ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಂದ ಪುಸ್ತಕದಿಂದ ನಾಲ್ಕು ಪುಸ್ತಕಗಳು ಬಿಡುಗಡೆ

By Mahesh
|
Google Oneindia Kannada News

Four Kannada Books release, Chanda Pustaka
ಬೆಂಗಳೂರು, ಜ. 25: ಯುವ ಬರಹಗಾರರನ್ನು ಬೆಳೆಸುತ್ತಾ, ಕಾಲಕಾಲಕ್ಕೆ ಚೆಂದದ ಪುಸ್ತಕಗಳನ್ನು ಹೊರ ತರುವ ಛಂದ ಪುಸ್ತಕ ಪ್ರಕಾಶನ ಈಗ ಮತ್ತೆ ನಾಲ್ಕು ಹೊಸ ಪುಸ್ತಕಗಳನ್ನು ನಿಮಗೆ ನೀಡಲು ಸಿದ್ಧವಾಗಿದೆ. ಪುಸ್ತಕ ಬಿಡುಗಡೆ ಜೊತೆಗೆ "ಕನ್ನಡ ಕಾವ್ಯ ವಿನ್ಯಾಸದಲ್ಲಿ ವಿರುದ್ಧ ನೆಲೆಯ ಪ್ರವಾಹಗಳು" ಎಂಬ ವಿಷಯದ ಕುರಿತು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರು ಮಾತನಾಡಲಿದ್ದಾರೆ.

ಬಿಡುಗಡೆಯಾಗಲಿರುವ ಪುಸ್ತಕಗಳು:
ಮೊದಲ ಮಳೆಯ ಮಣ್ಣು (ಕಥಾ ಸಂಕಲನ): ಕಣಾದ ರಾಘವ
ಕಿಲಿಮಂಜಾರೋ( ಪ್ರವಾಸ ಕಥನ) : ಪ್ರಶಾಂತ್ ಬೀಚಿ
ಬರೀ ಎರಡು ರೆಕ್ಕೆ (ಕಾದಂಬರಿ) : ಸುನಂದಾ ಪ್ರಕಾಶ್ ಕಡಮೆ
ದ್ವೀಪವ ಬಯಸಿ (ಕಾದಂಬರಿ) : ಎಂ.ಆರ್ ದತ್ತಾತ್ರಿ

ಓದಲು ಮರೆಯದಿರಿ : ಆಫ್ರಿಕಾದ ಕಿಲಿಮಾಂಜರೋ ಪರ್ವತಾರೋಹಣ

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು
ದಿನಾಂಕ/ದಿನ: 26 ಜನವರಿ, ಬುಧವಾರ
ಸಮಯ: ಬೆಳಗ್ಗೆ 10.30ಕ್ಕೆ
ಮುಖ್ಯ ಅತಿಥಿಗಳು: ಅಮರೇಶ ನುಗಡೋಣಿ, ಬೆಳಗೋಡು ರಮೇಶ್ ಭಟ್

ಆ ದಿನ ಲಘು ಉಪಹಾರವಿರುತ್ತದೆ. ದಯವಿಟ್ಟು ಸ್ವಲ್ಪ ಬೇಗನೆ ಬನ್ನಿ. ಕಾರ್ಯಕ್ರಮವನ್ನು ಸರಿಯಾದ ಸಮಯಕ್ಕೆ ಪ್ರಾರಂಭಿಸಬಹುದು ಎಂದು ಪ್ರೀತಿಯಿಂದ ಲೇಖಕ ಹಾಗೂ ಪ್ರಕಾಶಕ ವಸುಧೇಂದ್ರ ಅವರು ಕೋರಿದ್ದಾರೆ.

ನಾಲ್ಕನೇ ಆಯಾಮ ಪುಸ್ತಕ ಬಿಡುಗಡೆ

ದಿನಾಂಕ: ಜನವರಿ 26
ಸಮಯ: ಸಂಜೆ 4 ಗಂಟೆಗೆ
ಸ್ಥಳ : ನಯನ ಸಂಭಾಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

'ನಾಲ್ಕನೇ ಆಯಾಮ', ಪದ್ಮರಾಜ ದಂಡಾವತಿ ಅವರ ಪ್ರಜಾವಾಣಿ ಅಂಕಣ ಬರೆಹಗಳ ಎರಡು ಸಂಪುಟಗಳ ಬಿಡುಗಡೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕವಿ ಚಂದ್ರಶೇಖರ ಕಂಬಾರ, ಪ್ರಜಾವಾಣಿ ಸಂಪಾದಕ ಕೆ.ಎನ್. ಶಾಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಉಪಸ್ಥಿತರಿರುತ್ತಾರೆ. ಜೊತೆಗೆ ಪೂಜ್ಯಾ ಮೋಹನ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವೂ ಇರುತ್ತದೆ. [ಕನ್ನಡ ಪುಸ್ತಕ]

English summary
Chanda Pustaka publication is set to four new kannada books on Jan.26 at Kannada Sahitya Parishat Sabhangana. Padmaraja Davanati's book also releasing on the same day at Nayana Sabhangana, Kannada Bhavana, bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X