ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ನೆರಳು ಅಂಕಣ ಬರಹಗಳ ಲೋಕಾರ್ಪಣೆ

By Mahesh
|
Google Oneindia Kannada News

Radhakrishna S Bhadti book release
ಬೆಂಗಳೂರು, ಏ.7: ವಿಜಯಕರ್ನಾಟಕ ದಿನಪತ್ರಿಕೆಯ ಜನಪ್ರಿಯ ಅಂಕಣಗಳಲ್ಲಿ ಒಂದಾದ 'ನೀರು ನೆರಳು' ಈಗ ಪುಸ್ತಕ ರೂಪದಲ್ಲಿ ಹೊರ ಬರಲಿದೆ. ಒಂದಲ್ಲ, ಎರಡಲ್ಲ, ಐದು ಪುಸ್ತಕಗಳನ್ನು ಒಮ್ಮೆಗೆ ಓದುಗರಿಗೆ ನೀಡಲು ಲೇಖಕ ರಾಧಾಕೃಷ್ಣ ಎಸ್ ಭಡ್ತಿ ಸಜ್ಜಾಗಿದ್ದಾರೆ.

ನೀರು ನೆರಳು ಅಂಕಣದ ಮೂಲಕ ಜನರಿಗೆ ನೀರಿನ ಬಳಕೆ, ಉಳಿಕೆ ಬಗ್ಗೆ ಎಚ್ಚರಿಕೆಯ ಮಾತುಗಳು, ಅಂತರ್ಜಲ ಉಳಿಸಿ, ಮಳೆ ಕೊಯ್ಲು ಬಳಸಿ ಪರಿಸರ ರಕ್ಷಿಸುತ್ತಿರುವ ಪರಿಸರ ಸ್ನೇಹಿಗಳ ಸಾಧನೆಯ ಪರಿಚಯ, ನೀರಿನ ಪಸೆಯನ್ನೂ ಕಾಣದ ಬೆಂಗಾಡಿನಲ್ಲಿ ಜೀವಿಸುವ ಜನರ ನೋವಿನ ಗಾಥೆ ಸೇರಿದಂತೆ ಹತ್ತು ಹಲವು ದೃಷ್ಟಾಂತಗಳ ಮೂಲಕ ನೀರಿನ ಮಹತ್ವದ ಅರಿವು ಮೂಡಿಸುವ ಕಾಯಕದಲ್ಲಿ ಪತ್ರಕರ್ತ, ಲೇಖಕ ರಾಧಾಕೃಷ್ಣ ಭಡ್ತಿ ನಿರತರಾಗಿದ್ದಾರೆ.

ಭಡ್ತಿ ಅವರ 'ನೀರು ನೆರಳು' ಅಂಕಣದ ಆಯ್ದ ಬರಹಗಳು 'ಮೇಘ ಮೇದಿನಿ', 'ಅಮೃತಧಾರೆ','ನೀರಸಾಧಕರು', 'ಪಾರಂಜವ್ಯ' ಹಾಗೂ 'ಬಿಂದು-ಸಿಂಧು' ಪುಸ್ತಕವಾಗಿ ಹೊರ ಹೊಮ್ಮಿದೆ. 'ನೀರ ಮಾತುಗಳಲ್ಲಿ ಮೀಯೋಣ ಬನ್ನಿ' ಎಂದು ಆಹ್ವಾನವಿತ್ತಿದ್ದಾರೆ. ತಪ್ಪದೇ ಬನ್ನಿ.

ಕಾರ್ಯಕ್ರಮದ ವಿವರಗಳು:
ಬಿಡುಗಡೆಯಾಗಲಿರುವ ಪುಸ್ತಕಗಳು: 'ಮೇಘ ಮೇದಿನಿ', 'ಅಮೃತಧಾರೆ','ನೀರಸಾಧಕರು', 'ಪಾರಂಜವ್ಯ' ಹಾಗೂ 'ಬಿಂದು-ಸಿಂಧು'.
ಪ್ರಕಾಶಕರು: ಎಂ.ಎ.ಸುಬ್ರಮಣ್ಯ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.
ದಿನಾಂಕ/ದಿನ: ಏ.11, ಭಾನುವಾರ.
ಸಮಯ: ಬೆಳಗ್ಗೆ 11ಕ್ಕೆ

ಪುಸ್ತಕ ಲೋಕಾರ್ಪಣೆ, ದಿವ್ಯ ಸಾನಿಧ್ಯ: ರಾಘವೇಶ್ವರಭಾರತೀ ಸ್ವಾಮೀಜಿ, ಶ್ರೀರಾಮಚಂದ್ರಾಪುರ ಮಠ.
ಉಪಸ್ಥಿತರು:ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರು.
ವಿಶ್ವೇಶ್ವರ ಭಟ್, ಸಂಪಾದಕರು, ವಿಜಯಕರ್ನಾಟಕ
ಟಿಎನ್ ಸೀತಾರಾಂ, ನಿರ್ದೇಶಕರು.
ಶ್ರೀಪಡ್ರೆ, ಹಿರಿಯ ಪತ್ರಕರ್ತರು.
ಹಾಲ್ದೊಡ್ಡೇರಿ ಸುಧೀಂದ್ರ, ವಿಜ್ಞಾನಿ,

ಸ್ಥಳ:
ಕುವೆಂಪು ಕಲಾಕ್ಷೇತ್ರ, ಕಿಮ್ಸ್ ಆಸ್ಪತ್ರೆ ಹಿಂಭಾಗ, ಕೆ.ಆರ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು.

ಸಂಪರ್ಕಿಸಿ:
ಆರ್ ಶಿವಕುಮಾರ್: 99867 16348
ಹರೀಶ್ ಕೇರ: 99801 89849
ಯಶೋಧರ ಕೋಟ್ಯಾನ್: 93433 82510
ಎಸ್ ಆರ್ ಹರೀಶ್ ಕುಮಾರ್ : 98454 87315

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X