• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಷಾರಂಭಕ್ಕೆ ಬೃಹತ್ ಸಂಸ್ಕೃತ ಪುಸ್ತಕ ಮೇಳ

By Mahesh
|

ಬೆಂಗಳೂರು, ಆ.26: ಸಂಸ್ಕೃತ ಭಾಷೆ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ 'ಸಂಸ್ಕೃತ ವಿಶ್ವಪುಸ್ತಕಮೇಳ' ವನ್ನು ಆಯೋಜಿಸಲಾಗಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರಿಗೂ ಸಂಸ್ಕೃತ ಭಾಷೆ ಪರಿಚಯಿಸುವ ಉದ್ದೇಶವನ್ನು ಈ ಮೇಳ ಹೊಂದಿದೆ. ಜನವರಿ 7 ರಿಂದ 10 ರವರೆಗೂ ನಡೆಯುವ ಈ ಪುಸ್ತಕ ಮೇಳಕ್ಕೆ ಎಲ್ಲರಿಗೂ ಮುಕ್ತ ಸ್ವಾಗತ ಕೋರಿರುವ ಬೆಂಗಳೂರಿನ 'ಸಂಸ್ಕೃತ ಭಾರತಿ' ಸಂಸ್ಥೆ, ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ನಿರೀಕ್ಷಿಸುತ್ತಿದೆ.

ಸಂಸ್ಕೃತ ಪುಸ್ತಕ ಮೇಳದ ಮುಖ್ಯಾಂಶಗಳು:

* ಸುಮಾರು 10,000ಕ್ಕೂ ಹೆಚ್ಚು ಸಂಸ್ಕೃತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ.

* ಸುಮಾರು 14 ದೇಶಗಳ 150 ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಲಿದ್ದಾರೆ.

* ಸುಮಾರು 500ಕ್ಕೂ ಹೆಚ್ಚು ಹೊಸ ಪ್ರಕಟನೆಗಳನ್ನು ಹೊರತರಲಾಗುವುದು.

* ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಪುಸ್ತಕ ಮೇಳ ಉದ್ಘಾಟನೆ

* ಸುಮಾರು 290ಕ್ಕೂ ಅಧಿಕ ಸಂಸ್ಕೃತ ವಿಶ್ವವಿದ್ಯಾಲಯಗಳು ಪಾಲ್ಗೊಳ್ಳಲಿವೆ.

* ಗ್ರಾಹಕರು ಹಳೆಪುಸ್ತಕವನ್ನು ಕೊಟ್ಟು ಹೊಸ ಪುಸ್ತಕವನ್ನು ಪಡೆಯಬಹುದು. ವಿನಿಮಯ ಸಂಸ್ಕೃತಿಗೆ ಒತ್ತು.

*ಪುಸ್ತಕ ಪ್ರದರ್ಶನ, ವಿಮರ್ಶೆ, ಕಲೆ ಸಂಸ್ಕೃತಿ ಪರಂಪರೆ ವಸ್ತು ಪ್ರದರ್ಶನ, ಸಮ್ಮೇಳನಗಳು, ಕಾರ್ಯಾಗಾರಗಳು ಇರುತ್ತವೆ.

* ಖ್ಯಾತ ಕಲಾವಿದರಿಂದ ಸಂಸ್ಕೃತ ಗೀತೆಗಳ ಗಾಯನ.ನಾಟಕೋತ್ಸವ ಏರ್ಪಡಿಸಲಾಗಿದೆ.

* 2010 ರ ನವೆಂಬರ್, ಡಿಸೆಂಬರ್ ಗಳಲ್ಲಿ1008 ತರಗತಿಗಳನ್ನು ಆಯೋಜಿಲಾಗಿದೆ.

ಆಯೋಜಕರು: ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್, ಕರ್ನಾಟಕ ರಾಜ್ಯ ಸರ್ಕಾರ, ಸಂಸ್ಕೃತ ವಿಶ್ವವಿದ್ಯಾಲಯಗಳು, ಸಂಸ್ಕೃತ ಅಕಾಡೆಮಿಗಳು, ಸಂಸ್ಖೃತ ಭಾರತಿ, ಓರಿಯೆಂಟಲ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ಸ್, ನ್ಯಾಷನಲ್ ಮ್ಯಾನುಸ್ಕ್ರಿಪ್ಟ್ ಮಿಷನ್, ಅಖಿಲ ಭಾರತೀಯ ಸಂಸ್ಕೃತ್ ಪ್ರಕಾಶಕ್ ಸಂಘ್, ಸಂಸ್ಕೃತ್ ಪ್ರಮೋಷನ್ ಫೌಂಡೇಷನ್.

ರಾಷ್ಟ್ರೀಯ ಸಲಹಾ ಸಮಿತಿ: ಜಸ್ಟೀಸ್ ಎಂಎನ್ ವೆಂಕಟಾಚಲಯ್ಯ, ಜಸ್ಟೀಸ್ ಆರ್ ಸಿ ಲಹೋಟಿ, ಜಸ್ಟೀಸ್ ಎಂ ರಾಮಾಜೋಯಿಸ್, ಮಾಜಿ ಚುನಾವಣಾ ಆಯುಕ್ತ ಎನ್ ಗೋಪಾಲಸ್ವಾಮಿ ಮುಂತಾದವರಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಸಂಸ್ಕೃತ ಭಾರತಿ

'ಅಕ್ಷರಂ', 8 ನೇ ಅಡ್ಡರಸ್ತೆ, 2 ನೇ ಹಂತ

ಗಿರಿನಗರ, ಬೆಂಗಳೂರು-85

ದೂರವಾಣಿ: +91-80-2672 1052/2672 2576

ಈ ಮೇಲ್: admin@samskritbookfair.org / samskritam@gmail.com

ವೆಬ್ ತಾಣ:www.samskritbookfair.org

English summary
More than 10,000 Sanskrit Scholars from across the world and over 150 publishers from 14 countries will participate in the World Sanskrit Book Fair to be held here from January 7 to 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X