ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.27ರಂದು ಅಮೆರಿಕನ್ನಡತಿಯರ ಎರಡು ಪುಸ್ತಕ ಬಿಡುಗಡೆ

By Super Admin
|
Google Oneindia Kannada News

Triveni Srinivasrao and Jyothi Mahadev
ಕನ್ನಡ ಸಾಹಿತ್ಯ ವಲಯದಲ್ಲಿ ಈಗಾಗಲೇ ಪರಿಚಿತವಿರುವ ಅಮೆರಿಕನ್ನಡತಿಯರಾದ ತ್ರಿವೇಣಿ ಶ್ರೀನಿವಾಸ್‌ರಾವ್ ಮತ್ತು ಜ್ಯೋತಿ ಮಹಾದೇವ್ ಪ್ರಥಮ ಬಾರಿಗೆ ಬೆಂಗಳೂರಿನ ಸಾಹಿತ್ಯ ಪ್ರೇಮಿಗಳಿಗೆ ಪ್ರಬಂಧ ಮತ್ತು ಕವನಗಳ ರಸದೌತಣ ಬಡಿಸಲಿದ್ದಾರೆ.

ಜುಲೈ ತಿಂಗಳ ಕೊನೆಯ ಭಾನುವಾರ (27ನೇ ತಾರೀಖು) ಬೆಳಗ್ಗೆ 10 ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಈ ಇಬ್ಬರ ಕೃತಿಗಳು ಬಿಡುಗಡೆಯಾಗಲಿವೆ. ಇವೆರಡರಲ್ಲಿ ತ್ರಿವೇಣಿ ಶ್ರೀನಿವಾಸ್ ಅವರ ಕೃತಿ ಅಮೆರಿಕದಲ್ಲಿ ಈಗಾಗಲೇ ಬಿಡುಗಡೆಯಾಗಿ ಜನಪ್ರಿಯತೆಯನ್ನು ಗಳಿಸಿದೆ.

"ತುಳಸಿಯಮ್ಮ" ಖ್ಯಾತಿಯ ತ್ರಿವೇಣಿ ಶ್ರೀನಿವಾಸರಾವ್ "ತುಳಸಿವನ"ದ ಘಮಲು ಕರ್ನಾಟಕದಾದ್ಯಂತ ಹಬ್ಬಿಸುವ ಹಂಬಲ ಹೊತ್ತಿದ್ದಾರೆ. ಅವರ ಈ ಪುಸ್ತಕದಲ್ಲಿನ ಅನೇಕ ಪ್ರಬಂಧಗಳು ದಟ್ಸ್‌ಕನ್ನಡ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿವೆ. ಮತ್ತೊಬ್ಬರು "ಸುಪ್ತದೀಪ್ತಿ" ಕಾವ್ಯನಾಮದ ಜ್ಯೋತಿ ಮಹಾದೇವ್ ತನ್ನ "ಭಾವಬಿಂಬ" ಕವನಸಂಕಲನಕ್ಕೆ ಕನ್ನಡಿ ಹಿಡಿಯಲಿದ್ದಾರೆ.

ನೀವೆಲ್ಲ ಅಲ್ಲಿಗೆ ಬರಬೇಕು- ಇವರಿಬ್ಬರ ಬೆನ್ನು ತಟ್ಟಲು, ಕೈ ಕುಲುಕಲು, ನೆತ್ತಿ ಸವರಿ ಹರಸಲು. ಒಂದೇ ವೇದಿಕೆಯಲ್ಲಿ ಇಬ್ಬರು ಸಾಹಿತ್ಯ ಸೋದರಿಯರ ಕಲ್ಪನೆಯ ನೌಕೆಗಳು ಓದುಗಭಿಯಾನ ಹೊರಡಲಿವೆ..

ಅಂದು ಇನ್ನೂ ಯಾರ್‍ಯಾರಿರುತ್ತಾರೆ? ಆ ವಿವರಗಳಿಗೆ ನಿಮ್ಮ ಕೌತುಕದ ಮರಿ ಗರಿಗೆದರಿ ಕಾದಿರಲಿ. ನೀವೂ ಬನ್ನಿ ನಿಮ್ಮ ಗೆಳೆಯರನ್ನೂ ಕರೆತನ್ನಿ.

ಮತ್ತೊಮ್ಮೆ ಪುಸ್ತಕಗಳು ಬಿಡುಗಡೆಯಾಗುವ ಸ್ಥಳ ಮತ್ತು ಸಮಯವನ್ನು ನಿಮ್ಮ ಡೈರಿಯಲ್ಲಿ ಗುರುತುಹಾಕಿಕೊಳ್ಳಿ.

ಸ್ಥಳ : ಸುಚಿತ್ರ ಫಿಲ್ಮ್ ಸೊಸೈಟಿ, 36, 9ನೇ ಮುಖ್ಯಬೀದಿ ಬಿ.ವಿ.ಕಾರಂತ ರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು - 560 070.
ದಿನಾಂಕ : 27ನೇ ಜುಲೈ 2008 (ಭಾನುವಾರ)
ಸಮಯ : ಬೆಳಿಗ್ಗೆ 10 ಗಂಟೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X