ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿ ಮಹಾದೇವ್ ಸ್ನೇಹ ಸಾಹಿತ್ಯ ಸಮ್ಮಿಲನ

By Prasad
|
Google Oneindia Kannada News

Jyothi Mahadev
ಎರಡು ಪುಸ್ತಕಗಳ ಬಿಡುಗಡೆ, ಇಬ್ಬರು ಸಾಹಿತ್ಯ ದಿಗ್ಗಜರಿಂದ ಉಪನ್ಯಾಸ, ಮೂರು ಗಂಟೆಯ ಸಾಹಿತ್ಯ ಸಮ್ಮಿಲನ, ನೂರಾರು ಸಾಹಿತ್ಯ ಪ್ರೇಮಿಗಳೊಂದಿಗೆ ಸ್ನೇಹಮಿಲನ... ಈ ಸಾಹಿತ್ಯದ ಸಂಭ್ರಮಕ್ಕೆ ನೀವು ತಯಾರಾಗಿದ್ದರೆ ಜೂ. 26ರ ಸಂಜೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ನಿಮಗಾಗಿ ಬಾಗಿಲು ತೆರೆದಿರುತ್ತದೆ.

ಅಂದು ಅಮೆರಿಕದಲ್ಲಿದ್ದು ಈಗ ಮಣಿಪಾಲದಲ್ಲಿ ನೆಲೆ ನಿಂತಿರುವ ಕವಯಿತ್ರಿ ಜ್ಯೋತಿ ಮಹಾದೇವ್ ಅವರ ಎರಡು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಪುಸ್ತಕ ಪ್ರೇಮಿ ಮತ್ತು ತಿಂಡಿ ಪ್ರೇಮಿಗಳಾಗಿದ್ದಲ್ಲಿ ನೀವು ಈ ಸಾಹಿತ್ಯ ಸಮ್ಮಿಲನವನ್ನು ಮಿಸ್ ಮಾಡಿಕೊಳ್ಳಲಾರಿರಿ.

ಸಂಜೆ ಮೂರೂವರೆಯಿಂದ ಆರೂವರೆವರೆಗೆ ಬರೀ ಸಾಹಿತ್ಯ, ಸಂವಾದ, ಆತ್ಮೀಯರೊಡನೆ ಮಾತುಕತೆಗೆ ಮೀಸಲು. ಜ್ಯೋತಿ ಮಹಾದೇವ್ ಅವರು, "ನಿಮ್ಮೆಲ್ಲರ ಸಹವಾಸ ನಮಗೆ ಬೇಕು. ನಿಮ್ಮೆಲ್ಲರ ಸಾಹಚರ್ಯ ನಗೆ ಬೇಕು. ನಿಮ್ಮೆಲ್ಲರ ಸಹಕಾರ ನಮಗೆ ಬೇಕು. ಪ್ರೋತ್ಸಾಹ, ನಗು, ಖುಷಿ, ಮತ್ತೊಂದಿಷ್ಟು (ಸಾಹಿತ್ಯಿಕ ಮತ್ತು ಜಠರದ) ಹಸಿವು ಹೊತ್ತುಕೊಂಡೇ ಬನ್ನಿ" ಎಂದು ಕಾರ್ಕಳದಿಂದ ದಟ್ಸ್ ಕನ್ನಡ ಓದುಗರಿಗೆ ಆಹ್ವಾನ ನೀಡಿದ್ದಾರೆ.

ಇಬ್ಬರು ಸಾಹಿತ್ಯ ದಿಗ್ಗಜರು ಅಂದು ನಮ್ಮನ್ನು ಪುಟ್ಟ ಯಾತ್ರೆ ಮಾಡಿಸಲಿದ್ದಾರೆ, ಸಾಹಿತ್ಯ ಯಾತ್ರೆ. ಡಾ. ಸಾ.ಶಿ. ಮರುಳಯ್ಯ ಅವರು "ಹಳೇ ಮತ್ತು ಹೊಸ ಕಾವ್ಯದ ಸಂಬಂಧ" ವಿಷಯದ ಮೇಲೂ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ಈ ವಿಷಯಕ್ಕೆ ಪೂರಕವಾಗಿಯೂ ಉಪನ್ಯಾಸ ಮಾಡಲಿದ್ದಾರೆ.

English summary
Poetess Jyothi Mahadev's two books are getting released on June 26, Sunday at Kannada Sahitya Parishat auditorium in Chamarajpet in Bangalore. Laureates Dr. HS Venkatesha Murthy and Dr. Sa Shi Marulaiah are giving lectures. Book lovers are welcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X