ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷೆ ವೈಜ್ಞಾನಿಕವಾಗಿ ಬೆಳೆಯಬೇಕು: ಚಿದಾನಂದ ಮೂರ್ತಿ

By Staff
|
Google Oneindia Kannada News


ಬೆಂಗಳೂರು, ಜ.14: ಮಕ್ಕಳ ಹೃದ್ರೋಗತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರ ಅಂಕಣ ಬರಹಗಳ 'ಜೀವನಧಾರೆ" ಪುಸ್ತಕ ಭಾನುವಾರ ಲೋಕಾರ್ಪಣೆಯಾಯಿತು. ವೈದ್ಯರು, ಎಂಜಿನಿಯರ್, ವಿಜ್ಞಾನಿಗಳು ಹಾಗೂ ತಂತ್ರಜ್ಞರು ಕನ್ನಡದಲ್ಲಿ ಬರೆದರೆ ಮಾತ್ರ ಕನ್ನಡ ಭಾಷೆ ಶ್ರೀಮಂತವಾಗಲು ಸಾಧ್ಯ ಎಂದು ಪುಸ್ತಕ ಬಿಡುಗಡೆ ಮಾಡಿದ ದೇಜಗೌ ಈ ಸಂದರ್ಭದಲ್ಲಿ ಹೇಳಿದರು.

ದೇಜಗೌ ಮಾತನಾಡುತ್ತಾ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕನ್ನಡಿಗರು ತಮ್ಮ ಅನುಭವಗಳನ್ನು ಕನ್ನಡದಲ್ಲಿ ಬರೆದಾಗ ಜನಸಾಮಾನ್ಯರ ಲೋಕಾನುಭವ ಅಧಿಕವಾಗುತ್ತದೆ. ಕನ್ನಡ ಸಾಹಿತ್ಯ ಅಂದರೆ ಕೇವಲ ಸಾಹಿತಿಗಳು ಬರೆದದ್ದು ಎಂಬ ತಪ್ಪು ಅಭಿಪ್ರಾಯ ನಿವಾರಣೆಯಾಗಬೇಕು ಎಂದರು.

ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹೆಚ್ಚಾಗಿಯೇ ಇದ್ದರೂ, ಭಾಷೆಯ ಶ್ರೀಮಂತಿಕೆ ತಿಳಿಯುವುದು ಅದರಲ್ಲಿ ವೈವಿಧ್ಯತೆ ಇದ್ದಾಗ ಮಾತ್ರ. ಭಾಷೆ ವೈಜ್ಞಾನಿಕವಾಗಿ ಬೆಳದರಷ್ಟೇ ಮುಂದಿನ ಜನಾಂಗಕ್ಕೆ ಉಳಿಯಲು ಸಾಧ್ಯ ಎಂದು ಸಂಶೋಧಕ ಎಂ. ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟರು.

ವಾಚಕರ ವಾಣಿಗೆ ಪತ್ರಗಳನ್ನು ಬರಿಯುವ ಮೂಲಕ ನಮ್ಮಲ್ಲಿನ ಕೆಲವು ಬರಹಗಾರರು ಹುಟ್ಟಿಕೊಳ್ಳುತ್ತಾರೆ. ವಿಜಯಲಕ್ಷ್ಮಿ ಬಾಳೆಕುಂದ್ರಿ ಸಹಾ ಹಾಗೇ ಪತ್ರ ಬರೆಯುತ್ತಿದ್ದರು. ಅವರ ಪತ್ರಗಳನ್ನು ನೋಡಿ ಕುತೂಹ ಮೂಡಿತು. ಅವರನ್ನು ಸಂಪರ್ಕಿಸಿ ಅಂಕಣ ಬರೆಯಲು ತಿಳಿಸಿದೆ. ಈಗ ಅವರ ಅಂಕಣ ಬರಹಗಳು ಪುಸ್ತಕ ರೂಪದಲ್ಲಿ ಬರುತ್ತಿರುವುದು ಸಂತಸದ ವಿಷಯ ಎಂದು ದಿ ಪ್ರಿಂಟರ್ಸ್ ಸಂಸ್ಥೆಯ ನಿರ್ದೇಶಕ ಕೆ.ಎನ್. ಶಾಂತಕುಮಾರ್ ತಿಳಿಸಿದರು.

ಪತ್ರಕರ್ತರು ಹಾಗೂ ವೈದ್ಯರಿಗೆ ಕೆಲಸದ ಸಮಯ ಅನ್ನುವುದೇ ಇರುವುದಿಲ್ಲ. ಅವರು ಮನೆಗೆ ಬಂದು ವಿಶ್ರಾಂತಿ ಪಡೆಯುವ ವೇಳೆಗೆ ಕೆಲಸಕ್ಕೆ ಕರೆ ಬರಬಹುದು. ಇಂತಹ ಒತ್ತಡದ ಪತಿಸ್ಥಿತಿಯಲ್ಲೂ ವಿಜಯಲಕ್ಷ್ಮಿ ಅವರು ಹೃದಯ ತಟ್ಟುವಂತೆ ಬರೆಯುತ್ತಾರೆ ಎಂದು ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಡಾ. ಸಿದ್ಧಲಿಂಗಯ್ಯ ಮುಂತಾದವರು ಭಾಗವಹಿಸಿದ್ದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X