ಸಕ ಮನಸ್ಸಿನ ಆಲ್ ರೌಂಡರ್ ಆಗಿದ್ದರು. ಅಪಾರ ಜೀವನಾನುಭವ ತುಂಬಿಕೊಂಡಿದ್ದ ಕಾಮತ್ ಅವರ ನೆನಪಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸೆ.25ರಂದು ಗ್ರಂಥಾಲಯ ತೆರೆದುಕೊಳ್ಳುತ್ತಿದೆ.

ಅವರನ್ನು ಇಂಥದೇ ಕ್ಷೇತ್ರಕ್ಕೆ ಸೀಮಿತಿಗಳೊಳಿಸುವುದು ಸಾಧ್ಯವೇ ಇರಲಿಲ್ಲ. ಪ್ರತಿಯೊಂದು ವಿಷಯದಲ್ಲಿಯೂ ಆಸಕ್ತಿ ಹೊಂದಿದ್ದ ಕೃಷ್ಣಾನಂದ ಕಾಮತ್ ಅವರು ಪ್ರತಿಭೆಯ ಸಾಗರ. ಕೃಷ್ಣಾನಂದರಲ್ಲೊಬ್ಬ ವಿಜ್ಞಾನಿಯಿಲ್ಲ, ಕಲಾವಿದನಿದ್ದ, ಚಿಕಿತ್ಸಕನಿದ್ದ, ಹಾಸ್ಯಗಾರನಿದ್ದ... ಅವರಲ್ಲಿ ಒಂದು ಮಗುವಿನಲ್ಲಿರಬೇಕಾದ ಮುಗ್ಧತೆಯೂ ಇತ್ತು.

ಇಂತಿದ್ದ ಕೃಷ್ಣಾನಂದ ಕಾಮತ್ ಅವರು ವಿಭಿನ್ನ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪ್ರವಾಸ ಕಥನ, ಕಲೆ, ಪರಿಸರ, ಪ್ರಬಂಧ, ಕಾದಂಬರಿ, ಪ್ರಾಣಿ ಪಕ್ಷಗಳ ಬಗ್ಗೆ ಕೂಡ ಅನೇಕ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ತಮ್ಮ ಹೆಂಡತಿ ಜ್ಯೋತ್ಸ್ನಾ ಮತ್ತು ಮಗ ವಿಕಾಸ್ ಅವರಿಗೆ ಬರೆದ ಪತ್ರಗಳ ಸಂಕಲನಗಳನ್ನೂ ತಂದಿದ್ದಾರೆ.

ಅವರು ಬರೆದಿರುವ ಪುಸ್ತಕಗಳ ಪಟ್ಟಿ ಇಂತಿದೆ

* ನಾನೂ ಅಮೆರಿಕಾಗೆ ಹೋಗಿದ್ದೆ (ಪ್ರವಾಸ ಕಥನ)
* ಭಗ್ನ ಸ್ವಪ್ನ (ಕಾದಂಬರಿ)
* ವಂಗ ದರ್ಶನ (ಪ್ರವಾಸ ಕಥನ)
* ನಾ ರಾಜಸ್ತಾನದಲ್ಲಿ (ಪ್ರವಾಸ ಕಥನ)
* ಪ್ರಾಣಿ ಪರಿಸರ (ಪರಿಸರ)
* ಕಲಾರಂಗ (ಪ್ರವಾಸ ಕಥನ)
* ಪ್ರೇಯಸಿಗೆ ಪತ್ರಗಳು (ಪತ್ರಗಳು)
* ಪಶು-ಪಕ್ಷಿ ಪ್ರಪಂಚ (ಪ್ರಾಣಿ ಜೀವನ)
* ಬಸ್ತಾರ ಪ್ರವಾಸ (ಪ್ರವಾಸ ಕಥನ)
* ಕೀಟ ಜಗತ್ತು (ಕೀಟಶಾಸ್ತ್ರ)
* ಸಸ್ಯ ಪ್ರಪಂಚ (ಪರಿಸರ)
* ಕವಿಕಲೆ (ಕಲೆ)
* ಮಧ್ಯಪ್ರದೇಶದ ಮಡಿಲಲ್ಲಿ (ಪ್ರವಾಸ ಕಥನ)
* ಸಸ್ಯ ಪರಿಸರ (ಪರಿಸರ)
* ಅಕ್ಷತಾ (ಪ್ರಬಂಧ)
* ದಿ ಟೈಮ್ ಲೆಸ್ ಥಿಯೇಟರ್ (ಮಲ್ಟಿಮೀಡಿಯಾ)
* ಇರುವೆಯ ಇರುವು (ಕೀಟಶಾಸ್ತ್ರ)
* ಕಾಗೆಯ ಕಾಯಕ (ಪ್ರಾಣಿ ಜೀವನ)
* ಕೊಂಕಣ್ಯಗಳೆ ಕವಿಕಾಲ (ಕಲೆ)
* ಪ್ರವಾಸಿಯ ಪ್ರಬಂಧಗಳು (ಪ್ರವಾಸ ಕಥನ)
* ಮರು ಪಯಣ (ನಿರೂಪಣೆ)
* ಸರ್ಪ ಸಂಕುಲ (ಪ್ರಾಣಿ ಜೀವನ)
* ಪತ್ರ ಪರಚಿ (ಪತ್ರಗಳು)
* ನಾ ಕಂಡ ಕರ್ನಾಟಕ (ಪ್ರಬಂಧ)

English summary
Books authored by Kannada writer, scholar, late Dr K L Kamat listed. A library will be opened in Honnavar (Uttara Kannada dist) in loving memory of the stalwart. Prominent among his works include, most read travelogue "Nanoo Americage Hogidde" (12 prints), Published by Manohara Granthamala (1969).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X