ಇಟಗಿ ಈರಣ್ಣನವರ ಕನ್ನಡ ಶಾಯಿರಿಗಳು
ಕೃತಿಯಲ್ಲಿ ಬದುಕಿನ ವಿವಿಧ ಮಜಲುಗಳನ್ನು ನೇವರಿಸುತ್ತಾ, ಮನುಷ್ಯ ಸ್ವಭಾವಗಳಿಗೆ ಕಚಗುಳಿಗೆಗಳನ್ನು ಕೊಡುವ 180 ಶಾಯಿರಿಗಳಿವೆ. ಆಯ್ದ ಕೆಲವು ಶಾಯಿರಿಗಳು ನಿಮ್ಮ ಸ್ಯಾಂಪಲ್ ಓದಿಗೆ. ಕನ್ನಡ ಶಾಯಿರಿಗಳ ಬಗ್ಗೆ ಪ್ರಜಾವಾಣಿಯಲ್ಲಿ ಬರೆಯುತ್ತಾ ಕ ವೆಂ ರಾಜಗೋಪಾಲ್ ಅವರು ಹೇಳುತ್ತಾರೆ : "ಸಾಮಾನ್ಯರಿಗೂ ಅಸಾಮಾನ್ಯರಿಗೂ 'ಮಜಾ'
*
ಈ
ಕತ್ತಲ
ರಾತ್ರಿ
ನಿನ್ನ
ದಾರಿ
ಕಾದೂ
ಕಾದೂ
ನನ್ನೆದಿ
ಒಂದs
ಅಳತಿ
ಸುಡಾಕ
ಹತ್ತೇತಿ|
ಕತ್ತಲಾಗೇತೆಂತ
ಹೆದರಿ
ಕುಂದರಬ್ಯಾಡ
ನನ್ನ
ಸುಡೂ
ಎದಿ
ನಿನ್ನ
ದಾರ್ಯಾಗ
ಬೆಳಕು
ಚೆಲ್ಲೇತಿ||
*
ನನಗನಸತೈತಿ
ಈ
ಹರಿಯೂ
ಬೆಳದಿಂಗಳಾ
ಹೆಪ್ಪಾಗಿ
ನಿನ್
ಮೈ
ಆಗಿರಬೇಕು
|
ಇಲ್ಲಾಂದ್ರ
ನನ್ನ
ಬಿಸಿ
ನಿನ್ನ
ಮೈಗೆ
ತಾಗಿ
ಅದು
ಕರಗಿ
ಈ
ಬೆಳದಿಂಗಳಾಗಿ
ಹರಡಿರಬೇಕು
||
*
ಮುಚ್ಚಿದ
ತುಟಿ
ನೀ
ಬಿಚ್ಚಿ
ನಕ್ಕೆಂದ್ರ
ಹುಣವಿ
ಬೆಳದಿಂಗಳು
ಹರಿತೈತಿ
|
ಕಟ್ಟಿದ
ಮುಡಿ
ನೀ
ಬಿಚ್ಚಿ
ಸವರಿದೆಂದ್ರ
ಅಮಾಸಿ
ಕತ್ತಲು
ಕವೀತೈತಿ
||
*
ಮಾತಾಡುವಾಗ
ಮುತ್ತು
ಕೊಡೋಕೆ
ಬರಾಂಗಿಲ್ಲ
ಮುತ್ತು
ಕೊಡುವಾಗ
ಮಾತಾಡಾಕ
ಬರಾಂಗಿಲ್ಲ
|
ಮುತ್ತಿನಂತಾ
ಪ್ರೀತಿ
ಮಾತಿನ್ಯಾಕಿ
ಆಕಿ
ಬೇರೆ
ಮಾತಿನ್ಯಾಗ
ಮುತ್ತು
ಕೊಡತಾಳಲ್ಲ
||
*
ಬಡ್ಡಿ
ತಗೊಂಡು
ಸಾಲಾ
ಕೊಡಾಕ
ಇದೇನೂ
ಬ್ಯಾಂಕ್
ಅಲ್ಲಾ
|
ದುಡ್ಡು
ತಗೊಂಡು
ಪ್ರೀತಿ
ಕೊಡಾಕ
ನಾನೇನೂ
ಸೂಳಿ
ಅಲ್ಲಾ
||
*
ಎಷ್ಟು
ದಿನ
ಕಾದಿದ್ವಿ
ಈ
ರಾತ್ರಿಗೆ
|
ಮಾತ್
ಮಾತಿನ್ಯಾಗ
ಮುಗಿತಿ
ರಾತ್ರಿ
ಏನನ್ನಬೇಕು
ಈ
ನಮ್ಮ
ಮಾತಿಗೆ
||
*
ಕನ್ನಡದೊಳಗ
'ಶಾಯಿರಿ'
ನಂತೂ
ಯಾರೂ
ಬರೆದಿಲ್ಲ
ಇವತ್ತಿನ
ತನಕ
|
ನನಗಂತೂ
ಬರೀಬೇಕನಸತೈತಿ
ನಾನಂತೂ
ಸಾಯೋತನಕ
||