ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಲ್ ಶಂಕರ್ ರ ಪಾರ್ಲಿಮೆಂಟ್ ಪುಸ್ತಕ

By Mahesh
|
Google Oneindia Kannada News

BL Shankar
ಬೆಂಗಳೂರು, ಮಾ. 3: ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಮಾಜಿ ಸಂಸದ ಡಾ.ಬಿ.ಎಲ್.ಶಂಕರ್ ಹಾಗೂ ಪ್ರೊ. ವೆಲೇರಿಯನ್ ರೋಡ್ರಿಗಸ್ ರಚಿಸಿರುವ 'ದಿ ಇಂಡಿಯನ್ ಪಾರ್ಲಿಮೆಂಟ್ ಎ ಡೆಮಾಕ್ರಸಿ ಆಟ್ ವರ್ಕ್" ಎಂಬ ಕೃತಿಯನ್ನು ಮಾ.4ರಂದು ವಿದೇಶಾಂಗ ಖಾತೆ ಸಚಿವ ಎಸ್ ಎಂ ಕೃಷ್ಣ ಅವರು ಲೋಕಾರ್ಪಣೆ ಮಾಡಲಿದ್ದಾರೆ. ನವದೆಹಲಿಯ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ಹಾಗೂ ಬೆಂಗಳೂರಿನ ಭಾರತ ಯಾತ್ರಾ ಕೇಂದ್ರ ಸಂಸ್ಥೆಗಳು ಈ ಕೃತಿಯನ್ನು ಹೊರ ತಂದಿದೆ.

ಡಾ. ಬಿ.ಎಲ್. ಶಂಕರ್ ಹಾಗೂ ಜವಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದ ಪ್ರೊ. ವೆಲೇರಿಯನ್ ರೋಡ್ರಿಗಸ್ ಅವರು ಪ್ರಪ್ರಥಮ ಲೋಕಸಭೆಯಿಂದ ಹಿಡಿದು 14ನೇ ಲೋಕಸಭೆಯ ವರೆಗಿನ ಎಲ್ಲ ಲೋಕಸಭಾ ಕಲಾಪಗಳನ್ನು ಕೂಲಂಕುಷವಾಗಿ ಮತ್ತು ವಿಮರ್ಶಾತ್ಮಕವಾಗಿ ಅಧ್ಯಯನ ನಡೆಸಿ ಈ ಕೃತಿ ರಚಿಸಿದ್ದಾರೆ. ಎಂದು ಭಾರತ ಯಾತ್ರಾ ಸಂಚಾಲಕ ಕೆ.ವಿ.ನಾಗರಾಜಮೂರ್ತಿ ಹೇಳಿದ್ದಾರೆ.

ಕಾರ್ಯಕ್ರಮ ವಿವರ:
* ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಂದ ಮಾ.4ರಂದು ಸಂಜೆ 6:30ಕ್ಕೆ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಬಿಡುಗಡೆ.
* ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮುಖ್ಯ ಅತಿಥಿ.
* ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅಧ್ಯಕ್ಷತೆ.

350 ಪುಟಗಳ ಈ ಕೃತಿಯು ಭಾರತೀಯ ಸಂಸತ್ತಿನ ಕುರಿತಂತೆ ಹಲವು ವೈಜ್ಞಾನಿಕ ಮತ್ತು ಸಂಶೋಧನಾತ್ಮಕ ಮಾಹಿತಿಗಳನ್ನು ಒಳಗೊಂಡಿದೆ. ಸಂಜೆ 5.30 ರಿಂದ 6.30ರ ವರೆಗೆ ಸುಗಮ ಸಂಗೀತ ಹಾಗೂ ಕಾಫಿ ಚಹಾ ವಿತರಣೆ ಇರುತ್ತದೆ. ದಿ ಇಂಡಿಯನ್ ಪಾರ್ಲಿಮೆಂಟ್ ಪುಸ್ತಕ ದೇಶದ ಪ್ರಮುಖ ಪುಸ್ತಕ ಮಳಿಗೆಗಳಲ್ಲದೆ ಆನ್ ಲೈನಲ್ಲಿ ಫ್ಲಿಪ್ ಕಾರ್ಟ್ ನಲ್ಲೂ ಲಭ್ಯವಿದ್ದು ಬೆಲೆ ಸುಮಾರು 760 ರಿಂದ 895(ರಿಯಾಯತಿ ಮೇಲೆ ಅವಲಂಬಿತ) ತಗುಲಲಿದೆ.

English summary
Former Member of the Lok Sabha Dr BL Shankar and JNU Professor Valerian Rodrigues's book The Indian Parliament- Democracy by Bharat Yatra Kendra and Oxford University Press is releasing on March.5. External Affairs Minister SM Krishna, Dr. UR Anantha Murthy and former Lokayukta MN Venkata Chalaiah are attending the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X