ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.12ರಿಂದ ಬೆಂಗಳೂರು ಪುಸ್ತಕೋತ್ಸವ ಸಂಭ್ರಮ

By Mahesh
|
Google Oneindia Kannada News

Bangalore Book Ffestival from Nov.12
ಬೆಂಗಳೂರು, ಅ.26: ಬೆಂಗಳೂರು ಪುಸ್ತಕ ಪ್ರಕಾಶಕರ ಮತ್ತು ಮಾರಾಟಗಾರರ ಸಂಘ ಹಾಗೂ ಕ್ಲಬ್ ಕ್ಲಾಸ್ ಜಂಟಿಯಾಗಿ 'ಬೆಂಗಳೂರು ಪುಸ್ತಕೋತ್ಸವ"ವನ್ನು ನಗರದ ಅರಮನೆ ಮೈದಾನದಲ್ಲಿ ನವೆಂಬರ್ 12ರಿಂದ 21ರವರೆಗೆ ಆಯೋಜಿಸಿವೆ. ಪುಸ್ತಕೋತ್ಸವದ ಎಲ್ಲ ದಿನಗಳಲ್ಲೂ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಗರದ ಅರಮನೆ ಮೈದಾನದಲ್ಲಿ ಸೋಮವಾರ ಸಂಜೆ ನಡೆದ ಪರಿಚಯ ಸಮಾರಂಭದಲ್ಲಿ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು, 'ಬೆಂಗಳೂರು ಪುಸ್ತಕೋತ್ಸವ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇನ್ನೊಂದು ಒಳ್ಳೆಯ ಸಂಗತಿ ಎಂದರೆ ಇಲ್ಲಿ ಕನ್ನಡ ಪುಸ್ತಕಗಳಿಗೂ ಉತ್ತಮ ಬೇಡಿಕೆ ಕಂಡುಬರುತ್ತಿರುವುದು' ಎಂದರು.

'ಟಿವಿಯತ್ತ ಆಕರ್ಷಿತರಾಗುತ್ತಿರುವ ಇಂದಿನ ಯುವ ಪೀಳಿಗೆ, ಪುಸ್ತಕ ಸಂಸ್ಕೃತಿಯನ್ನು ಮರೆಯುತ್ತಿದೆ. ಬೌದ್ಧ ಧರ್ಮ, ಶರಣ ಧರ್ಮದ ನಾಶಕ್ಕೆ ಯತ್ನಿಸಿದ ವಿರೋಧಿಗಳು ಮೊದಲು ಅಮೂಲ್ಯ ಧರ್ಮ ಗ್ರಂಥಗಳನ್ನು ನಾಶ ಮಾಡಲು ಯತ್ನಿಸಿದರು. ಏಕೆಂದರೆ, ಪೀಳಿಗೆಯಿಂದ ಪೀಳಿಗೆಗೆ ಈ ಗ್ರಂಥಗಳು ಜನತೆಯನ್ನು ಕೈಹಿಡಿದು ಮುನ್ನೆಡೆಸುತ್ತವೆ ಎಂಬ ಸತ್ಯ ಧರ್ಮ ವಿರೋಧಿಗಳಿಗೆ ಗೊತ್ತಿತ್ತು. ಇಂಥ ಮಹತ್ವದ ಪುಸ್ತಕಗಳನ್ನು ಸಂರಕ್ಷಿಸಿ, ಪುಸ್ತಕ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ಯುವ ಪೀಳಿಗೆಯ ಕರ್ತವ್ಯ' ಎಂದು ಕವಿ ಎಚ್ ಎಸ್ ವೆಂಕಟೇಶ್ ಮೂರ್ತಿ ಹೇಳಿದರು.

* ಸಾರ್ವಜನಿಕರ ಪ್ರವೇಶ: ಬೆಳಗ್ಗೆ 11 ಗಂಟೆ ಇಂದ ರಾತ್ರಿ 9 ಗಂಟೆ
* ಪ್ರವೇಶ ಶುಲ್ಕ: 20. ರು. ಶಾಲಾ, ಕಾಲೇಜು ವಿದ್ಯಾರ್ಥಿ/ನಿಯರಿಗೆ ಪ್ರವೇಶ ಉಚಿತ.
* ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಸಂಗೀತ, ಪ್ರವಚನಗಳು ಇರುತ್ತವೆ.
* ನವೆಂಬರ್ 12ರಿಂದ 21ರವರೆಗೆ ನಡೆಯುವ ಪುಸ್ತಕ ಮೇಳಕ್ಕೆ ಸುಮಾರು 2 ಲಕ್ಷ ಜನ ಬರುವ ನಿರೀಕ್ಷೆಯಿದೆ.

ಸಮಾರಂಭದಲ್ಲಿ ಪುಸ್ತಕೋತ್ಸವ ಕಾರ್ಯಕ್ರಮದ ನಿರ್ದೇಶಕ ಬಿ.ಎಸ್. ರಘುರಾಮ್, ಬೆಂಗಳೂರು ಪುಸ್ತಕ ಪ್ರಕಾಶಕರ ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಬಲರಾಮ್ ಸಾದ್ವಾನಿ, ಉಪಾಧ್ಯಕ್ಷ ನಿತೀನ್ ಷಾ, ಕಾರ್ಯದರ್ಶಿ ದೇವರು ಭಟ್, ಖಜಾಂಚಿ ಜೆ. ಉಲ್ಲಾಸ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X