ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಂದ ಮುಖಪುಟ ವಿನ್ಯಾಸ ಸ್ಪರ್ಧೆ

By Staff
|
Google Oneindia Kannada News

Would you like to become cover page star?
ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದ ಪುಸ್ತಕವು ಛಂದ ಮುಖಪುಟ ವಿನ್ಯಾಸ' ಸ್ಪರ್ಧೆ ಏರ್ಪಡಿಸಿದೆ. ಅಂದದ ಮುಖಪುಟ ವಿನ್ಯಾಸ ರಚಿಸಿ ಪುಸ್ತಕದ ಅಂದ ಮತ್ತಷ್ಟು ಹೆಚ್ಚಿಸಲು ಯುವ ಕಲಾಕಾರರಿಗೆ ಆಹ್ವಾನ ನೀಡಿದೆ.

ಛಂದ ಪುಸ್ತಕ ಪ್ರಕಟಿಸಲಿರುವ ಯುವಕವಿ ರಾಧೇಶ ತೋಳ್ಪಾಡಿಯವರ ಹಲೋ ಹಲೋ ಚಂದಮಾಮ' ಮಕ್ಕಳ ಕವಿತೆಗಳ ಸಂಕಲನಕ್ಕೆ ನೀವು ಮುಖಪುಟ ರಚಿಸಬಹುದು. ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ 5000 ರೂ ಬಹುಮಾನ ನೀಡಲಾಗುವುದು. ಈ ಬಾರಿಯ 'ಕವರ್ ಸ್ಟಾರ್' ಆಗಬೇಕೆಂಬ ಹಂಬಲವಿದ್ದರೆ ನಿಮ್ಮ ಕಲಾನೈಪುಣ್ಯತೆಗೆ ಸ್ವಲ್ಪ ಕೆಲಸ ಕೊಡಿ.

ಪುಸ್ತಕದಲ್ಲಿರುವ ಒಂದೆರಡು ಕವಿತೆಗಳನ್ನು ಓದಲು http://raghuapara.blogspot.com ಅಥವಾ http://avadhi.wordpress.com ಬ್ಲಾಗಿಗೆ ಭೇಟಿ ಕೊಡಿ. ವಿನ್ಯಾಸದ ಅಳತೆ: ಎತ್ತರ 19 ಸೆಂ.ಮೀ., ಅಗಲ 11.5 ಸೆಂ.ಮೀ. ಒಬ್ಬರು ಎಷ್ಟು ಬೇಕಾದರೂ ವಿನ್ಯಾಸಗಳನ್ನು ಕಳಿಸಬಹುದು.

ನಿಮ್ಮ ವಿನ್ಯಾಸಗಳನ್ನು [email protected]ಗೆ ಇ ಮೇಲ್ ಮಾಡಿ.
ಕಡೆಯ ದಿನಾಂಕ: ಡಿಸೆಂಬರ್ 31, 2009.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 98444 22782

ಛಂದಪುಸ್ತಕದ ಪರವಾಗಿ:

ವಸುಧೇಂದ್ರ
ಐ-004, ಮಂತ್ರಿ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ
ಬೆಂಗಳೂರು - 560 076

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X