ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಕನ್ನಡ ಆನ್ ಲೈನ್ ಪುಸ್ತಕ ಮಳಿಗೆ ಆರಂಭ

By Prasad
|
Google Oneindia Kannada News

Aakruti Online Kannada Book Store
ಆಕೃತಿ ಪುಸ್ತಕ, ರಾಜಾಜಿನಗರ, ಬೆಂಗಳೂರು ಪ್ರಾರಂಭಿಸಿರುವ www.akrutibooks.com, ಕನ್ನಡ ಪುಸ್ತಕಗಳ ಅಂತರ್ಜಾಲ ಪುಸ್ತಕ ಮಳಿಗೆಗೆ ಖ್ಯಾತ ಸಾಹಿತಿ ಚಂದ್ರಶೇಖರ ಕಂಬಾರರು ಭಾನುವಾರ, ಸೆ.4ರಂದು ಚಾಲನೆ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಆಕೃತಿ ಪ್ರಕಟಿಸಿರುವ, ಕೆಳಗೆ ನಮೂದಿಸಿರುವ ಪುಸ್ತಕಗಳು ಭಾನುವಾರ 04-09-2011 ರಂದು ಬೆಳಗ್ಗೆ 10:30 ಗಂಟೆಗೆ ನಯನ ಸಭಾಂಗಣ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು ಇಲ್ಲಿ ಲೋಕಾರ್ಪಣೆಯಾಗಲಿವೆ.

1) "ಜನಾರಣ್ಯ" - ಕಾದಂಬರಿ (ಬೆಂಗಾಳಿ ಮೂಲ ಲೇಖಕ : ಮಣಿಶಂಕರ್ ಮುಖರ್ಜಿ, ಕನ್ನಡಕ್ಕೆ: ಗೀತಾ ವಿಜಯಕುಮಾರ್)
2) "ಒಡಲಾಳದ ತಳಮಳ" - ಕಥಾಸಂಕಲನ (ಲೇಖಕ : ಕೇಶವ ಕುಡ್ಲ)
3) "ಮರದ ಮರ್ಮರ" - ಮಕ್ಕಳ ನಾಟಕ (ನಾಟಕಕಾರ: ನಾರಾಯಣ ಕಂಗಿಲ) ಪುಸ್ತಕಗಳು.

ಈ ಸಂದರ್ಭದಲ್ಲಿ ಡಿ ಕೆ ಚೌಟ (ಖ್ಯಾತ ನಾಟಕಕಾರ), ಸಾ ಶಿ ಮರಳಯ್ಯ (ಖ್ಯಾತ ಸಾಹಿತಿ), ಚಂದ್ರಶೇಖರ ಕಂಬಾರ (ಖ್ಯಾತ ಸಾಹಿತಿ) ಮತ್ತು ಪ್ರೇಮಾ ಭಟ್ (ಖ್ಯಾತ ಕಥೆಗಾರ್ತಿ) ನಮ್ಮೊಂದಿಗಿರುತ್ತಾರೆ.

ಅಂದಿನಿಂದ ಕನ್ನಡ ಪುಸ್ತಕಗಳನ್ನು www.akrutibooks.com ಆಕೃತಿ ಅಂತರ್ಜಾಲ ಮಳಿಗೆಯ ಮೂಲಕ ಹುಡುಕುವ, ರಿಯಾಯಿತಿ ದರದಲ್ಲಿ ಕೊಂಡುಕೊಳ್ಳುವ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬೆಂಗಳೂರಿನಲ್ಲಿ ಉಚಿತ ಸಾಗಾಣೆಯಿರುತ್ತದೆ. ಕನ್ನಡ ಪುಸ್ತಕೋದ್ಯಮದಲ್ಲೇ ಇದೊಂದು ವಿನೂತನ ಪ್ರಯತ್ನ. ಹೊಸದಾಗಿ ಬಿಡುಗಡೆಗೊಂಡ ಪುಸ್ತಕಗಳು, ಲಭ್ಯವಿರುವ ಪುಸ್ತಕಗಳಷ್ಟೇ ಅಲ್ಲದೆ, ಹಳೆಯ ಅಪರೂಪದ ಪುಸ್ತಕಗಳನ್ನೂ ಓದುಗರು ಕೊಳ್ಳುವ ಸೌಲಭ್ಯವಿದೆ.

English summary
Renowned Kannada writer Chandrashekhar Kambar will launch www.akrutibooks.com. Aakruti Online Book store for kannada Books a venture of Aakruti Books Pvt. Ltd. This will be followed by the launch of three books. Program is on 4 Sept 2011, Sunday at Nayana, Kannada Bhavana, JC Road, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X