ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಜಪ್ಪನವರ ಕನ್ನಡದಲ್ಲಿ ಕಾನೂನು ಪುಸ್ತಕಗಳು

By Staff
|
Google Oneindia Kannada News

writer cn manjappaಆಡಳಿತ ವಿಧಾನ ನಿರೂಪಿಸುವ ಕನ್ನಡ ಪಠ್ಯಪುಸ್ತಕಗಳೆಲ್ಲಿವೆ? ವೈದ್ಯಕೀಯ, ತಾಂತ್ರಿಕ ಶಿಕ್ಷಣ ಹಾಗಿರಲಿ, ಕಾನೂನು ಶಿಕ್ಷಣಕ್ಕೂ ಸಹ ಉತ್ತಮ ಪಠ್ಯಪುಸ್ತಗಳು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಮಾನ್ಯ ಮಂಜಪ್ಪನವರ ಕಾನೂನು ಕುರಿತಾದ ಕೆಲವು ಕನ್ನಡಪುಸ್ತಕಗಳು ಶ್ಲಾಘನೀಯವೆನ್ನಿಸಿಕೊಳ್ಳುತ್ತವೆ.

*ದತ್ತಾತ್ರಿ ಎಚ್. ಎಂ. ಬೆಂಗಳೂರು,

ಆಡಳಿತದಲ್ಲಿ ಕನ್ನಡ! ಹೌದು, ಮಹಾಜನ್ ವರದಿ ಜಾರಿಗೆ 'ಆಗ್ರಹ'ದಂತೆ ಈ ಕೂಗು ಸಹ ಬಹಳ ಕಾಲದಿಂದಲೂ ಕೇಳಿಬರುತ್ತಿದೆ. ಆದರೆ ಅದಕ್ಕೆ ಬೇಕಾದ ಭಾವನಾತ್ಮಕ ಮತ್ತು ಭಾಷೆಯ ಸಲಕರಣೆಗಳನ್ನು ಸಿದ್ಧಮಾಡುವುದಕ್ಕೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೇ, ಕ್ರೆಡಿಟ್ ಕಾರ್ಡ್ ವಹಿವಾಟುಗಳೂ ಕನ್ನಡದಲ್ಲೇ ಆಗಬೇಕು ಎಂದು ಒತ್ತಾಯಿಸುವವರೂ ನಾವೇ. ಇದು ನಮ್ಮ ಸಮಾಜದ ವಿಪರ್ಯಾಸ. ಇಂಗ್ಲಿಷಿನ ಬುನಾದಿಯ ಮೇಲೆ ಕನ್ನಡದರಮನೆ ಕಟ್ಟಲು ಯಾವತ್ತಾದರೂ ಸಾಧ್ಯವೇ? ಕನ್ನಡ ಕಲಿಕೆಯೇ ಇಲ್ಲದೆ ಮೇಲೆ ಕನ್ನಡದಲ್ಲೇ ಆಡಳಿತ ನಡೆಯುವುದಾದರೂ ಹೇಗೆ?

ಪ್ರಾಥಮಿಕ ಹಂತವೊಂದೇ ಅಲ್ಲ. ಉನ್ನತ ಶಿಕ್ಷಣಕ್ಕೂ ಕನ್ನಡವನ್ನೇ ಬಳಸಬೇಕು. ಎಲ್ಲಾ ಐಎಎಸ್ ಐಪಿಎಸ್ ಎಫ್ ಎಸ್ ಅಧಿಕಾರಿಗಳು ಮೊದಲು ಕನ್ನಡ ಕಲಿಯಬೇಕು. ಅವರು ಕಲಿತರೆ ಕಚೇರಿಯಲ್ಲಿ ಅವರ ಕೆಳಗಿನ ನೌಕರರೂ ಕಡ್ಡಾಯವಾಗಿ ಕಲಿಯಬೇಕಾಗತ್ತೆ. ಆಗ ರಾಜ್ಯಾಡಳಿತದಲ್ಲಿ ಕನ್ನಡಬಂದೀತು. ಆದರೆ ಆಡಳಿತ ವಿಧಾನ ನಿರೂಪಿಸುವ ಕನ್ನಡ ಪಠ್ಯಪುಸ್ತಕಗಳೆಲ್ಲಿವೆ? ವೈದ್ಯಕೀಯ, ತಾಂತ್ರಿಕ ಶಿಕ್ಷಣ ಹಾಗಿರಲಿ, ಕಾನೂನು ಶಿಕ್ಷಣಕ್ಕೂ ಸಹ ಉತ್ತಮ ಪಠ್ಯಪುಸ್ತಗಳು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಮಾನ್ಯ ಮಂಜಪ್ಪನವರ ಕಾನೂನು ಕುರಿತಾದ ಕೆಲವು ಕನ್ನಡಪುಸ್ತಕಗಳು ಶ್ಲಾಘನೀಯವೆನ್ನಿಸಿಕೊಳ್ಳುತ್ತವೆ.

ಸಿ.ಎನ್. ಮಂಜಪ್ಪನವರು ತಮ್ಮ ಎಲ್.ಎಲ್.ಎಂ.ಪದವಿಯ ನಂತರ 15 ವರ್ಷಗಳಿಂದ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಆಳವಾದ ಅಧ್ಯಯನ, ಚಿಂತನೆಗಳನ್ನು ಮೈಗೂಡಿಸಿಕೊಂಡು ಸದಾ ಚಟುವಟಿಕೆಯಲ್ಲಿರುವ ಇವರು ಕಾನೂನು ಶಿಕ್ಷಣ ಹೇಗಿರಬೇಕು, ಜನಸಾಮಾನ್ಯರಿಗೆ ಕಾನೂನು ತಿಳುವಳಿಕೆ ಉಂಟಾಗಲು ಏನೇನು ಮಾಡಬಹುದು ಎಂಬುದರ ಬಗ್ಗೆ ಪ್ರಯೋಗಾತ್ಮಕ ಯೋಜನೆ ರೂಪಿಸಿದ್ದಾರೆ.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿವಿಧ ಪಂಚಾಯತಿಗಳು, ಕರ್ನಾಟಕ ಪಂಚಾಯತ್ ಕಾಯ್ದೆ 1993ರ ಅಡಿಯಲ್ಲಿ ಹೇಗೆ ಕಾರ್ಯನಿರ್ವಹಿಸಬೇಕೆಂದು ಸರಳ ಶೈಲಿಯಲ್ಲಿ ಪುಸ್ತಕ ರಚಿಸಿದ್ದಾರೆ. ಈ ಪುಸ್ತಕವನ್ನು ಕಾನೂನು ಸೇವಾ ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಪ್ರಕಟಿಸಿವೆ. ಆಸಕ್ತರು ಈ ಪುಸ್ತಕಗಳನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡು ಬಳಸತೊಡಗಿದರೆ ಕ್ರಮೇಣ ಕನ್ನಡ ಪ್ರೀತಿ ಮತ್ತು ಕಾನೂನು ಪ್ರಜ್ಞೆ ಜೀವನದಲ್ಲಿ ಹಾಸುಹೊಕ್ಕುತ್ತದೆ.

ಮಂಜಪ್ಪನವರ ಇತರ ಪುಸ್ತಕಗಳ ಪರಿಚಯ:

ಮಾಹಿತಿ ಹಕ್ಕು ಅಧಿನಿಯಮ 2005 - ಟೀಕೆ, ಟಿಪ್ಪಣಿ
(Right to Information Act 2005: Comments- along with all related circulars)
ಪ್ರಕಾಶಕರು: ಸಿರಿ ಸವಿ ಕಾನೂನು ಪುಸ್ತಕ ಪ್ರಕಾಶನ (ದೂರವಾಣಿ:98451 89212)
ಪುಟ: 320 ಬೆಲೆ: ರೂ. 225

ಪಂಚಾಯತ್ ರಾಜ್ ಕೈಪಿಡಿ (ಕಾನೂನು, ನಿಯಮ, ಟಿಪ್ಪಣಿ, ಪ್ರಶ್ನೋತ್ತರ)
(Panchaayat Raaj - Act, Rules, Comments and FAQs)
ಪ್ರಕಾಶಕರು: ಕರ್ನಾಟಕ ಪಂಚಾಯತ್ ಪರಿಷತ್, ಶೇಷಾದ್ರಿಪುರಂ, ಬೆಂಗಳೂರು
ಪುಟ: 192 ಬೆಲೆ: ರೂ. 100

ಕಂಪನಿ ಕಾನೂನು (Companies Act 1956)
ಸಹ ಲೇಖನ: ಎಂ ಎನ್ ಭೀಮೇಶ್, ಉಪನ್ಯಾಸಕರು, ಜೆ ಎಸ್ ಎಸ್ ಕಾನೂನು ಕಾಲೇಜು, ಮೈಸೂರು
ಪ್ರಕಾಶಕರು: ಪ್ರಭೋಧ ಪಬ್ಲಿಕೇಶನ್ಸ್, ಮೈಸೂರು (ದೂರವಾಣಿ:0821-2524354)
ಪುಟ:501 ಬೆಲೆ: ರೂ.270

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X