ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಕ್ಷೇತ್ರದಲ್ಲಿ ಆಶೀಶ್ ನಂದಿ ಉಪನ್ಯಾಸ

By Staff
|
Google Oneindia Kannada News

KV Subbanna
ಕೆ.ವಿ. ಸುಬ್ಬಣ್ಣ ಅವರ ಆಯ್ದ ಪ್ರಬಂಧಗಳ ಇಂಗಿಷ್ ಅನುವಾದ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಪ್ರಬಂಧ ಸಂಕಲನ ಇದೇ ಭಾನುವಾರ 26ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಆಗುತ್ತಿದೆ. ಸಮಯ ಬೆಳಗ್ಗೆ 9.30. ಸುಬ್ಬಣ್ಣ ಅವರ ಬರಹಗಳ ಅಭಿಮಾನಿಗಳು ಮತ್ತು ಪುಸ್ತಕಲೋಕದ ಪ್ರಿಯರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ದೇಶಕಾಲ ಮಾಸಿಕ ಪತ್ರಿಕೆಯ ಸಂಪಾದಕ ವಿವೇಕ್ ಶಾನ್ ಭಾಗ್ ಕೋರಿದ್ದಾರೆ. ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ-577 417.

ಪುಸ್ತಕ ಬಿಡುಗಡೆ: ಯು. ಆರ್. ಅನಂತಮೂರ್ತಿ; ಕೃತಿ ಕುರಿತು ಮಾತು: ರಾಮಚಂದ್ರ ಗುಹ; ಮತ್ತು ವಿಶೇಷ ಉಪನ್ಯಾಸ: ಅಶೀಶ್ ನಂದಿ ("The Untamed language of dissent") ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅಕ್ಷರ ಪ್ರಕಾಶನದ ಇತರ ಪ್ರಕಟಣೆಗಳ ಬಗೆಗೆ ಓದುಗರು ಬರೆಯಬಹುದು [email protected]

ಹಾಡುಗಾರಿಕೆ: ಮುಂಜಾನೆ ಬೆನಕ ನಾಟಕ ತಂಡದಿಂದ ಪು ತಿ ನರಸಿಂಹಾಚಾರ್ ವಿರಚಿತ 'ಗೋಕುಲ ನಿರ್ಗಮನ'ದೃಶ್ಯ ಕಾವ್ಯದ ಆಯ್ದ ಗೀತೆಗಳ ಗಾಯನವಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X