ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಲಕ್ಷ್ಮಿ ಕಥಾಸಂಕಲನ 'ಒಂದು ಮುಷ್ಟಿ ನಕ್ಷತ್ರ'

By Staff
|
Google Oneindia Kannada News

ಕನ್ನಡದಲ್ಲಿ ಮಹಿಳಾ ಸಾರಸ್ವತ ಲೋಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಬರಹಗಾರ್ತಿ ಕೋಡಿಬೆಟ್ಟು ರಾಜಲಕ್ಷ್ಮಿ. ಮನಮುಟ್ಟುವ ಕವಿತೆಗಳೊಂದಿಗೆ ಭಾವಜೀವಿಗಳ ಮನತಟ್ಟುತ್ತಿರುವ ರಾಜಲಕ್ಷ್ಮಿ ಮಲೆನಾಡಿನ ಸೊಗಡಿನ ಕಥಾಕಣಜದೊಂದಿಗೆ ಕಲ್ಪನಾಲೋಕದಲ್ಲೂ ಅಕ್ಷರ ಬೀಜ ಬಿತ್ತುತ್ತಿದ್ದಾರೆ.

ಕೋಡಿಬೆಟ್ಟು ರಾಜಲಕ್ಷ್ಮಿ ಅವರ 'ಒಂದು ಮುಷ್ಟಿ ನಕ್ಷತ್ರ' ಎಂಬ ಕಥಾ ಸಂಕಲನ ಇದೇ ಭಾನುವಾರ ಮೇ 3ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗುತ್ತಲಿದೆ. ಇದರೊಂದಿಗೆ, ಸಿದ್ದು ದೇವರಮನಿ ಅವರ 'ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ' ಕವನ ಸಂಕಲನ ಬಿಡುಗಡೆ ಭಾಗ್ಯ ಕಾಣುತ್ತಿದೆ.

ಯುವ ಸಾಹಿತಿಗಳೇ ಸೇರಿಕೊಂಡು ಹುಟ್ಟುಹಾಕಿರುವ 'ರಸಿಕಾ ಕೇಳೊ' ನಡೆಸುತ್ತಿರುವ ಹೊಸ ಸಾಹಿತ್ಯದ ಗೋಚಾರಫಲ ಹೇಗಿದೆಯೆಂದು ತಿಳಿದುಕೊಳ್ಳಲು ಪುಸ್ತಕಪ್ರೇಮಿಗಳ ಸಂತೆ ನೆರೆಯಲಿದೆ.

ಮಾತಿನ ಮಂಟಪದಲ್ಲಿ ಡಾ.ಚಂದ್ರಶೇಖರ ಕಂಬಾರ, ಎಸ್.ದಿವಾಕರ್, ಅಬ್ದುಲ್ ರಶೀದ್, ಕೇಶವ ಮಳಗಿ, ಲಲತಿ ಸಿದ್ಧಬಸವಯ್ಯ ಮೊದಲಾದವರು ಭಾಗವಹಿಸಲಿದ್ದಾರೆ.

ಮತ್ತೊಮ್ಮೆ ಗಮನಿಸಿ

ಬಿಡುಗಡೆಯಾಗುತ್ತಿರುವ ಪುಸ್ತಕಗಳು : 'ಒಂದು ಮುಷ್ಟಿ ನಕ್ಷತ್ರ' ಮತ್ತು 'ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ'
ದಿನಾಂಕ ಮತ್ತು ಸಮಯ : ಮೇ 3, ಭಾನುವಾರ ; ಬೆಳಿಗ್ಗೆ 10 ಗಂಟೆಗೆ
ಸ್ಥಳ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.

ಮೇ 1ರಂದು ಕಾದಂಬರಿಕಾರ ಶ್ರೀನಿವಾಸ ವೈದ್ಯರ ಸಾಹಿತ್ಯ ಸಂಭ್ರಮಮೇ 1ರಂದು ಕಾದಂಬರಿಕಾರ ಶ್ರೀನಿವಾಸ ವೈದ್ಯರ ಸಾಹಿತ್ಯ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X